ETV Bharat / entertainment

ರಾಷ್ಟ್ರಪ್ರಶಸ್ತಿ ವಿಜೇತ ತುಳು ಸಿನಿಮಾ ನಿರ್ಮಾಪಕನ ವಿರುದ್ಧ ವಂಚನೆ ಪ್ರಕರಣ ದಾಖಲು - FRAUD CASE AGAINST FILM PRODUCER

ವಂಚನೆಗೊಳಗಾದ ಉದ್ಯಮಿ ವರದರಾಜ್​ ಎಂಬವರು ನಿರ್ಮಾಪಕ ಅರುಣ್​ ರೈ ಸೇರಿದಂತೆ ಐವರ ವಿರುದ್ಧ ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Producer Arun Rai
ನಿರ್ಮಾಪಕ ಅರುಣ್ ರೈ (ETV Bharat)
author img

By ETV Bharat Karnataka Team

Published : Dec 1, 2024, 4:43 PM IST

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಿರ್ಮಾಪಕನ ವಿರುದ್ಧ ವಂಚನೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಂಟ್ವಾಳದ ಉದ್ಯಮಿ ವರದರಾಜ್.ಟಿ ಅವರಿಗೆ 9 ಕೋಟಿ ರೂ. ವಂಚಿಸಿರುವ ಆರೋಪದಡಿ 'ಜೀಟಿಗೆ' ತುಳು ಸಿನಿಮಾದ ನಿರ್ಮಾಪಕ ಅರುಣ್ ರೈ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪವೇನು?: ಗೇರುಬೀಜ ಸಂಸ್ಕರಣಾ ಘಟಕ ಹೊಂದಿದ್ದ ಉದ್ಯಮಿ ವರದರಾಜ್ ಅವರಿಗೆ ಕೋವಿಡ್ ಸಂದರ್ಭದಲ್ಲಿ 25 ಕೋಟಿ ರೂ. ನಷ್ಟವಾಗಿತ್ತು. ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ಅರುಣ್ ರೈ ಅವರ ಪರಿಚಯವಾಗಿತ್ತು. ನಂತರದ ದಿನಗಳಲ್ಲಿ ವರದರಾಜ್ ಅವರನ್ನು ಸಂಪರ್ಕಿಸಿದ್ದ ಅರುಣ್ ರೈ, "ನೀವು ನನ್ನ ಉದ್ಯಮದಲ್ಲಿ ಹಣ ತೊಡಗಿಸಿದರೆ ನಿಮಗಾದ ನಷ್ಟದಿಂದ ಹೊರಬರಬಹುದು. ನಾನು ಕನ್ನಡದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರಕಂಬಳ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದರ ಲಾಭಾಂಶದಲ್ಲಿ 60 ಲಕ್ಷ ರೂಪಾಯಿ ಕೊಡುತ್ತೇನೆ" ಎಂದು ನಂಬಿಸಿದ್ದರು.

ವರದರಾಜ್ ಅವರನ್ನು ನಂಬಿಸಲು "ನಾನು ದೆಹಲಿಯಲ್ಲಿ 400 ಕೋಟಿ ಹೂಡಿಕೆ ಮಾಡಿದ್ದೇನೆ. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕಿದೆ. ಪಳನಿ ದೇವಾಲಯದ ಟ್ರಸ್ಟ್‌ನಿಂದ ಸಾಲ ಕೊಡಿಸುತ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ರೂ. ಕೆಲಸದ ಬಿಲ್ ಬಾಕಿ ಇದೆ. ಮಂಗಳೂರಿನ ಗೋಡೌನ್‌ನಲ್ಲಿ 40 ಕೋಟಿ ಮೌಲ್ಯದಷ್ಟು ಗೋಡಂಬಿ ಇದೆ. ಅದನ್ನು 25 ಕೋಟಿಗೆ ಕೊಡುತ್ತೇನೆ" ಎಂದು ಅರುಣ್ ರೈ ಹೇಳಿಕೊಂಡಿದ್ದರು.

ಅಷ್ಟೇ ಅಲ್ಲದೆ, ಬೆಂಗಳೂರಿನ ಹಲವು ಕಂಪನಿಗಳು ಹಾಗೂ ಕಟ್ಟಡಗಳನ್ನು ತೋರಿಸಿ ಇದೆಲ್ಲವೂ ತನ್ನದೇ ಎಂದಿದ್ದರು. ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದು ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದರು. ದುಬೈ, ಜಾಂಬಿಯಾ, ಘಾನ, ಉಜ್ಬೇಕಿಸ್ತಾನ್, ಮಲೇಷಿಯಾಗಳಲ್ಲಿ ಅಂತಾರಾಷ್ಟ್ರೀಯ ವ್ಯವಹಾರವಿದೆ. ಸ್ಪೇಸ್ ಎಕ್ಸ್ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್​ರ ಕೋ-ಆರ್ಡಿನೇಟರ್ ಸಹ ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸುಳ್ಳಿನ ಮೇಲೆ ಸುಳ್ಳು ಹೇಳಿದ್ದರು.

ವ್ಯವಹಾರದಲ್ಲಿ ಆಗಿದ್ದ ನಷ್ಟದಿಂದ ಹೊರಬರಬಹುದು ಎಂದುಕೊಂಡು ಅರುಣ್ ರೈ ಹೇಳಿದ್ದ ಬಣ್ಣದ ಮಾತುಗಳನ್ನು ನಂಬಿದ್ದ ವರದರಾಜ್, ತಮ್ಮ ಆಪ್ತರು ಸೇರಿದಂತೆ ಹಲವು ಕಡೆಗಳಿಂದ ಸಾಲ ಮಾಡಿ ಸುಮಾರು 9 ಕೋಟಿ ಹಣವನ್ನು ಆತನ ಕಂಪನಿಗಳಿಗಾಗಿ‌ ಹೂಡಿಕೆ ಮಾಡಿದ್ದರು. ಆದರೆ ಅರುಣ್ ರೈ ಮತ್ತು ಆತನ ಸಹಚರರು ನಕಲಿ ಕರಾರು ಪತ್ರಗಳನ್ನು ನೀಡಿದ್ದಾರೆ. ಹಾಗೂ ಲಾಭಾಂಶ ನೀಡುವುದಾಗಿ ವಂಚಿಸಿದ್ದಾರೆ ಎಂದು ವರದರಾಜ್ ದೂರಿದ್ದಾರೆ.

ಈ ದೂನಿನನ್ವಯ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಶ್ರೀನಿವಾಸ್ ಕೆ.ಪಿ, ರಘು ಹಾಗೂ ಗೋವಿಂದಪ್ಪ ಎಂಬವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪರಿಚಿತೆಯ ಫೇಸ್​​ಬುಕ್​ ರಿಕ್ವೆಸ್ಟ್ ಸ್ವೀಕರಿಸಿದ ವ್ಯಕ್ತಿ ಕಳೆದುಕೊಂಡಿದ್ದು ₹54.64 ಲಕ್ಷ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.