ಲೇಡಿ ಸೂಪರ್ಸ್ಟಾರ್ ನಯನತಾರಾ ಇನ್ಸ್ಟಾಗ್ರಾಂನಲ್ಲಿ ಪತಿ ವಿಘ್ನೇಶ್ ಅವರನ್ನು ಅನ್ಫಾಲೋ ಮಾಡಿದ್ದ ಸುದ್ದಿಯ ಬಳಿಕ ಇದೀಗ ಪತಿ ಹಾಗೂ ತಮ್ಮ ಅವಳಿ ಮಕ್ಕಳ ಜೊತೆ ವಿಮಾನ ಪ್ರಯಾಣ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಯನತಾರಾ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪತಿ ವಿಘ್ನೇಶ್ ಅವರನ್ನು ಅನ್ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ವಿಚ್ಛೇದನದ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ವಿಘ್ನೇಶ್ ಮತ್ತು ಮಕ್ಕಳಾದ ಉಳಗ್ ಹಾಗೂ ಉಯಿರ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಚ್ಛೇದನ ವದಂತಿಯನ್ನು ತಳ್ಳಿಹಾಕಿದ್ದಾರೆ.
ಫೋಟೋದಲ್ಲಿ ಅವಳಿ ಮಕ್ಕಳಲ್ಲಿ ಒಬ್ಬ ಮಗನನ್ನು ತಾವೂ, ಇನ್ನೊಬ್ಬ ಮಗನನ್ನು ಪತಿ ವಿಘ್ನೇಶ್ ಹಿಡಿದುಕೊಂಡು ನಗುತ್ತಿರುವುದನ್ನು ನೋಡಬಹುದು. ಇಬ್ಬರೂ ಮ್ಯಾಚಿಂಗ್ ಬಟ್ಟೆ ಧರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿರುವ ನಯನತಾರಾ, "@wikkiofficial ಟ್ರಾವೆಲ್ ವಿಥ್ ಮೈ ಬಾಯ್ಸ್ ಆಫ್ಟರ್ ಸೋ ಲಾಂಗ್" ಎಂದು ಹಾರ್ಟ್ ಎಮೋಜಿಗಳೊಂದಿಗೆ ಶೀರ್ಷಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ನಯನತಾರಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, "ನಾನು ಕಳೆದುಹೋಗಿದ್ದೇನೆ" ಎಂದು ಪೋಸ್ಟ್ ಮಾಡಿದ್ದರು. ನಯನತಾರಾ ವಿಘ್ನೇಶ್ ಅವರನ್ನು ಅನ್ಫಾಲೋ ಮಾಡಿದಂತಹ ಸಂದರ್ಭದಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದೀಗ ನಟಿಯ ಹೊಸ ಇನ್ಸ್ಟಾಗ್ರಾಂ ಸ್ಟೋರಿ ನೋಡಿ ಅಭಿಮಾನಿಗಳು ಸಂತೋಷಗೊಂಡಿದ್ದು, ಜೋಡಿಯನ್ನು ಹರಸುತ್ತಿದ್ದಾರೆ.
ಪತಿಯನ್ನು ಅನ್ಫಾಲೋ ಮಾಡಿದ ವೇಳೆ ಕೆಲವರು, ನಟಿಯ ಹೊಸ ಪ್ರಾಜೆಕ್ಟ್ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಸುಮ್ಮನೆ ಸುದ್ದಿಯಾಗಲು ಹೀಗೆ ಮಾಡಿರಬಹುದು ಎಂಬೆಲ್ಲ ಕಮೆಂಟ್ಗಳನ್ನು ಮಾಡಿದ್ದರು.
ನಯನತಾರಾ ಮತ್ತು ವಿಘ್ನೇಶ್ 2022ರ ಜೂನ್ 9ರಂದು ಮಾದುವೆಯಾಗಿದ್ದರು. 2022 ಅಕ್ಟೋಬರ್ನಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿಯಾದರು. ನಯನತಾರಾ ಕೊನೆಯದಾಗಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಜೊತೆಗೆ ಜವಾನ್ ಚಿತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: 'ಅವತಾರ ಪುರುಷ 2' ಬಿಡುಗಡೆಗೆ ಮುಹೂರ್ತ ಫಿಕ್ಸ್