ETV Bharat / entertainment

ರೊಮ್ಯಾಂಟಿಕ್ ಆಲ್ಬಂ ಸಾಂಗ್​ನಲ್ಲಿ ಸಂಜನಾ ದಾಸ್, ಗಾಯಕ ಸಂಜಿತ್ ಹೆಗ್ಡೆ ಮಿಂಚು - Nange Allava song - NANGE ALLAVA SONG

ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಅವರ 'ನಂಗೆ ಅಲ್ಲವಾ' ಆಲ್ಬಂ ಸಾಂಗ್​ ರಿಲೀಸ್ ಆಗಿದೆ.

Nange Allava Music Video release
'ನಂಗೆ ಅಲ್ಲವಾ' ಆಲ್ಬಂ ಸಾಂಗ್​ ರಿಲೀಸ್ (ETV Bharat)
author img

By ETV Bharat Karnataka Team

Published : Jun 26, 2024, 12:22 PM IST

ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಕೇವಲ ಸ್ಯಾಂಡಲ್​ವುಡ್​ಗೆ ಸೀಮಿತವಾಗದೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಪರಿಚಿತರಾದ ಸಂಜಿತ್ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಕೇವಲ ಗಾಯನಕ್ಕೆ ಸೀಮಿತವಾಗದೇ ನಟನೆಯಲ್ಲಿಯೂ ತೊಡಗಿಸಿಕೊಂಡಿರುವ ಸಂಜಿತ್ ಅವರೀಗ ಮತ್ತೊಂದು ಹೊಸ ಹಾಡಿನ ಮೂಲಕ ಪ್ರೇಕ್ಷಕರೆದುರು ಪ್ರತ್ಯಕ್ಷರಾಗಿದ್ದಾರೆ.

'ನಂಗೆ ಅಲ್ಲವಾ' ಹಾಡಿನಲ್ಲಿ ಸಂಜಿತ್ ಹೆಗ್ಡೆ, ಯುವ ನಟಿ ಸಂಜನಾ ದಾಸ್ ಜೊತೆಗೂಡಿ ಹಾಡಿ ಕುಣಿದಿದ್ದಾರೆ. ಹಾಗಂತ ಇದು ಸಿನಿಮಾ ಗೀತೆಯಲ್ಲ. ಬದಲಾಗಿ ಸಂಜಿತ್, ತಮ್ಮ ತಂಡದೊಂದಿಗೆ ಸೇರಿ ಸ್ವತಂತ್ರವಾಗಿ ರಚಿಸಿರುವ ಗಾನಬಜಾನ. ನಾಗಾರ್ಜುನ್ ಶರ್ಮಾ ಪದಪೊಣಿಸಿರುವ ಹಾಡಿಗೆ ಸಂಜಿತ್ ಕಂಠದಾನ ಮಾಡಿದ್ದಾರೆ. ಜೊತೆಗೆ, ಸಂಗೀತ ಸಂಯೋಜಿಸಿದ್ದು, ಬಿಜೋಯ್ ಶೆಟ್ಟಿ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.

ಯುವ ಪ್ರೇಮಿಗಳ ಆಂಥಮ್​​ನಂತಿರುವ ನಂಗೆ ಅಲ್ಲವಾ ಗೀತೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಈ ಹಾಡಿನ ಬಗ್ಗೆ ಮಾತನಾಡಿರುವ ಸಂಜಿತ್, ''ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಂಗೆ ಅಲ್ಲವಾ ನನ್ನ ಪ್ರೀತಿಯ ಜೀವನದ ಪ್ರಯಾಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಪ್ರಯಾಣದಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ಹಗುರವೆನಿಸುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: ಕಲ್ಕಿ 2898AD ಚಿತ್ರದ ಲಿರಿಕಲ್​ ಥೀಮ್​ ವಿಡಿಯೋ ಬಿಡುಗಡೆ! - Lyrical Video Of Kalki 2898 AD

ಸಂಜಿತ್ ಹಿಂದಿಯಲ್ಲಿ ಬಾದಲ್‌ಮತ್ತು ಗುಲಾಬೋ ಹಾಡುಗಳೊಂದಿಗೆ ಈಗಾಗಲೇ ಹೊಸ ಅಲೆ ಸೃಷ್ಟಿಸಿದ್ದಾರೆ. ಸದ್ಯ ಅದೇ ಸಾಲಿಗೆ ನಂಗೆ ಅಲ್ಲವಾ ಆಲ್ಬಂ ಸಾಂಗ್ ಸೇರ್ಪಡೆಯಾಗಿದೆ. ಸಂಜಿತ್ ಹೆಗ್ಡೆ ಯೂಟ್ಯೂಬ್ ಚಾನಲ್ ನಲ್ಲಿ ಹಾಗೂ ಎಲ್ಲ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಡು ಲಭ್ಯವಿದೆ. ವಾರ್ನರ್ ಮ್ಯೂಸಿಕ್ ಇಂಡಿಯಾ ಈ ಹಾಡನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬಾಲಿವುಡ್​ನ ಹಾರರ್ ಕಾಮಿಡಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಆಯುಷ್ಮಾನ್ ಖುರಾನಾ ಜೊತೆ ಸ್ಕ್ರೀನ್​ ಶೇರ್ - Rashmika Mandanna Bollywood Movie

ETV Bharat Logo

Copyright © 2025 Ushodaya Enterprises Pvt. Ltd., All Rights Reserved.