ಇಂದು ದಕ್ಷಿಣ ಚಿತ್ರರಂಗದ ದಿ. ನಟ - ರಾಜಕಾರಣಿ ನಂದಮೂರಿ ತಾರಕ ರಾಮರಾವ್ ಅವರ 101ನೇ ಜನ್ಮದಿನ. ಈ ಹಿನ್ನೆಲೆ, ಪುತ್ರ ನಂದಮೂರಿ ಬಾಲಕೃಷ್ಣ, ಮೊಮ್ಮಕ್ಕಳಾದ ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಅವರು ಎನ್‌ಟಿಆರ್ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಹೈದರಾಬಾದ್ನ ಎನ್‌ಟಿಆರ್ ಘಾಟ್‌ನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಪುಷ್ಪ ನಮನ ಸಲ್ಲಿಸಿ, ಕೆಲ ಹೊತ್ತು ಕುಳಿತು ಪ್ರಾರ್ಥಿಸಿದರು.
ನಂದಮೂರಿ ತಾರಕ ರಾಮರಾವ್ ಅವರ 101ನೇ ಜನ್ಮದಿನೋತ್ಸವ ಹಿನ್ನೆಲೆ, ತಮ್ಮ ಅಜ್ಜನನ್ನು ನೆನೆದು ಈ ಇಬ್ಬರು ನಟರು ಗೌರವ ಸೂಚಿಸಿದರು. ಅವರ ಜೊತೆಗೆ ಅಭಿಮಾನಿ ಸಾಗರ, ನಂದಮೂರಿ ಕುಟುಂಬದ ಅಭಿಮಾನಿಗಳು ಎನ್‌ಟಿಆರ್ ಘಾಟ್‌ಗೆ ಬಂದು ಸೇರಿದ್ದರು.
ಜೂನಿಯರ್ ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಅವರು ಎನ್‌ಟಿಆರ್ ಘಾಟ್‌ಗೆ ಭೇಟಿ ಕೊಟ್ಟ ಕ್ಷಣದ ಫೋಟೋ ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ. ಮತ್ತೊಂದೆಡೆ ಎನ್‌ಟಿಆರ್ ಪುತ್ರ ನಂದಮೂರಿ ಬಾಲಕೃಷ್ಣ ಕೂಡ ಎನ್‌ಟಿಆರ್ ಘಾಟ್‌ಗೆ ಭೇಟಿ ನೀಡಿ, ತಂದೆಗೆ ನಮನ ಸಲ್ಲಿಸಿದರು.
ಎನ್‌ಟಿಆರ್ ಜನ್ಮದಿನೋತ್ಸವದ ವಿಶೇಷ ಸಂದರ್ಭದಲ್ಲಿ ಮೊಮ್ಮಗ ಕಲ್ಯಾಣ್ ರಾಮ್ ತಮ್ಮ ಹೊಸ ಪ್ರೊಜೆಕ್ಟ್ ಘೋಷಿಸಿದ್ದಾರೆ. ಪ್ರದೀಪ್ ಚಿಲುಕುರಿ ನಿರ್ದೇಶನದ ಚಿತ್ರದ ಕಿರುನೋಟವನ್ನು ಪ್ರಸ್ತುತಪಡಿಸುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. 'ಎನ್‌ಕೆಆರ್ 21' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿರುವ ಈ ಚಿತ್ರದ ವಿಡಿಯೋವನ್ನು 'ದಿ ಫಿಸ್ಟ್ ಆಫ್ ಫ್ಲೇಮ್' ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಕಲ್ಯಾಣ್ ರಾಮ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಈ ಗ್ಲಿಂಪ್ಸ್ ಕೊಟ್ಟಿದೆ. ಕಲ್ಯಾಣ್ ರಾಮ್ ಪವರ್ಫುಲ್ ಪಾತ್ರವನ್ನು ನಿರ್ವಹಿಸುತ್ತಿದ್ದು, ವಿಡಿಯೋ ಸಖತ್ ಸದ್ದು ಮಾಡುತ್ತಿದೆ. 'ಎನ್‌ಕೆಆರ್ 21' ಗ್ಲಿಂಪ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಲ್ಯಾಣ್ ರಾಮ್ ಅವರ ಮುಂದಿನ ಚಿತ್ರಗಳ ಮೇಲೆ ಕುತೂಹಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 'ಎಡಿಹೆಚ್‌ಡಿ'ಯಿಂದ ಬಳಲುತ್ತಿರುವ ಫಹಾದ್ ಫಾಸಿಲ್: ಶಾಕಿಂಗ್ ಸುದ್ದಿ ಕೊಟ್ಟ ಸೂಪರ್ ಸ್ಟಾರ್ - Fahadh Faasil
ವರದಿಗಳ ಪ್ರಕಾರ, 'ಎನ್‌ಕೆಆರ್ 21' ಚಿತ್ರದ ಕೆಲಸಗಳು ಭರದಿಂದ ಸಾಗಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಾಯಿ ಮಂಜ್ರೇಕರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ, ವಿಜಯಶಾಂತಿ, ಸೊಹೈಲ್ ಖಾನ್ ಮತ್ತು ಶ್ರೀಕಾಂತ್ ಕೂಡ ನಟಿಸುತ್ತಿದ್ದಾರೆ.
ಇದನ್ನೂ ಓದಿ: 'ಕೆಜಿಎಫ್' ಹಾದಿಯಲ್ಲಿ 'ಪುಷ್ಪ'? ಬ್ಲಾಕ್ಬಸ್ಟರ್ ಸಿನಿಮಾಗಳ ಪಾರ್ಟ್ 3 ಸೆಟ್ಟೇರೋದ್ಯಾವಾಗ? - KGF And Pushpa
ಇನ್ನೂ, ಲೆಜೆಂಡ್ ನಂದಮೂರಿ ತಾರಕ ರಾಮರಾವ್ 300ಕ್ಕೂ ಚಿತ್ರಗಳೊಂದಿಗೆ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ರಾಜಕೀಯದಲ್ಲೂ ಪರಂಪರೆ ಸೃಷ್ಟಿಸಿ ಹೋದರು. ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದ ಅವರು ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 1996ರ ಜನವರಿ 18ರಂದು ಹೃದಯಾಘಾತದಿಂದ ನಿಧನರಾದರು.