ETV Bharat / entertainment

'ಓದೆಲಾ ರೈಲ್ವೆ ಸ್ಟೇಷನ್​ 2': ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ವಶಿಷ್ಠ ಸಿಂಹ ಹೊಸ ಸಿನಿಮಾ - Thamannaah Bhatia

ಟಾಲಿವುಡ್​ನಲ್ಲಿ ನಾಯಕನಾಗಿ ವಶಿಷ್ಠ ಸಿಂಹ ಎರಡನೇ ಸಿನಿಮಾಗೆ ಸಿದ್ಧವಾಗಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ವಾರಾಣಸಿಯಲ್ಲಿ ನಡೆಯಿತು.

Odela Railway Station 2 Muhurta Program
ಒದೆಲಾ ರೈಲ್ವೆ ಸ್ಟೇಷನ್​ 2 ಮುಹೂರ್ತ ಕಾರ್ಯಕ್ರಮ
author img

By ETV Bharat Karnataka Team

Published : Mar 4, 2024, 11:04 AM IST

ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಸಿಂಹ ಮಿಂಚುತ್ತಿದ್ದಾರೆ. ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ, 'ಓದೆಲಾ ರೈಲ್ವೆ ಸ್ಟೇಷನ್' ಮೂಲಕ ನಾಯಕನಾಗಿಯೂ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದರು. 2022ರಲ್ಲಿ ವಶಿಷ್ಠ ಸಿಂಹ ನಾಯಕನಾಗಿ ಅಭಿನಯಿಸಿದ್ದ 'ಓದೆಲಾ ರೈಲ್ವೆ ಸ್ಟೇಷನ್​' ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿ, ಅದ್ಭುತ ಪ್ರತಿಕ್ರಿಯೆ ಗಳಿಸಿತ್ತು.

Odela Railway Station 2 Muhurta Program
ಒದೆಲಾ ರೈಲ್ವೆ ಸ್ಟೇಷನ್​ 2 ಮುಹೂರ್ತ ಕಾರ್ಯಕ್ರಮ

ಈ ಚಿತ್ರದಲ್ಲಿ ವಸಿಷ್ಠ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದರು. ಇದುವರೆಗೂ ಮಾಡಿರದ ವಿಶಿಷ್ಠ ಪಾತ್ರ ಅದಾಗಿತ್ತು. ಇದೀಗ 'ಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2' ತಯಾರಾಗುತ್ತಿದೆ. ಇದರಲ್ಲೂ ವಶಿಷ್ಠ ಸಿಂಹ ಅವರು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ಉತ್ತರ ಪ್ರದೇಶದ ಕಾಶೀ ವಿಶ್ವನಾಥನ ಕ್ಷೇತ್ರ ವಾರಾಣಸಿಯಲ್ಲಿ ನೆರವೇರಿದೆ. ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್​ನ ಶೂಟಿಂಗ್ ಮಾರ್ಚ್​ 1ರಿಂದಲೇ ಪ್ರಾರಂಭವಾಗಿದೆ.

ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮದ ವಿಡಿಯೋ ಗ್ಲಿಂಪ್ಸ್‌ಗಳಿವೆ. ತಮನ್ನಾ, ವಸಿಷ್ಠ ಸಿಂಹ ಫೋಟೋಗೆ ಪೋಸ್ ಕೊಟ್ಟಿದ್ದು, ಇದರಲ್ಲಿ ಹರಿಪ್ರಿಯ ಕೂಡ ಇದ್ದಾರೆ. ತಮನ್ನಾ ಅವರು ವಾರಾಣಸಿಯಲ್ಲಿ ತೆಗೆದ ತಮ್ಮ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

'ಓದೆಲಾ ರೈಲ್ವೆ ಸ್ಟೇಷನ್' ಮೊದಲ ಭಾಗದಲ್ಲಿ ವಶಿಷ್ಠ ಸಿಂಹ ಜೊತೆಗೆ ನಾಯಕಿಯಾಗಿ ನಟಿ ಹೆಬಾ ಪಟೇಲ್ ಅಭಿನಯಿಸಿದ್ದರು. ಆದರೆ ಈಗ ಎರಡನೇ ಭಾಗದಲ್ಲಿ ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ ತೆರೆ ಹಂಚಿಕೊಳ್ಳಲಿದ್ದಾರೆ. ಹಾಗಂತ ಹೆಬಾ ಪಟೇಲ್ ಇಲ್ಲ ಅಂತಲ್ಲ. ಅವರೂ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಂ ವರ್ಕ್ ಬ್ಯಾನರ್‌ನಡಿ ಡಿ.ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶೋಕ ತೇಜ 'ಓದೆಲಾ ರೈಲ್ವೆ ಸ್ಟೇಷನ್' ಸೀಕ್ವೆಲ್​ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಹಣ, ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತವಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥನ ದರ್ಶನ ಪಡೆದ ನಟಿ ತಮನ್ನಾ ಭಾಟಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.