ಲಾಸ್ ಏಂಜಲೀಸ್: ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ 96ನೇ 'ಆಸ್ಕರ್' (Oscars 2024) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ. ಈಗಾಗಲೇ ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಘೋಷಿಸಲಾಗಿದೆ. ಯಾವ ವಿಭಾಗಗಳಲ್ಲಿ ಯಾರು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಥ್ರಿಲ್ಲರ್ ಸಿನಿಮಾ 'ಓಪನ್‌ಹೈಮರ್' ಅನ್ನು ಪ್ರದರ್ಶಿಸಲಾಯಿತು. ಇದು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 'ಪೂವರ್ ಥಿಂಗ್ಸ್' ಸಿನಿಮಾ ಕೂಡ ಕೆಲವು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
- ಅತ್ಯುತ್ತಮ ಚಿತ್ರ: ಓಪನ್‌ಹೈಮರ್
- ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)
- ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಓಪನ್‌ಹೈಮರ್)
- ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಓಪನ್‌ಹೈಮರ್)
- ಅತ್ಯುತ್ತಮ ಪೋಷಕ ನಟಿ: ಡ್ವೇನ್ ಜೋ ರಾಂಡೋಲ್ಫ್ (ದಿ ಹೋಲ್ಡೋವರ್ಸ್)
- ಅತ್ಯುತ್ತಮ ಛಾಯಾಗ್ರಹಣ: ಓಪನ್‌ಹೈಮರ್
- ಅತ್ಯುತ್ತಮ ಸಾಕ್ಷ್ಯಚಿತ್ರ ಚಲನಚಿತ್ರ: 20 ಡೇಸ್ ಇನ್ ಮಾರಿಯೋಪೋಲ್
- ಅತ್ಯುತ್ತಮ ಕೇಶವಿನ್ಯಾಸ ಮತ್ತು ಮೇಕಪ್: ನಾಡಿಯಾ ಸ್ಟೇಸಿ, ಮಾರ್ಕ್ ಕೋಲಿಯರ್ (ಪೂವರ್ ಥಿಂಗ್ಸ್)
- ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ಪ್ಲೇ: ಕಾರ್ಡ್ ಜೆಫರ್‌ಪುನ್ (ಅಮೇರಿಕನ್ ಫಿಕ್ಷನ್)
- ಅತ್ಯುತ್ತಮ ಒರಿಜನ್ ಸ್ಕ್ರೀನ್ಪ್ಲೇ: ಜಸ್ಟಿನ್ ಟ್ರಿಟ್, ಆರ್ಥರ್ ಹ್ಯಾರಿ (ಅನ್ಯಾಟಮಿ ಆಫ್ ಎ ಫಾಲ್)
- ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ದಿ ಬಾಯ್ ಮತ್ತು ಹಿರನ್
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಹೋಲಿ ವೆಡ್ಡಿಂಗ್ಟನ್ (ಪೂವರ್ ಥಿಂಗ್ಸ್)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಜೇಮ್ಸ್ ಪ್ರೈಸ್, ಶೋನಾ ಹೀತ್ (ಪೂವರ್ ಥಿಂಗ್ಸ್)
- ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ: ದಿ ಝೋನ್ ಆಫ್ ಇಂಟರೆಸ್ಟ್
- ಅತ್ಯುತ್ತಮ ಸಂಕಲನ: ಜೆನ್ನಿಫರ್ ಲೇಮ್ (ಓಪನ್‌ಹೈಮರ್)
- ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್: ಗಾಡ್ಜಿಲ್ಲಾ ಮೈನಸ್ ಒನ್
- ಅತ್ಯುತ್ತಮ ಸಾಕ್ಷ್ಯಚಿತ್ರ (ಚಿಕ್ಕ ವಿಷಯ): ದಿ ಲಾಸ್ಟ್ ರಿಪೇರಿ ಶಾಪ್
- ಅತ್ಯುತ್ತಮ ಒರಿಜನ್ ಬ್ಯಾಗ್ರೌಂಡ್ ಸ್ಕೋರ್: ಓಪನ್‌ಹೈಮರ್
- ಅತ್ಯುತ್ತಮ ಧ್ವನಿ: ಟಾರ್ನ್ ವಿಲ್ಲರ್ಸ್, ಜಾನಿ ಬರ್ನ್ (ದಿ ಝೋನ್ ಆಫ್ ಇಂಟರೆಸ್ಟ್)
- ಅತ್ಯುತ್ತಮ ಒರಿಜನ್ ಸಾಂಗ್: ವಾಸ್ ಐ ಮೇಡ್ ಫಾರ್ (ಬಾರ್ಬಿ)
- ಲೈವ್ ಆಕ್ಷನ್ ಕಿರುಚಿತ್ರ: ದಿ ವಂಡರ್ಫುಲ್ ಸ್ಟೋರಿ ಆಫ್ ಹೆನ್ರಿ ಶುಗರ್
'ಓಪನ್‌ಹೈಮರ್' ಚಿತ್ರಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಸೇರಿದಂತೆ 7 ಆಸ್ಕರ್ ಪ್ರಶಸ್ತಿಗಳು: ಹಾಲಿವುಡ್ ಹೀರೋ ಸಿಲಿಯನ್ ಮರ್ಫಿ 96ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟನಾಗಿ ಆಯ್ಕೆಯಾಗಿದ್ದಾರೆ. ಓಪನ್ ಹೈಮರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಮರ್ಫಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಓಪನ್‌ಹೈಮರ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಗಮನಿಸಬೇಕಾದ ವಿಷಯವೇನೆಂದ್ರೆ, ಕ್ರಿಸ್ಟೋಫರ್ ನೋಲನ್ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಇದೇ ಮೊದಲು.
ಎಮ್ಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದ್ದಾರೆ. ಹಾಲಿವುಡ್ ಚಿತ್ರ ಪೂರ್ ಥಿಂಗ್ಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಓಪನ್‌ಹೈಮರ್‌ನ ಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಓಪನ್ ಹೈಮರ್ ಆಸ್ಕರ್‌ನ ಏಳು ವಿಭಾಗಗಳಲ್ಲಿ (ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಒರಿಜನ್ ಬ್ಯಾಗ್ರೌಂಡ್ ಸ್ಕೋರ್, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಚಲನಚಿತ್ರ ಸಂಕಲನ) ಪ್ರಶಸ್ತಿಗಳನ್ನು ಗೆದ್ದಿದೆ.
ಇದನ್ನೂ ಓದಿ: ಈ ಮುತ್ತಿನಂಥ ಮಾತಿಗೆ 'ವಿಶ್ವಸುಂದರಿ' ಕಿರೀಟ ಗೆದ್ದ ಕ್ರಿಸ್ಟಿನಾ ಪಿಸ್ಕೋವಾ!