ETV Bharat / entertainment

ಶೀಘ್ರದಲ್ಲೇ ಅಮ್ಮನಾಗುವ ಖುಷಿಯಲ್ಲಿ ದೀಪಿಕಾ ಪಡುಕೋಣೆ: ಬೇಬಿಬಂಪ್​ ವಿಡಿಯೋ ವೈರಲ್​​ - Deepika Padukone - DEEPIKA PADUKONE

ಕಳೆದ ರಾತ್ರಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮುಂಬೈನ ಐಷಾರಾಮಿ ರೆಸ್ಟೋರೆಂಟ್​​​ ಬಳಿ ಕಾಣಿಸಿಕೊಂಡರು. ಶೀಘ್ರದಲ್ಲೇ ತಾಯಿಯಾಗಲಿರುವ ಅವರು ಪತಿ ರಣ್​​​ವೀರ್ ಅವರ ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ. ​​​ದೀಪಿಕಾ ಬೇಬಿಬಂಪ್​ ವಿಡಿಯೋ ವೈರಲ್​​ ಆಗಿದೆ.

Deepika Padukone
ನಟಿ ದೀಪಿಕಾ ಪಡುಕೋಣೆ (ANI)
author img

By ETV Bharat Entertainment Team

Published : Aug 21, 2024, 4:57 PM IST

ನಟಿ ದೀಪಿಕಾ ಪಡುಕೋಣೆ ಕುಟುಂಬ (Video source: ANI)

ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿ ಆಗಲಿದ್ದಾರೆ. ಪತಿ ರಣ್​​​ವೀರ್ ಸಿಂಗ್ ಹಾಗು ಕುಟುಂಬಸ್ಥರೊಂದಿಗೆ ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಗರ್ಭಾವಸ್ಥೆಯ ಅಂತಿಮ ದಿನಗಳನ್ನು ನಟಿ ಎಂಜಾಯ್​​ ಮಾಡುತ್ತಿರುವಂತೆ ತೋರುತ್ತಿದೆ.

ಕಳೆದ ರಾತ್ರಿ ಬಾಲಿವುಡ್ ತಾರೆ ತಮ್ಮ ಮಾವ ಜಗಜಿತ್ ಸಿಂಗ್ ಭವ್ನಾನಿ, ಅತ್ತೆ ಅಂಜು ಭವ್ನಾನಿ ಮತ್ತು ರಿತಿಕಾ ಭವ್ನಾನಿ ಸೇರಿದಂತೆ ಇತರೆ​​ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡರು. ಮನೆಯಿಂದ ಹೊರಗೆ ಬಂದು ಐಷಾರಾಮಿ ಹೋಟೆಲ್​​ನಲ್ಲಿ ಡಿನ್ನರ್​​ ಮಾಡಿದ್ದಾರೆ. ಹೀಗೆ ಹೊರಬರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ವಿಡಿಯೋಗಳು ಸದ್ದು ಮಾಡುತ್ತಿವೆ.

ಭವ್ನಾನಿ ಕುಟುಂಬ ರೆಸ್ಟೋರೆಂಟ್‌ ಪ್ರವೇಶಿಸುತ್ತಿರುವ, ಹೊರಬರುತ್ತಿರುವ ವಿಡಿಯೋಗಳು ವೈರಲ್​ ಆಗಿವೆ. ದೀಪಿಕಾ ಬ್ಲ್ಯಾಕ್​​ ಬಾಡಿಕಾನ್ ಧರಿಸಿದ್ದರು. ಅದಕ್ಕೆ ತಕ್ಕ ಬ್ಲ್ಯಾಕ್​​ ಕೋಟ್​​ ಧರಿಸಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಹೈ ಹೀಲ್ಸ್​​ ಬಿಟ್ಟು, ಸಿಂಪಲ್​ ವೈಟ್​ ಶೂಸ್​ ಧರಿಸಿದ್ದರು. ಕೇಶರಾಶಿಯನ್ನು ಕಟ್ಟದೇ ಫ್ರೀಯಾಗಿ ಬಿಟ್ಟಿದ್ದು, ನಟಿಯ ಮೊಗದಲ್ಲಿ ತಾಯಿಯಾಗುತ್ತಿರುವ ಕಳೆ ಎದ್ದು ಕಾಣುತ್ತಿತ್ತು.

ರಣ್​ವೀರ್​​ ಕುಟುಂಬ ಸದಸ್ಯರೆಲ್ಲರೂ ಕೂಡಾ ಬ್ಲ್ಯಾಕ್​ ಔಟ್​​ಫಿಟ್​ನಲ್ಲಿದ್ದರು. ಡಿನ್ನರ್ ಡೇಟ್​​​​ನಲ್ಲಿ ರಣ್​​​ವೀರ್ ಸಿಂಗ್​​​​ ಇರಲಿಲ್ಲ. ಆದಾಗ್ಯೂ ಅವರ ಕುಟುಂಬಸ್ಥರೆಲ್ಲರೂ ದೀಪಿಕಾರನ್ನು ಕಾರಿನವರೆಗೂ ಕರೆತಂದರು. ತಾಯಿಯಾಗುತ್ತಿರುವ ನಟಿಯ ಸುರಕ್ಷತೆಯನ್ನು ಅವರು ಖಚಿತಪಡಿಸಿಕೊಂಡರು. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ನಟಿಯ ಡೆಲಿವರಿ ಡೇಟ್​​​ ಸಮೀಪದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ರೇಪ್​​ ಕೇಸ್​ ವಿರುದ್ಧ ಧ್ವನಿ ಎತ್ತಿದ ಮಾಜಿ ಸಂಸದೆಗೆ ಅತ್ಯಾಚಾರ ಬೆದರಿಕೆ! - Mimi Chakraborty Faces Rape Threats

2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ಸಪ್ತಪದಿ ತುಳಿದ ಸ್ಟಾರ್ ಕಪಲ್​ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್​​ನಲ್ಲಿ ಮಗುವಿನ ಜನನವಾಗಲಿದೆ ಎಂದು ತಮ್ಮ ಪ್ರೆಗ್ನೆನ್ಸಿ ಅನೌನ್ಸ್​ಮೆಂಟ್​​​ ಟೈಮ್​ನಲ್ಲಿ ತಿಳಿಸಿದ್ದರು.

ಇನ್ನು, ಸಿನಿಮಾ ವಿಚಾರ ಗಮನಿಸುವುದಾದರೆ, ದೀಪಿಕಾ ಪಡುಕೋಣೆ ಕೊನೆಯದಾಗಿ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸಿದ್ದರೆ, ರಣ್​​​ವೀರ್ ಸಿಂಗ್​​ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು. ಈ ಎರಡೂ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಮುಂದಿನ ಬಹುನಿರೀಕ್ಷಿತ ಚಿತ್ರ ಸಿಂಗಮ್​ ಎಗೈನ್​​​ನಲ್ಲಿ ತಾರಾದಂಪತಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ರಣ್​​​​ವೀರ್ ಡಾನ್ 3 ಮತ್ತು ಆದಿತ್ಯ ಧರ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಇನ್​​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಅತಿ ಹೆಚ್ಚು ಫಾಲೋವರ್ಸ್​​​ ಲಿಸ್ಟ್​​ನಲ್ಲಿ ಮೂರನೇ ಸ್ಥಾನ - Most Followed Indian

ETV Bharat Logo

Copyright © 2025 Ushodaya Enterprises Pvt. Ltd., All Rights Reserved.