ETV Bharat / entertainment

ಒಂದು ವಾರದಲ್ಲಿ ವಿಶ್ವದಾದ್ಯಂತ ₹700 ಕೋಟಿ ಕಲೆಕ್ಷನ್​ ಮಾಡಿದ 'ಕಲ್ಕಿ', ಭಾರತದಲ್ಲೆಷ್ಟು? - Kalki Collection - KALKI COLLECTION

'ಕಲ್ಕಿ 2898 ಎಡಿ' ಕೇವಲ 7 ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂ., ಮತ್ತು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ. ಸಮೀಪಿಸಿದೆ.

Kalki 2898 AD poster
ಕಲ್ಕಿ 2898 ಎಡಿ ಪೋಸ್ಟರ್ (Nag Ashwin X handle)
author img

By ETV Bharat Karnataka Team

Published : Jul 4, 2024, 11:13 AM IST

Updated : Jul 4, 2024, 12:20 PM IST

ಕಳೆದ ಗುರುವಾರ ಚಿತ್ರಮಂದಿರ ಪ್ರವೇಶಿಸಿದ್ದ ಮೈಥೋಲಾಜಿಕಲ್​ ಸೈನ್ಸ್ ಫಿಕ್ಷನ್​​ 'ಕಲ್ಕಿ 2898 ಎಡಿ' ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇವಲ ಏಳು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂ. ಕಲೆಕ್ಷನ್​ ಮಾಡಿ ಎಲ್ಲರ ಹುಬ್ಬೇರಿಸಿದೆ. ಸದ್ಯ ಬಹುತೇಕರ ಗಮನ 1,000 ಕೋಟಿ ರೂ.ನ ಕ್ಲಬ್​ ಮೇಲಿದೆ. ಗಲ್ಲಾಪೆಟ್ಟಿಗೆಯಲ್ಲಿನ ಸಂಪಾದನೆಯನ್ನು 'ಕಲ್ಕಿ 2898 ಎಡಿ' ಹಿಂದಿರುವ ವೈಜಯಂತಿ ಮೂವೀಸ್ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇನ್ನು, ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 400 ಕೋಟಿ ರೂಪಾಯಿಯ ಸಮೀಪದಲ್ಲಿದ್ದು, ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಸೇರಿ ಚಿತ್ರದಲ್ಲಿರುವ ಬಹುತಾರಾಗಣದ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾ ತನ್ನ ಏಳನೇ ದಿನ (ಬುಧವಾರ), ಭಾರತದಲ್ಲಿ ಸುಮಾರು 23.2 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮಂಗಳವಾರದ ಗಳಿಕೆಗಿಂತ ಶೇ.14.23ರಷ್ಟು ಕಡಿಮೆಯಿದೆ. ಮೊದಲ ದಿನ 95.3 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ - 59.3 ಕೋಟಿ ರೂ., ಮೂರನೇ ದಿನ - 66.2 ಕೋಟಿ ರೂ., ನಾಲ್ಕನೇ ದಿನ - 88.2 ಕೋಟಿ ರೂ., ಐದು ಮತ್ತು ಆರನೇ ದಿನಗಳಲ್ಲಿ ಕ್ರಮವಾಗಿ 34.15 ಕೋಟಿ ರೂ. ಮತ್ತು 27.05 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ​​'ಕಲ್ಕಿ 2898 ಎಡಿ' ಸುಮಾರು 393.4 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ನೀಡಿದೆ. ಚಿತ್ರದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ನಾಗ್ ಅಶ್ವಿನ್, ಪ್ರಭಾಸ್ ಅವರ ತೆರೆಮರೆಯ ಫೋಟೋ ಹಂಚಿಕೊಂಡು ಸ್ಟಾರ್ ನಟನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ಇದಕ್ಕೆಲ್ಲಾ ಕ್ಯಾಶುವಲ್​ ಆಗಿ ಕುಳಿತಿರುವ ಈ ವ್ಯಕ್ತಿಯೇ ಕಾರಣ. ಈ ಯುಗದ ದೊಡ್ಡ ಬಾಕ್ಸ್ ಆಫೀಸ್ ಸ್ಟಾರ್. ಅವರು ವಿಶ್ವಾಸ ತುಂಬಿದರು. ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಪ್ರತಿಯೊಬ್ಬರ ಡಾರ್ಲಿಂಗ್, ನಮ್ಮ ಭೈರವ, ಈಗ ವಿಶ್ವದ K____" ಎಂದು ನಾಗ್​​ ಅಶ್ವಿನ್ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಸಿಕಂದರ್'​ ಪೋಸ್ಟರ್ ತಯಾರಿಸಿದ ಪಾಕಿಸ್ತಾನದ ಸಲ್ಮಾನ್ ಖಾನ್ ಅಭಿಮಾನಿ - Salman Khan Sikandar Poster

ನಾಗ್ ಅಶ್ವಿನ್​​ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ, ಬಹುಬೇಡಿಕೆ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಭ್​​​ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ, ಮಾಳವಿಕಾ ನಾಯರ್, ಮೃಣಾಲ್ ಠಾಕೂರ್ ಮತ್ತು ಅನ್ನಾ ಬೆನ್ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಐಎಂಡಿಬಿ ನಲ್ಲಿ 8/10 ರೇಟಿಂಗ್ ಹೊಂದಿರುವ ಕಲ್ಕಿ 2898 ಎಡಿ ಕಳೆದ ಗುರುವಾರ, ಜೂನ್ 27 ರಂದು ಜಗತ್ತಿನಾದ್ಯಂತ ಚಿತ್ರಮಂದಿರ ಪ್ರವೇಶಿಸಿತು. ಪ್ಯಾನ್​ ಇಂಡಿಯಾ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ.

ಇದನ್ನೂ ಓದಿ: ಮಗಳು ಸೋನಾಕ್ಷಿ ಮದುವೆ ಟೀಕಿಸಿದವರ ಬಗ್ಗೆ ಶತ್ರುಘ್ನ​​ ಸಿನ್ಹಾ ಹೇಳಿದ್ದೇನು? - Shatrughan Sinha

Last Updated : Jul 4, 2024, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.