ಸೌತ್ ಸೂಪರ್ ಸ್ಟಾರ್ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಪರಸ್ಪರರ ಕುಟುಂಬಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೇ ವರ್ಷ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ಜರುಗಿತ್ತು. ಇದೀಗ ಮದುವೆಗೆ ತಯಾರಿ ಭರದಿಂದ ಸಾಗಿದೆ.
ಸದ್ಯ ಪ್ರೇಮಪಕ್ಷಿಗಳ ಮದುವೆ ದಿನಾಂಕ ಬಹಿರಂಗಗೊಂಡಿದೆ. ಈ ಹಿಂದೆ ಜೋಡಿ ಕುರಿತು ಹಲವು ವದಂತಿಗಳು ಹರಡಿದ್ದವು. ಆದರೆ ಪ್ರೀತಿಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಡದ ಲವ್ಬರ್ಡ್ಸ್ ಇದೇ ಸಾಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿತು. ಇನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 2021ರಲ್ಲಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರಿಂದ ವಿಚ್ಛೇದನ ಪಡೆದ ನಾಗ ಚೈತನ್ಯ ಅವರೀಗ ಶೋಭಿತಾ ಧೂಳಿಪಾಳ ಅವರನ್ನು ಪತ್ನಿಯಾಗಿ ಸ್ವೀಕರಿಸಿ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದಾರೆ.
ಮದುವೆ ದಿನಾಂಕ ಲೀಕ್: 2024ರ ಆಗಸ್ಟ್ 8ರಂದು ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಳ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂತಸದ ಅಲೆ ಎಬ್ಬಿಸಿತ್ತು. ಮದುವೆ ಯಾವಾಗ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ಇವರಿಬ್ಬರ ಮದುವೆ ದಿನಾಂಕ ಲೀಕ್ ಆಗಿದೆ.
ವರದಿಗಳನ್ನು ನಂಬುವುದಾದರೆ, ಪ್ರಸಕ್ತ ವರ್ಷವೇ ನಾಗ ಚೈತನ್ಯ ಶೋಭಿತಾ ಮದುವೆ ನಡೆಯಲಿದೆ. ಹಾಗಾಗಿ ಆ ಶುಭದಿನಕ್ಕೆ ಸಾಕ್ಷಿಯಾಗಲು ಪ್ರೇಮಪಕ್ಷಿಗಳು ಹೆಚ್ಚು ಕಾಯಬೇಕಾಗಿಲ್ಲ. ಡಿಸೆಂಬರ್ 4 ರಂದು ವಿವಾಹ ಸಮಾರಂಭ ನಡೆಯಲಿದೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
" we are delighted to announce the engagement of our son, naga chaitanya, to sobhita dhulipala, which took place this morning at 9:42 a.m.!!
— Nagarjuna Akkineni (@iamnagarjuna) August 8, 2024
we are overjoyed to welcome her into our family.
congratulations to the happy couple!
wishing them a lifetime of love and happiness. 💐… pic.twitter.com/buiBGa52lD
ಇತ್ತೀಚೆಗಷ್ಟೇ ನಾಗಾರ್ಜುನ ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಸ್ಮರಿಸಿದ್ದರು. ಸೌತ್ ಸೂಪರ್ ಸ್ಟಾರ್ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈವೆಂಟ್ನಲ್ಲಿ ಹೆಸರಾಂತ ನಟ ನಾಗಾರ್ಜುನ ಅವರು ತಮ್ಮ ಭಾವಿ ಸೊಸೆ ಶೋಭಿತಾ ಅವರನ್ನು ಸೌತ್ನ ಮತ್ತೋರ್ವ ಸೂಪರ್ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪರಿಚಯಿಸಿದರು.
ಇದನ್ನೂ ಓದಿ: ಯಶ್ ಪುತ್ರನ 5ನೇ ಜನ್ಮದಿನ: ಕುಟುಂಬದ ಸುಂದರ ಕ್ಷಣಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್
ಇನ್ನೂ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲರ ಮದುವೆ ದಿನಾಂಕವನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಭಾವಿ ದಂಪತಿ ಮತ್ತು ಸ್ಟಾರ್ ಫ್ಯಾಮಿಲಿಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ. ಇನ್ನು, ಸೌತ್ನಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. 2021ರಲ್ಲಿ ದಂಪತಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು.
ಇದನ್ನೂ ಓದಿ: ಹನುಮಾನ್ ಪಾತ್ರದಲ್ಲಿ ರಿಷಬ್ ಶೆಟ್ಟಿ: ಟಾಲಿವುಡ್ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ
ಕೆಲ ಸಮಯದ ನಂತರ ನಟನ ಹೆಸರು ನಟಿ ಶೋಭಿತಾ ಅವರೊಂದಿಗೆ ಕೇಳಿ ಬರಲು ಪ್ರಾರಂಭವಾಯಿತು. ಅವರ ವೆಕೇಶನ್ನ ಕೆಲ ಫೋಟೋಗಳು ವೈರಲ್ ಆಗಿದ್ದವು. ಆದರೆ ಈ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸದೇ ಮೌನ ವಹಿಸಿದ್ದರು.