ETV Bharat / entertainment

ಸರ್ಕಾರಿ ಗೌರವದೊಂದಿಗೆ ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ಅಂತ್ಯಸಂಸ್ಕಾರ

ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ಅವರ ಅಂತ್ಯಸಂಸ್ಕಾರ ವರ್ಲಿಯಲ್ಲಿರುವ ಹಿಂದೂ ಸ್ಮಶಾನದಲ್ಲಿ ನೆರವೇರಿತು.

Pankaj Udhas Funeral
ಪಂಕಜ್ ಉಧಾಸ್ ಅಂತ್ಯಸಂಸ್ಕಾರ
author img

By ETV Bharat Karnataka Team

Published : Feb 27, 2024, 4:53 PM IST

Updated : Feb 27, 2024, 5:07 PM IST

ಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ಅವರು ಅನಾರೋಗ್ಯ ಹಿನ್ನೆಲೆ ಸೋಮವಾರದಂದು ನಿಧನರಾದರು. ಪದ್ಮಶ್ರೀ ಪುರಸ್ಕೃತ ಗಾಯಕನ ಅಂತಿಮ ವಿಧಿ ವಿಧಾನ ಇಂದು ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಸಂಬಂಧಿಕರು ಮತ್ತು ಸ್ನೇಹಿತರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮುಂಬೈನ ವರ್ಲಿಯಲ್ಲಿರುವ ಹಿಂದೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಿತು.

ವೀರ ಗೌರವದೊಂದಿಗೆ ಅಂತಿಮ ವಿಧಿವಿದಾನಗಳು ಜರುಗಿದವು. ತ್ರಿವರ್ಣ ಧ್ವಜದಿಂದ ಹೊದಿಸಲಾದ ಅವರ ಪಾರ್ಥಿವ ಶರೀರವನ್ನು, ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಮುಂಬೈನ ಹಿಲ್ ಸೈಡ್ 6ಎನಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಬ್ಯಾಂಡ್ ಮತ್ತು ಪಡೆಗಳ ಗೌರವದೊಂದಿಗೆ ಮೆರವಣಿಗೆ ನಡೆಯಿತು. ಈ ಕ್ಷಣಕ್ಕೆ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಉಧಾಸ್ ಸೋಮವಾರ ತಮ್ಮ 72ನೇ ವಯಸ್ಸಿಗೆ ಕೊನೆಯುಸಿರೆಳೆದರು. ಜಾಗತಿಕವಾಗಿ ಹೆಸರು ಗಳಿಸಿದ್ದ ಇವರು ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದ್ರೆ ನಿನ್ನೆ ಪತ್ನಿ ಫರೀದಾ ಮತ್ತು ಇಬ್ಬರು ಮಕ್ಕಳಾದ ರೀವಾ ಮತ್ತು ನಯಾಬ್ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಈ ಸುದ್ದಿ ತಿಳಿದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.

ನಿಧನದ ಸುದ್ದಿ ಹೊರಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕೇಂದ್ರ ನಾಯಕರು, ವಿವಿಧ ಕ್ಷೇತ್ರಗಳ ದಿಗ್ಗಜರು ಸಾಮಾಜಿಕ ಜಾಲತಾಣ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಉಧಾನ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಪಂಕಜ್ ಉದಾಸ್ ಅವರ ನಿಧನ ಸಂಗೀತ ಕ್ಷೇತ್ರಕ್ಕೆ ಎಂದಿಗೂ ಭರಿಸಲಾಗದ ನಷ್ಟ ಎಂದು ತಿಳಿಸಿದ್ದರು. ಹಿರಿಯ ನಟ ಅನುಪಮ್ ಖೇರ್ ಕೂಡ ಗಾಯಕ ಪಂಕಜ್ ಉಧಾಸ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ಇನ್ನಿಲ್ಲ..

ಪಂಕಜ್ ಉಧಾಸ್ 1951ರ ಮೇ 17ರಂದು ಗುಜರಾತ್‌ನ ಜೆಟ್‌ಪುರದಲ್ಲಿ ಜನಿಸಿದರು. ಗಜಲ್‌ ಬರೆಯುವುದರ ಜೊತೆಗೆ, ಸಿನಿಮಾ ಕೆಲಸಕ್ಕಾಗಿ ಜನಪ್ರಿಯರಾಗಿದ್ದರು. ಚಿತ್ತಿ ಆಯಿ ಹೈ, ಚಾಂದನಿ ರಾತ್ ಮೇ, ನಾ ಕಜ್ರೆ ಕಿ ಧಾರ್, ಔರ್ ಅಹಿಸ್ತಾ ಕಿಜಿಯೆ ಬಾತೇ, ಏಕ್ ತರಫ್ ಉಸ್ಕಾ ಘರ್ ಮತ್ತು ಥೋಡಿ ಥೋಡಿ ಪಿಯಾ ಕರೋ ಸೇರಿದಂತೆ ಕೆಲ ಹಲವು ಜನಪ್ರಿಯ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ನಾಮ್, ಸಾಜನ್ ಮತ್ತು ಮೊಹ್ರಾ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಕೆಲಸ ಮಾಡಿದ್ದಾರೆ. ತಮ್ಮ ಅಸಾಧಾರಣ ಕೊಡುಗೆಗಾಗಿ 2006ರಲ್ಲಿ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ವಿಜಯ್​​ ದೇವರಕೊಂಡ ಜೊತೆಗಿನ ಡೇಟಿಂಗ್​ ವದಂತಿಗೆ ತುಪ್ಪ ಸುರಿದರಾ ರಶ್ಮಿಕಾ?

Last Updated : Feb 27, 2024, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.