'ಕೆಜಿಎಫ್' ಸಿನಿಮಾಗಳ ಮೂಲಕ ಭಾರತದಾದ್ಯಂತ ಜನಪ್ರಿಯರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಬಹುಬೇಡಿಕೆ ನಿರ್ದೇಶಕರೆಂದ ಮೇಲೆ ಅವರ ಚಿತ್ರಗಳ ಮೇಲಿನ ಕುತೂಹಲ ಕೊಂಚ ಹೆಚ್ಚೇ ಅಲ್ಲವೇ?. ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 1' ಮತ್ತು ಚಾಪ್ಟರ್ 2ರ ಯಶಸ್ಸಿನ ನಂತರ ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಪಡೆದ ನಿರ್ದೇಶಕರು ಸದ್ಯ ಜೂನಿಯರ್ ಎನ್ಟಿಆರ್ ನಟನೆಯ ಚಿತ್ರದ ಮೇಲೆ ಗಮನ ಹರಿಸಿದ್ದಾರೆ.
2023ರಲ್ಲಿ 'ಸಲಾರ್' ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಈ ಚಿತ್ರ ಕೂಡ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಇದೀಗ, ಸೌತ್ ಸೂಪರ್ ಸ್ಟಾರ್ ಅಜಿತ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಅದು ಕೂಡ ಒಂದಲ್ಲ, ಎರಡು ಪ್ರಾಜೆಕ್ಟ್ಗಳಲ್ಲಿ ಈ ನಟ-ನಿರ್ದೇಶಕ ಜೋಡಿ ಸಹಕರಿಸಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಹೆಸರಾಂತ ನಟ-ನಿರ್ದೇಶಕರು ಎರಡು ಸಿನಿಮಾಗಳಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಗಳನ್ನು ದಕ್ಷಿಣದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಿಸಲಿದ್ದಾರೆ. ಸಲಾರ್ 2 ನಂತರ ಪ್ರಶಾಂತ್ ಅವರು ಅಜಿತ್‌ಗಾಗಿ ಸತತ ಎರಡು ಚಿತ್ರಗಳನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ. ಆದ್ರಿದು ಎಕೆ64 ಮತ್ತು ಎಕೆ65 (ಅಜಿತ್ ಅವರ ಮುಂದಿನ ಚಿತ್ರಗಳ ಸಂಖ್ಯೆ) ಎಂಬುದಿನ್ನು ಕನ್ಫರ್ಮ್ ಆಗಿಲ್ಲ. ಪ್ರಶಾಂತ್ ನಿರ್ದೇಶನದ ಸಿನಿಮಾಗಳಿಗೂ ಮುನ್ನ ಬೇರೆ ಚಿತ್ರಗಳೂ ಬರುವ ಸಾಧ್ಯತೆ ಇದೆ.
#AK and #PrashanthNeel are set to collaborate for two consecutive projects. Their second collaboration will mark the beginning of #PrashanthCinematicUniverse with climax leading to #KGF3. 🔥🔥🔥
— A ʀ ᴀ ᴠ ッ (@Araviii_kohlii_) July 24, 2024
OG (Billa , Mankatha, villain) Thala is backkk 🔥🔥🔥🔥pic.twitter.com/mbm8iEs4Vy
ಇದನ್ನೂ ಓದಿ: ಸೆನ್ಸಾರ್‌ನಲ್ಲಿ 'ಭೀಮ' ಪಾಸ್; ಆಗಸ್ಟ್ನಲ್ಲಿ ದುನಿಯಾ ವಿಜಯ್ ಸಿನಿಮಾ ತೆರೆಗೆ - Bheema Cinema
ವರದಿಗಳ ಪ್ರಕಾರ, ಕಳೆದ ತಿಂಗಳು 'ವಿದಾಮುಯಾರ್ಚಿ' ಸಿನಿಮಾ ಶೆಡ್ಯೂಲ್ ಬ್ರೇಕ್ ಸಮಯದಲ್ಲಿ ಅಜಿತ್ ಮತ್ತು ಪ್ರಶಾಂತ್ ಭೇಟಿಯಾಗಿದ್ದರು. ಕೆಜಿಎಫ್ ನಿರ್ದೇಶಕರು ಅಜಿತ್ ಬಳಿ ಮೂರು ವರ್ಷಕ್ಕಿಂತ ಹೆಚ್ಚಿನ ಸಮಯ ಕೋರಿದ್ದರು. ಈ ಜೋಡಿ ಕಾಂಬಿನೇಶನ್ನಲ್ಲಿ ಮೊದಲು ಎಕೆ 64 (ತಾತ್ಕಾಲಿಕ ಶೀರ್ಷಿಕೆ) ಬರಬಹುದು. 2025ರಲ್ಲಿ ಸೆಟ್ಟೇರಿ, 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅದಾಗ್ಯೂ, ಅವರ ಎರಡನೇ ಸಿನಿಮಾ ಎಕೆ 65 ಅಥವಾ 66 (ಯಾವುದನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ) ರಲ್ಲಿ ಪ್ರಶಾಂತ್ ನೀಲ್ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ರಚಿಸಲಿದ್ದಾರಂತೆ.
ಇನ್ನೂ ಕೆಲ ವರದಿಗಳ ಪ್ರಕಾರ, ಈ ಮೇಲಿನ ಎರಡು ಚಿತ್ರಗಳಲ್ಲಿ ಒಂದರ ಕ್ಲೈಮ್ಯಾಕ್ಸ್ ಕೆಜಿಎಫ್ 3ಗೆ ನಾಂದಿ ಹಾಡಲಿದೆ. ಅಜಿತ್ ಅವರ ಪಾತ್ರ ಪ್ರಶಾಂತ್ ನೀಲ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಎಲ್ಲಕ್ಕಿಂತ ದೊಡ್ಡ ಪಾತ್ರವಾಗಲಿದೆ ಎಂದು ಹೇಳಲಾಗಿದೆ. ಮುಂಬರುವ 'ಕೆಜಿಎಫ್'ನಲ್ಲಿ ಅಜಿತ್ ಮತ್ತು ಯಶ್ ಸ್ಕ್ರೀನ್ ಹಂಚಿಕೊಳ್ಳುತ್ತಾರೆಂಬುದನ್ನು ಈ ವರದಿಗಳು ಸೂಚಿಸಿವೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಬರಬೇಕಿದ್ದು, ಮುಂದಿನ ವರ್ಷಾರಂಭ ಆಗುವ ನಿರೀಕ್ಷೆಗಳಿವೆ.