ನಟ ಗಣೇಶ್ ಅಭಿನಯದ ಮುಂದಿನ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಶ್ರೀನಿವಾಸರಾಜು ನಿರ್ದೇಶನದ ಲವ್ ಸ್ಟೋರಿ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೀಗ ಈ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ.
ಐದನೇ ಹಾಡು ಅನಾವರಣ: 'ನಿನ್ನ ಹೆಗಲು ನನಗಾಗೇ ಇರಲು' ಎಂಬ ಹಾಡು ಗುರುವಾರ ಬಿಡುಗಡೆಯಾಯಿತು. ಕವಿರಾಜ್ ಸಾಹಿತ್ಯ ಬರೆದಿದ್ದು, ಸಾಯಿಕಾರ್ತಿಕ್ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ಮಧುರ ಗೀತೆ ಮೂಡಿಬಂದಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡಿದೆ.
ಟ್ರೆಂಡಿಂಗ್ನಲ್ಲಿ ಕೃಷ್ಣಂ ಪ್ರಣಯ ಸಖಿ ಸಾಂಗ್ಸ್: ಗಣೇಶ್, ಶ್ರೀನಿವಾಸರಾಜು ಕಾಂಬಿನೇಶನ್ನ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಿಗ್ ಬಜೆಟ್ನಲ್ಲಿ ಪ್ರಶಾಂತ್ ಜಿ.ರುದ್ರಪ್ಪ ನಿರ್ಮಿಸಿರುವ ಸಿನಿಮಾ ಹಾಡುಗಳ ಮೂಲಕವೂ ಸಖತ್ ಸದ್ದು ಮಾಡುತ್ತಿದೆ. ಸಿನಿಮಾದ ಟ್ರೇಲರ್ ಇರಲ್ಲ, ಡೈರೆಕ್ಟ್ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಹಿಂದೆ ಚಿತ್ರತಂಡ ತಿಳಿಸಿತ್ತು. ಅದರಂತೆ ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಅದರಲ್ಲೂ 'ದ್ವಾಪರ' ಸಾಂಗ್ ರೀಲ್ಸ್, ಸ್ಟೇಟಸ್, ಸ್ಟೋರಿ ಅಂತಾ ಮೊಬೈಲ್ಗಳಲ್ಲೂ ಹವಾ ಉಂಟು ಮಾಡಿದೆ.
ಗಣೇಶ್ ಪೋಸ್ಟ್: 'ನಿನ್ನ ಹೆಗಲು ನನಗಾಗೇ ಇರಲು' ಹಾಡನ್ನು ಗಣೇಶ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಡಿನ ಪೋಸ್ಟರ್‌ನಲ್ಲಿ, 'ನಿನ್ನ ಹೆಗಲು ನನಗಾಗೇ ಇರಲು - ಕೆ.ಎಸ್ ಚಿತ್ರಮ್ಮನ ದನಿಯಲ್ಲಿನ ನನ್ನ ನೆಚ್ಚಿನ ಗೀತೆ' ಎಂದು ಬರೆದುಕೊಂಡಿದ್ದಾರೆ.
100K+ ವೀವ್ಸ್: ಆನಂದ್ ಆಡಿಯೋ ಕೂಡಾ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಹಾಡುಗಳು ಟ್ರೆಂಡಿಂಗ್ನಲ್ಲಿರುವ ವಿಚಾರ ತಿಳಿಸಿದೆ. ಪೋಸ್ಟರ್ ಮೇಲೆ ಹಾಡಿನ ಶೀರ್ಷಿಕೆ ಜೊತೆಗೆ 100K+ ವೀವ್ಸ್ ಎಂದು ಬರೆಯಲಾಗಿದೆ.
ನಿರೀಕ್ಷೆ ಮೀರಿ 'ಕೃಷ್ಣಂ ಪ್ರಣಯ ಸಖಿ' ಹಾಡುಗಳು ಹಿಟ್ ಆದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಡಿಯೋ ಹಕ್ಕುಗಳನ್ನು ಪಡೆದಿರುವ ಆನಂದ್ ಆಡಿಯೋ ಚಿತ್ರ ತಂಡವನ್ನು ಸನ್ಮಾನಿಸಿತ್ತು. ನಟ, ನಿರ್ದೇಶಕ ಸೇರಿದಂತೆ ಚಿತ್ರತಂಡದ ಬಹುತೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ ಎಂದು ಗಣೇಶ್ ತಿಳಿಸಿದ್ದರು.
ಇದನ್ನೂ ಓದಿ: 'ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸಿದೆ': ಗೋಲ್ಡನ್ ಸ್ಟಾರ್ ಗಣೇಶ್ - Krishnam Pranaya Sakhi
ಡೈರೆಕ್ಟ್ ಸಿನಿಮಾ ಬಿಡುಗಡೆ: ಇನ್ನೂ ಟ್ರೇಲರ್ ರಿಲೀಸ್ ಮಾಡದಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಗಣಿ, ನಮ್ಮ ನಿರ್ದೇಶಕರು, ನಿರ್ಮಾಪಕರು ಮಾತನಾಡಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಏಕೆಂದರೆ, ಇದು ಸೋಷಿಯಲ್ ಮೀಡಿಯಾ ಜಮಾನ. ಪ್ರೇಕ್ಷಕರ ಅಭಿರುಚಿ ಸಹ ಬದಲಾಗಿದೆ. ಈ ಹಿಂದೆ ಟೀಸರ್ ಟ್ರೇಲರ್ ಸಂಸ್ಕೃತಿ ಇರಲಿಲ್ಲ. ಆಗ ಪ್ರೇಕ್ಷಕರು ನೇರವಾಗಿ ಬಂದು ಥಿಯೇಟರ್ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಹಲವು ದಿನಗಳ ಕಾಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಓಡಿ ಯಶ ಕಾಣುತ್ತಿದ್ದವು. ಅದೇ ಸೂತ್ರವನ್ನು ನಾವು ನಮ್ಮ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ 'ಮುಂಗಾರು ಮಳೆ': ಗಣೇಶ್ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male