ETV Bharat / entertainment

ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ: ಈ ತಿಂಗಳು ಬಿಡುಗಡೆಯಾಗಲಿರುವ ಸಿನಿಮಾ, ಸೀರಿಸ್​ಗಳಿವು - Upcoming Movies and Web Series - UPCOMING MOVIES AND WEB SERIES

ಕನ್ನಡದ 'ಜಿಗರ್' ಮತ್ತು 'ಕಾಗದ' ಸೇರಿದಂತೆ ಈ ತಿಂಗಳಲ್ಲಿ ಬಿಡುಗಡೆ ಆಗಲಿರುವ ಕೆಲ ಸಿನಿಮಾಗಳ ಮಾಹಿತಿ ಇಲ್ಲಿದೆ.

Upcoming Movies and Web Series
ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು (Movie Posters / ETV Bharat)
author img

By ETV Bharat Karnataka Team

Published : Jul 2, 2024, 5:04 PM IST

ಒಂದಾದ ಬಳಿಕ ಒಂದರಂತೆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಸದ್ಯ ಎಲ್ಲೆಡೆ 'ಕಲ್ಕಿ'ಯದ್ದೇ ಹವಾ. ಈ ತಿಂಗಳಲ್ಲಿ ತೆರೆಕಾಣಲು ಹಲವು ಸಿನಿಮಾಗಳು ರೆಡಿಯಾಗಿವೆ. ಜುಲೈನಲ್ಲಿ ಬಿಡುಗಡೆಯಾಗಲಿರುವ ಒಂದಿಷ್ಟು ಸಿನಿಮಾ, ಸೀರಿಸ್​​​​ಗಳ ಪಟ್ಟಿ ಇಲ್ಲಿದೆ ನೋಡಿ.

  • 'ಕಿಲ್​' ಸಿನಿಮಾ: ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್ ಅವರ ಆ್ಯಕ್ಷನ್ ಥ್ರಿಲ್ಲರ್ 'ಕಿಲ್' ಜುಲೈ 5ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಲಕ್ಷ್ಯ ಮತ್ತು ರಾಘವ್ ಜುಯಲ್ ಅಭಿನಯದ ಈ ಚಿತ್ರ ಹಾಲಿವುಡ್‌ನಲ್ಲೂ ರೀಮೇಕ್ ಆಗಲಿದೆ.
  • ಔರಾನ್ ಮೆ ಕಹಾ ದಮ್​ ಥಾ: ಅಜಯ್ ದೇವಗನ್, ಟಬು ಮತ್ತು ಜಿಮ್ಮಿ ಶೆರ್ಗಿಲ್ ಅಭಿನಯದ ಲವ್​ ಸ್ಟೋರಿ ಔರಾನ್ ಮೆ ಕಹಾನ್ ದಮ್ ಥಾ ಕೂಡ ಜುಲೈ 5ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ.
  • ಸಿರ್ಫಿರಾ: ಸಿನಿಮಾ ಯಶಸ್ಸಿನ ವಿಚಾರದಲ್ಲಿ ಇತ್ತೀಚೆಗೆ ಏರಿಳಿತ ಕಂಡಿರುವ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಸರ್ಫಿರಾ' ಸಿನಿಮಾ ಜುಲೈ 12 ರಂದು ಬಿಡುಗಡೆಯಾಗುತ್ತಿದೆ. ಇದು ಸೌತ್​ ಸೂಪರ್ ಸ್ಟಾರ್ ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರದ ಅಧಿಕೃತ ಹಿಂದಿ ರೀಮೇಕ್.
  • ದಿ ಯುಪಿ ಫೈಲ್ಮ್ಸ್: ನೀರಜ್ ಸಹಾಯ್ ಅವರ 'ದಿ ಯುಪಿ ಫೈಲ್ಸ್' ಜುಲೈ 12 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮನೋಜ್ ಜೋಶಿ, ಮಂಜರಿ ಮತ್ತು ಮಿಲಿಂದ್ ಗುಂಜಿ ಸೇರಿದಂತೆ ಕಾಣಿಸಿಕೊಳ್ಳಲಿದ್ದಾರೆ.
  • ಇಂಡಿಯನ್​​ 2: ದಕ್ಷಿಣ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'ಇಂಡಿಯನ್ 2' ಕೂಡ ಜುಲೈ 12 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಸೌತ್ ಸೂಪರ್‌ ಸ್ಟಾರ್ ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ 28 ವರ್ಷಗಳ ನಂತರ ತಮ್ಮ ಸೂಪರ್ ಹಿಟ್ ಚಿತ್ರದ ಸೀಕ್ವೆಲ್‌ನೊಂದಿಗೆ ಮರಳುತ್ತಿದ್ದಾರೆ.
  • ಗೋಧ್ರಾ: ಗುಜರಾತ್ ಗಲಭೆಗಳನ್ನು ಆಧರಿಸಿದ ಗೋದ್ರಾ (Accident or Conspiracy: Godhra) ಚಿತ್ರ ಜುಲೈ 12ರಂದು ತೆರೆಗಪ್ಪಳಿಸಲಿದೆ. ಸಿನಿಮಾವನ್ನು ಎಂ.ಕೆ ಶಿವಾಕ್ಷ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮನೋಜ್ ಜೋಶಿ, ದನಿಶಾ ಗುಮ್ರಾ ಮತ್ತು ರಣ್​​​ವೀರ್ ಶೋರೆ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
  • ಬ್ಯಾಡ್​ ನ್ಯೂಸ್: ಆ್ಯಕ್ಷನ್​, ಥ್ರಿಲ್ಲರ್ ಜೊತೆ ಕಾಮಿಡಿ ಸಿನಿಮಾಗಳೂ ಬರಲಿವೆ. ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ 'ಬ್ಯಾಡ್ ನ್ಯೂಸ್' ಜುಲೈ 19ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಚಿತ್ರ - The India House

  • ರಾಯನ್: ಸೌತ್ ಸೂಪರ್ ಸ್ಟಾರ್ ಧನುಷ್ ಅಭಿನಯದ ರಾಯನ್​​​ ಸಿನಿಮಾ ಜುಲೈ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸ್ವತಃ ಧನುಷ್ ಅವರೇ ನಿರ್ದೇಶಿಸಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಾಯನ್​​ ಬಿಡುಗಡೆಯಾಗಲಿದೆ.

ಒಟಿಟಿ ಸರಣಿಗಳು:

  • ಮಿರ್ಜಾಪುರ್ 3: ಈ ಸಾಲಿನ ಬಹುನಿರೀಕ್ಷಿತ ವೆಬ್ - ಸರಣಿ ಮಿರ್ಜಾಪುರ್ 3 ಇದೇ ಶುಕ್ರವಾರ, ಜುಲೈ 5ರಂದು ಸ್ಟ್ರೀಮ್ ಆಗಲು ರೆಡಿಯಾಗಿದೆ. ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ.
  • ಕಾಕುಡ: ಜುಲೈ 12 ರಂದು ಸೋನಾಕ್ಷಿ ಸಿನ್ಹಾ, ರಿತೇಶ್ ದೇಶ್​​​ಮುಖ್ ಮತ್ತು ಸಾಕಿಬ್ ಸಲೀಂ ಅಭಿನಯದ ಹಾರರ್ ಡ್ರಾಮಾ 'ಕಾಕುಡ' ಝೀ 5ನಲ್ಲಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ: ಅದೃಷ್ಟ ಪರೀಕ್ಷೆಗಿಳಿದ ಪ್ರವೀಣ್ ತೇಜ್, ಹೊಸಬರ ಚಿತ್ರ: ಈ ವಾರ ಜಿಗರ್, ಕಾಗದ ಸಿನಿಮಾಗಳು ತೆರೆಗೆ - Jigar and Kaagada Movies

ಕನ್ನಡ ಸಿನಿಮಾಗಳಿವು: ಪ್ರವೀಣ್ ತೇಜ್ ಅವರ 'ಜಿಗರ್' ಸಿನಿಮಾ ಇದೇ ಜುಲೈ 5, ಶುಕ್ರವಾರದಂದು ಬಿಡುಗಡೆ ಆಗಲಿದೆ. ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿದ್ದು, ಸೂರಿ ಕುಂದರ್ ನಿರ್ದೇಶಿಸಿದ್ದಾರೆ. ಇನ್ನೂ ಅಂಕಿತ ಜಯರಾಂ, ಆದಿತ್ಯ ಅಭಿನಯದ 'ಕಾಗದ' ಚಿತ್ರ ಕೂಡ ಇದೇ ವಾರ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.