ಚೆನ್ನೈ (ತಮಿಳುನಾಡು): ದೆಹಲಿಯ 2,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ಅವರನ್ನು ಎನ್‌ಸಿಬಿ ಬಂಧಿಸಿದೆ.
ಎನ್‌ಸಿಬಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಕೈಗೊಂಡಿದ್ದಾರೆ. ತಮಿಳು ನಟ ಮತ್ತು ನಿರ್ದೇಶಕ ಅಮೀರ್ ಅವರಿಗೆ ತನಿಖೆಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸಲು ಸದಾ ಸಿದ್ಧ ಎಂದು ನಿರ್ದೇಶಕ ಅಮೀರ್ ತಿಳಿಸಿದ್ದಾರೆ.
"ಈ ವಿಚಾರಣೆ ಎದುರಿಸಲು ನಾನು ಸದಾ ಸಿದ್ಧನಿದ್ದೇನೆ. ನಾನು ಸತ್ಯ ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ. ದೇವರ ದಯೆಯಿಂದ ನಾನು ಶೇ.100ರಷ್ಟು ಯಶಸ್ಸಿನೊಂದಿಗೆ ಬರುತ್ತೇನೆ. ಅದೇ ನಂಬಿಕೆಯೊಂದಿಗೆ ನಾನು ಇದ್ದೇನೆ" ಎಂದು ನಿರ್ದೇಶಕ ಅಮೀರ್ ವಾಟ್ಸಪ್ ಮೂಲಕ ಹೇಳಿದ್ದಾರೆ. ಜಾಫರ್ ಸಾದಿಕ್ ನಿರ್ಮಾಣದ 'ಇರೈವನ್ ಮಿಗ ಪೆರಿಯವನ್' ಚಿತ್ರವನ್ನು ನಿರ್ದೇಶಕ ಅಮೀರ್ ನಿರ್ದೇಶಿಸಿದ್ದಾರೆ ಎಂಬುದು ನಾವಿಲ್ಲಿ ಗಮನಿಸಬೇಕಾದ ಅಂಶ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ? ಸುಳಿವು ಕೊಟ್ಟ ಸುನೀಲ್ ಶೆಟ್ಟಿ - Athiya KL Rahul
ಈ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದ್ದು, ಎನ್‌ಸಿಬಿ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಈ ಡ್ರಗ್ಸ್ ದಂಧೆಯಿಂದ ಹಲವಾರು ಕೋಟಿ ರೂಪಾಯಿಗಳ ಆದಾಯ ಬಂದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: 'ರಣ್ಬೀರ್ ಕಪೂರ್ ಸಂಸ್ಕಾರವಂತ': ಚರ್ಚೆಗೆ ಕಾರಣವಾಯ್ತು ತಾಯಿ ನೀತು ಹೇಳಿಕೆ - Ranbir Kapoor
ಅಧಿಕಾರಿಗಳು ಜಾಫರ್ ಸಾದಿಕ್ ಹಾಗೂ ಇಂಡಸ್ಟ್ರಿ ಸಂಪರ್ಕದಲ್ಲಿರುವವರ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅದರಂತೆ ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು ನಟ ಹಾಗೂ ನಿರ್ದೇಶಕ ಅಮೀರ್ ಅವರಿಗೆ ಸಮನ್ಸ್ ನೀಡಿದ್ದಾರೆ. ಸಮನ್ಸ್‌ನಲ್ಲಿ ಉಲ್ಲೇಖಿಸಲಾದ ದಿನಾಂಕದಂದು ದೆಹಲಿಯಲ್ಲಿರುವ ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಘಟಕದ ಕಚೇರಿಗೆ ಹಾಜರಾಗಿ ವಿವರಣೆ ನೀಡಬೇಕು ಎಂದೂ ಸೂಚಿಸಲಾಗಿದೆ. ಮೌನಂ ಪೆಸಿಯಾದೆ, ಪರುತಿ ವೀರನ್, ವದಾಚೆನ್ನೈ ಚಿತ್ರದ ಮೂಲಕ ಅಮೀರ್ ಗುರುತಿಸಿಕೊಂಡಿದ್ದಾರೆ.