ಹೈದರಾಬಾದ್: ವೈವಿಧ್ಯಮಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮನರಂಜಿಸುತ್ತಿರುವ ನಟ ವರುಣ್ ತೇಜ್ಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಡಿಸೆಂಬರ್ಗೆ ವರುಣ್ ತೇಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕ ಪೂರೈಸಲಿದೆ. 2014ರಲ್ಲಿ ಮುಕುಂದ ಚಿತ್ರದ ಮೂಲಕ ಸಿನಿರಂಗ ಪ್ರವೇಶಿದ ವರುಣ್ ತೇಜ್, ಇದೀಗ ಆಪರೇಷನ್ ವ್ಯಾಲಂಟೈನ್ ಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ವರುಣ್ ತೇಜ್ ಅವರ ಬಹುನಿರೀಕ್ಷಿತ ಚಿತ್ರ ಆಪರೇಷನ್ ವ್ಯಾಲಂಟೈನ್ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಸಹೋದರನ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಉದ್ಯಮದಲ್ಲಿ ತಮ್ಮದೇ ಹಾದಿಯನ್ನು ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಮಿಸಿದ್ದ ಮೆಗಾಸ್ಟಾರ್, ಆಪರೇಷನ್ ವ್ಯಾಲಂಟೈನ್ ತಂಡದ ಪ್ರಯತ್ನವನ್ನು ಹೊಗಳಿದರು. ಚಿತ್ರವನ್ನು ಶಕ್ತಿ ಪ್ರತಾಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ಆಗಸದಲ್ಲಿ ಸಾಹಸ ದೃಶ್ಯ ಮಾಡಿರುವ ಚಿತ್ರತಂಡದ ಧೈರ್ಯಕ್ಕೆ ಮೆಚ್ಚಬೇಕು ಎಂದು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಸಂಪೂರ್ಣ ಚಿತ್ರತಂಡ ಉಪಸ್ಥಿತರಿದ್ದು, ಚಿತ್ರದ ನಟಿ ಮಾನುಷಿ ಚಿಲ್ಲರ್ ಅನುಪಸ್ಥಿತಿ ಕಾಡಿತು.
- " class="align-text-top noRightClick twitterSection" data="">
ವರುಣ್ ಅಭಿರುಚಿಯ ವಿಭಿನ್ನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ವರುಣ್ ಚಿತ್ರದ ಆಯ್ಕೆ ಮತ್ತು ಸಾಮರ್ಥ್ಯಗಳು ಎಲ್ಲಾ ಪ್ರಕಾರವನ್ನು ಹೊಂದಿದೆ. ಮುಕುಂದದಿಂದ ಫಿದಾ, ಕಂಚೆ, ಗಡ್ಡಲಕೊಂಡ ಗಣೇಶ್ ಮತ್ತು ಇದೀಗ ಆಪರೇಷನ್ ವ್ಯಾಲಂಟೈನ್ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದರು.
ಇದೇ ವೇಳೆ ತಮ್ಮ ಸೋದರಳಿಯನ ಕಾಲೆಳೆದ ಅವರು, ಚಿತ್ರಕಥೆಯ ಬಗ್ಗೆ ಚರ್ಚಿಸುವಾಗ ಲಾವಣ್ಯ ತ್ರಿಪಾಠಿ-ವರುಣ್ ಮದುವೆಯ ಬಗ್ಗೆ ತಮಾಷೆ ಮಾಡಿದರು. ಇದೇ ವೇಳೆ ಆಪರೇಷನ್ ವ್ಯಾಲೆಂಟೈನ್ ಮತ್ತು ಟಾಪ್ ಗನ್ ಮೇವರಿಕ್ ನಡುವೆ ಹೋಲಿಕೆಗಳನ್ನು ಮಾಡಿದರು. ತೆಲುಗು ಚಿತ್ರದಲ್ಲಿ ಆಗಸದಲ್ಲಿ ಮೊದಲ ಬಾರಿ ಸಾಹಸ ದೃಶ್ಯ ಹೊಂದಿರುವ ಚಿತ್ರ ಇದಾಗಿದೆ ಎಂದು ತಿಳಿಸಿದರು. ಈ ಚಿತ್ರ ಫೆ. 14ರ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವುದಾಗಿದೆ.
- " class="align-text-top noRightClick twitterSection" data="">
ನಿರ್ದೇಶಕ ಶಕ್ತಿ ಪ್ರತಾಪ್ ಸಿಂಗ್ ಸಮರ್ಪಣೆಯನ್ನು ಮೆಚ್ಚಿದ ಅವರು, ವೈಮಾನಿಕ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಅವರ ಕಿರುಚಿತ್ರವು ವಾಯುಪಡೆಯ ಅಧಿಕಾರಿಗಳನ್ನು ಹೇಗೆ ಸೆಳೆಯಿತು ಎಂದು ತಿಳಿಸಿದರು. ಸಿಂಗ್ ತೆಲುಗು ಚಿತ್ರೋದ್ಯಮದ ಯುವ ಪ್ರತಿಭೆ ಸೇರಿದಂತೆ ಅನೇಕರನ್ನು ತಮ್ಮ ಕೆಲಸದ ಮೂಲಕ ಪ್ರೇರೇಪಿಸಿದ್ದಾರೆ ಎಂದರು.
ಇದನ್ನೂ ಓದಿ: 100 ಕೋಟಿ ಆಫರ್ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?