ETV Bharat / entertainment

ಆಸ್ಕರ್​​ ಪ್ರಶಸ್ತಿ ಸಮಾರಂಭ: ಲೈವ್​ ವೀಕ್ಷಣೆಯ ಸಮಯ ಯಾವುದು? - Oscars 2024

ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್​​ ಪ್ರಶಸ್ತಿಗಳ ಪ್ರದಾನ ಸಮಾರಂಭವು ಮಾರ್ಚ್ 11ರಂದು ಜರುಗಲಿದೆ.

oscars-2024-how-and-when-to-watch-the-96th-academy-awards-live-in-india
ಆಸ್ಕರ್​​ ಪ್ರಶಸ್ತಿ ಸಮಾರಂಭ: ಲೈವ್​ ವೀಕ್ಷಣೆಯ ಸಮಯ ಯಾವುದು
author img

By ETV Bharat Karnataka Team

Published : Mar 9, 2024, 11:01 PM IST

ಲಾಸ್ ಏಂಜಲೀಸ್: ಜಗತ್ತಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳು ಎಂದರೆ ಆಸ್ಕರ್​​ ಪ್ರಶಸ್ತಿಗಳ ಪ್ರದಾನ ಸಮಾರಂಭವು ಮಾರ್ಚ್ 11ರಂದು ನಡೆಯಲಿದೆ. ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಜರುಗಲಿದೆ. ಭಾರತದ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 4 ಗಂಟೆಗೆ ಈ ಸಮಾರಂಭ ಆರಂಭವಾಗಲಿದೆ.

ಇದು 96ನೇ ಅಕಾಡೆಮಿ ಪ್ರಶಸ್ತಿಗಳ ಪ್ರದಾನ ಸಮಾರಂಭವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಭಾರತದ ಸ್ಪರ್ಧಿಗಳ ಪಟ್ಟಿ ಸಾಧಾರಣವಾಗಿದೆ. ಆದಾಗ್ಯೂ, ಎಲ್ಲರ ಕಣ್ಣುಗಳು 'ಟು ಕಿಲ್ ಎ ಟೈಗರ್‌' ಸಾಕ್ಷ್ಯಚಿತ್ರದ ಮೇಲೆ ಇವೆ. ಯಾಕೆಂದರೆ, ಭಾರತ ಸಂಜಾತ ಕೆನಡಾದ ಚಲನಚಿತ್ರ ನಿರ್ಮಾಪಕಿ ನಿಶಾ ಪಹುಜಾ ಇದನ್ನು ನಿರ್ದೇಶಿಸಿದ್ದಾರೆ.

ಮಾರ್ಚ್ 11ರ ಸೋಮವಾರದಂದು ಮುಂಜಾನೆ 4 ಗಂಟೆಗೆ ಆಸ್ಕರ್‌ ಕಾರ್ಯಕ್ರಮ ಶುರುವಾಗಲಿದೆ. ಭಾರತದಲ್ಲಿ ಸ್ಟಾರ್ ಮೂವೀಸ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಮುಂಜಾನೆ 4 ಗಂಟೆಗೆ ಸಮಾರಂಭದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಅಲ್ಲದೇ, ಸ್ಟಾರ್ ಮೂವೀಸ್ ರಾತ್ರಿ 8.30ಕ್ಕೆ ಕಾರ್ಯಕ್ರಮವನ್ನು ಮರು ಪ್ರಸಾರ ಮಾಡಲಿದೆ.

  • " class="align-text-top noRightClick twitterSection" data="">

ಡಾಕ್ಯುಮೆಂಟರಿ ಫೀಚರ್ ಫಿಲ್ಮ್ ವಿಭಾಗದಲ್ಲಿ 'ಟು ಕಿಲ್ ಎ ಟೈಗರ್‌' ಗಮನ ಸೆಳೆದಿದೆ. ಹುಲಿಯ ಕ್ರೂರ ದಾಳಿಯ ನಂತರ ತಮ್ಮ ಮಗಳಿಗೆ ನ್ಯಾಯಕ್ಕಾಗಿ ಹೋರಾಟ ಮಾಡಿದ ಜಾರ್ಖಂಡ್‌ನ ಕುಟುಂಬದ ಪ್ರಯಾಣವನ್ನು ಈ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಆದ್ದರಿಂದ ಆಸ್ಕರ್​​ಗಾಗಿ ಭಾರತೀಯ ಅಭಿಮಾನಿಗಳು ಸಹ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಈ ವರ್ಷ ಜಿಮ್ಮಿ ಕಿಮ್ಮೆಲ್ ನಾಲ್ಕನೇ ಬಾರಿಗೆ ಹೋಸ್ಟ್ ಆಗಿ ಮರಳಿರಲಿದ್ದಾರೆ. ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ, ದೇವ್ ಪಟೇಲ್ ಮತ್ತು ಮಿಂಡಿ ಕಾಲಿಂಗ್ ಅವರಂತಹ ಪ್ರಮುಖ ಗಣ್ಯರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಾರೆ. ಸೂಪರ್​ ಹಿಟ್​​ 'ಓಪನ್‌ಹೈಮರ್' ಸಿನಿಮಾ 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಅತ್ಯುತ್ತಮ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯ ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್​​ 2024: ವಿಜೇತರು ಯಾರಾಗಬಹುದು, ನಿಮ್ಮ ಊಹೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.