ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಆರಂಭದಿಂದಲೂ ಬಹಳ ಶಾಂತಚಿತ್ತದಿಂದ, ನಾಜೂಕಾಗಿ ಮತ್ತು ಪ್ರಬುದ್ಧರಾಗಿ ಗುರುತಿಸಿಕೊಂಡಿದ್ದ ಪಾರು ಧಾರವಾಹಿ ಖ್ಯಾತಿಯ ಮೋಕ್ಷಿತಾ ಪೈ ಅವರು ಇದೇ ಮೊದಲ ಬಾರಿಗೆ ತಮ್ಮ ದನಿ ಏರಿಸಿದ್ದಾರೆ. ನಟಿಯ ಖಡಕ್ ಮಾತನ್ನು ಕಂಡ ಮನೆ ಮಂದಿ ಆಶ್ಚರ್ಯಚಕಿತರಾಗಿದ್ದಾರೆ. ಇವರೇನಾ ಮೋಕ್ಷಿತಾ ಎಂದು ಸಹ ಸ್ಪರ್ಧಿಗಳು ಮಾತ್ರವಲ್ಲದೇ ವೀಕ್ಷಕರು ಸಹ ಹುಬ್ಬೇರಿಸುವಂತೆ ಮಾಡಿದೆ. ತಾವಾಯಿತು, ತಮ್ಮ ಕೆಲಸವಾಯಿತು, ಬಿಗ್ ಬಾಸ್ ಟಾಸ್ಕ್ ಆಯಿತು ಅಂತಾ ಇದ್ದ ಮೋಕ್ಷಿತಾ ಅವರು ದಿಢೀರ್ ಹೊಸ ಅವತಾರ ತಾಳಿದ್ದು, ಒಂದು ಕ್ಷಣಕ್ಕೆ ಇಡೀ ಮನೆ ಸೈಲೆಂಟಾಗಿದೆ. ಇಂದಿನ ಸಂಚಿಕೆಯಲ್ಲೂ ತಮ್ಮ ಖಡಕ್ ಮಾತಿನಿಂದ ಗಮನ ಸೆಳೆಯಲಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ವೀಕ್ಷಕರು ಕಾತರರಾಗಿದ್ದಾರೆ.
ಭಾನುವಾರ ರಾತ್ರಿ ಪ್ರಸಾರವಾದ ಸಂಚಿಕೆಯಲ್ಲೇ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ತಿಳಿಯಬೇಕಿತ್ತು. ಆದ್ರೆ ಬಿಗ್ ಬಾಸ್ ಅದನ್ನು ಸೋಮವಾರದ ಸಂಚಿಕೆವರೆಗೂ ಕಾಯ್ದಿರಿಸಿತ್ತು. ಎಲಿಮಿನೇಷನ್ ಪ್ರಕ್ರಿಯೆಯ ಕೊನೆಯಲ್ಲಿ ಉಳಿದುಕೊಂಡ ಹಂಸ ಮತ್ತು ಮೋಕ್ಷಿತಾ ಅವರನ್ನು ಎರಡು ಕಾರಿನಲ್ಲಿ ಕರೆದೊಯ್ಯಲಾಯಿತು. ಒಂದು ಕಾರ್ ವಾಪಸ್ ಬಂದು ಮೋಕ್ಷಿತಾ ಅವರು ಸೇಫ್ ಅನ್ನೋ ವಿಚಾರ ಮನೆಮಂದಿ ಜೊತೆಗೆ ನೋಡುಗರಿಗೆ ತಿಳಿಯಿತು. ಕಾರಿನಿಂದ ಇಳಿಯುತ್ತಿದ್ದಂತೆ ಈವರೆಗೆ ತಮ್ಮ ಮನದಲ್ಲೇ ಅದುಮಿಟ್ಟಿದ್ದ ಆಕ್ರೋಶವನ್ನು ಹೊರಹಾಕಿದರು. ತಮ್ಮ ಮತ್ತು ಗೆಳತಿ ಗೌತಮಿ ಬಗ್ಗೆ ಮಾತನಾಡಿದ್ದ ತ್ರಿವಿಕ್ರಮ್ ಮೇಲೆ ಕಿಡಿಕಾರಿದರು. ಬಿಗ್ ಬಾಸ್ ಮನೆಯಲ್ಲಿ ನೀವು ಈವರೆಗೆ ಕಂಡಿರದ ಮೋಕ್ಷಿತಾ ಪರಿಚಯರಾದರು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ: ಅಭಿಮಾನಿಗಳ ಎದೆಯಲ್ಲಿ ಅರಳಿದ 'ಬೆಟ್ಟದ ಹೂ'
ಮನೆಯನ್ನು ಮರು ಪ್ರವೇಶಿಸುತ್ತಿದ್ದಂತೆ ಇಂದಿನಿಂದ ಅಸಲಿ ಆಟ ಶುರು, ಇನ್ಮೇಲೆ ರಿಯಲ್ ಗೇಮ್ ಸ್ಟಾರ್ಟ್. ನನ್ನನ್ನು ಆಚೆ ಹಾಕಬೇಕು, ಎಲಿಮಿನೇಶನ್ಗೆ ನಾಮಿನೇಟ್ ಮಾಡಬೇಕು ಅನ್ನೋದು ಇವರ ಪ್ಲಾನ್. ಈ ಮನೆಯಲ್ಲಿ ಹತ್ತು ವಾರ ಇರೋರು ಯಾರು ಅನ್ನೋದನ್ನು ನೋಡೇ ಬಿಡ್ತೀನಿ ಅಂತಾ ಖಡಕ್ ಆಗಿ ತಮ್ಮ ಮಾತುಗಳನ್ನು ಮುಂದುವರಿಸಿದರು.
ಇದನ್ನೂ ಓದಿ: ಆ್ಯಕ್ಟಿಂಗ್, ಲವ್, ಫೇವರೆಟ್ ಸಾಂಗ್: ಪುನೀತ್ ಕುರಿತ ಇಂಟ್ರೆಸ್ಟಿಂಗ್ ಸಂಗತಿಗಳು
''ಕೆಂಡದ ಹೊಂಡವಾಯ್ತಾ ಕ್ಯಾಪ್ಟನ್ಸಿಯ ಹಾದಿ?'' ಎಂಬ ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲೂ ಮೋಕ್ಷಿತಾ ಖಡಕ್ ಆಗಿ ಮಾತನಾಡಿ ಗಮನ ಸೆಳೆದಿದ್ದಾರೆ. ರೂಲ್ ಈಸ್ ಅ ರೂಲ್ ಈವನ್ ಫಾರ್ ಅ ಫೂಲ್ ಎಂಬ ಡೈಲಾಗ್ ಹೊಡೆದಿದ್ದಾರೆ. ಕ್ಯಾಪ್ಟನ್ ಆಗಲು ಯಾರು ಅರ್ಹರಲ್ಲ ಎಂಬ ಪ್ರಶ್ನೆಗೆ ಹೆಚ್ಚಿನವರು ತ್ರಿವಿಕ್ರಮ್ ಹೆಸರನ್ನು ಸೂಚಿಸಿದ್ದು, ಮೋಕ್ಷಿತಾ ಸಹ ತ್ರಿವಿಕ್ರಮ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.