ಸರ್ಬಿಯಾ ಮೂಲದ ಮಾಡೆಲ್ ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇತ್ತೀಚೆಗಷ್ಟೇ, ಮುಂಬೈ ತೊರೆದ ಅವರು ತಮ್ಮ ಮಗ ಅಗಸ್ತ್ಯನೊಂದಿಗೆ ಸರ್ಬಿಯಾದ ತಮ್ಮ ತವರು ಮನೆಗೆ ವಾಪಸಾಗಿದ್ದಾರೆ. ಡಿವೋರ್ಸ್ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರೂಪದರ್ಶಿ, ತಮ್ಮ ದಿನನಿತ್ಯದ ಸಂತೋಷಕರ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಮಗನೊಂದಿಗಿನ ಮೋಜಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ನತಾಶಾ ಮತ್ತು ಅಗಸ್ತ್ಯ ಇಬ್ಬರೂ ಮ್ಯೂಸಿಯಂಗೆ ಭೇಟಿ ನೀಡಿದಂತೆ ತೋರುತ್ತಿದೆ. ಅಲ್ಲಿ ಗುಣಮಟ್ಟದ ಸಮಯ ಕಳೆದಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗನೊಂದಿಗೆ ಕಾಣಿಸಿಕೊಂಡಿರುವ ಒಂದು ನಿರ್ದಿಷ್ಟ ಫೋಟೋಗೆ, 'ಹೃದಯಗಳು ಸಂತೋಷದಿಂದ ತುಂಬಿವೆ' ಎಂದು ಕ್ಯಾಪ್ಷನ್ ಕೊಡುವ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ನತಾಶಾ ಮತ್ತು ಹಾರ್ದಿಕ್ ಜುಲೈ 18ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ಗಳ ಮೂಲಕ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಪೋಸ್ಟ್‌ನಲ್ಲಿ, "4 ವರ್ಷಗಳ ನಂತರ, ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ಇದು ನಮಗೆ ಕಠಿಣ ನಿರ್ಧಾರವಾಗಿತ್ತು. ಅಗಸ್ತ್ಯನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಳ್ಳಲಿದ್ದೇವೆ. ಈ ಕಷ್ಟಕರ, ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಗೌರವಿಸುವಿರೆಂದು, ಬೆಂಬಲ ನೀಡುತ್ತೀರೆಂದು ನಂಬಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸೌತ್ ಸೂಪರ್ಸ್ಟಾರ್ ಸೂರ್ಯ ಜನ್ಮದಿನ: ಕಂಗುವ ಫೈಯರ್ ಸಾಂಗ್ ರಿಲೀಸ್ - Kanguva Fire Song
ಇಬ್ಬರೂ ಪರಸ್ಪರ ಗೌರವದೊಂದಿಗೆ ತಮ್ಮ ಜೀವನದ ಪ್ರತ್ಯೇಕ ಮಾರ್ಗಗಳಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಮಗನೊಂದಿಗಿನ ಫೋಟೋ ವಿಡಿಯೋಗಳನ್ನು ನತಾಶಾ ದಿನನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಹಾರ್ದಿಕ್ ಇತ್ತೀಚೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗಿನ ಒಡನಾಟಕ್ಕಾಗಿ ಗಮನ ಸೆಳೆದಿದ್ದಾರೆ. ಈ ತಿಂಗಳಲ್ಲೇ ನಡೆದ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ವೈಭವೋಪೇತ ವಿವಾಹ ಸಮಾರಂಭದಲ್ಲಿ ಹಾರ್ದಿಕ್ ಮತ್ತು ಅನನ್ಯಾ ಒಟ್ಟಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಿರುವ ವಿಡಿಯೋ ಹೊರಬಿದ್ದ ನಂತರ ಕೆಲ ನೆಟ್ಟಿಗರು ವದಂತಿಗಳನ್ನು ಸೃಷ್ಟಿಸಿದ್ದಾರೆ. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಪ್ರಾರಂಭಿಸಿದ ಕ್ಷಣದಿಂದ ಅವರ ಸಂಬಂಧದ ಸುತ್ತಲಿನ ಊಹಾಪೋಹಗಳು ಹೆಚ್ಚಾಗಿವೆ. ಫೋಟೋ - ವಿಡಿಯೋಗಳು ವೈರಲ್ ಆಗಿ ವದಂತಿ ಹರಡಿವೆಯಾದರೂ ನಟಿ ಮತ್ತು ಕ್ರಿಕೆಟಿಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.