ETV Bharat / entertainment

ಪುಷ್ಪ 2 ರಿಲೀಸ್​ ಡೇಟ್ ಮುಂದೂಡಿಕೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅಭಿಮಾನಿ - Frustrated over Pushpa 2 Delay

author img

By ETV Bharat Karnataka Team

Published : Jun 18, 2024, 7:25 PM IST

'ಪುಷ್ಪ 2: ದಿ ರೂಲ್‌' ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಅಭಿಮಾನಿಯೋರ್ವ ಚಿತ್ರತಂಡಕ್ಕೆ ಕಾನೂನು ಕ್ರಮದ ಬೆದರಿಕೆ ಹಾಕಿದ್ದಾರೆ.

Allu Arjun and Rashmika Mandanna
ಅಲ್ಲು ಅರ್ಜುನ್​​ - ರಶ್ಮಿಕಾ ಮಂದಣ್ಣ (Photo: Instagram/Mythri Movie Makers)

''ಪುಷ್ಪ: ದಿ ರೈಸ್‌'' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಸಿನಿಮಾ ಸುತ್ತಲಿರುವ ಕ್ರೇಜ್​​​​ ಈಗಾಗಲೇ ಸ್ಪಷ್ಟವಾಗಿದೆ. ಆದ್ರೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದು ಮಾತ್ರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

'ಪುಷ್ಪ 2: ದಿ ರೂಲ್‌'ನ ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಂದುವರಿದಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್ 15 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಮೊದಲು ತಿಳಿಸಿದ್ದು, ಅಭಿಮಾನಿಗಳು ಉತ್ಸಾಹದಲ್ಲಿದ್ದರು. ಆದ್ರೆ ನಿನ್ನೆಯಷ್ಟೇ ಪುಷ್ಪ ಸೀಕ್ವೆಲ್​​​ನ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ ಎಂದು ಚಿತ್ರತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ. ರಶ್ಮಿಕಾ - ವಿಕ್ಕಿ ಕೌಶಲ್ ಜೋಡಿಯ ಛಾವಾ ಚಿತ್ರ ಕೂಡ ಡಿಸೆಂಬರ್ 6ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ.

ಬಾಕಿ ಉಳಿದಿರುವ ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಸಾಕಷ್ಟು ಇರುವುದರಿಂದ, ಸಿನಿಮಾ ಮುಂದೂಡಲ್ಪಟ್ಟಿದೆ. ಈ ಚಿತ್ರದ ಮೇಲಿನ ನಿರೀಕ್ಷೆಗಳು ಶಿಖರದಷ್ಟಿರುವ ಹಿನ್ನೆಲೆ, ಸಿನಿಮಾದ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಚಿತ್ರತಂಡ ಸಿದ್ಧವಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ದಿನ ಮುಂದೂಡಲ್ಪಟ್ಟಿದೆ. ಆದ್ರೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ. ಕೆಲ ಅಭಿಮಾನಿಗಳು ತಮ್ಮ ಆಕ್ರೋಶ, ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಹಲವರು ಚಿತ್ರತಂಡದ ಈ ನಿರ್ಧಾರದ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.

ನಿರಾಶೆಗೊಂಡ ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರೇಕ್ಷಕರ ಭಾವನೆಗಳೊಂದಿಗೆ ಚಲನಚಿತ್ರ ನಿರ್ಮಾಪಕರು ಆಟವಾಡುತ್ತಿದ್ದಾರೆ ಎಂದು ಆರೋಪಿಸಿ, ಶೀಘ್ರ ಬಿಡುಗಡೆಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ವಿಚಾರಣೆ ವೇಳೆ ಪವಿತ್ರಾ ಗೌಡ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದ ಪೊಲೀಸರು - Pavitra Gowda unwell

"ಚಿತ್ರ ಜೂನ್​​ ಅಲ್ಲೇ ಬಿಡುಗಡೆಯಾಗಬೇಕಿತ್ತು. ಡಿಸೆಂಬರ್​ಗೇಕೆ ಮುಂದೂಡಿಕೆಯಾಯಿತು. ಚಲನಚಿತ್ರ ನಿರ್ಮಾಪಕರಿಗಿದು ತಮಾಷೆಯ ವಿಷಯವೇ. ಪ್ರೇಕ್ಷಕರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಪುಷ್ಪ ಕಮ್ಯುನಿಟಿ ಪರವಾಗಿ, ನಾನು ಸಿನಿಮಾವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಟ್ವೀಟ್​ ಮಾಡಿ, "ಓ ಗಾಡ್​, ಬಿಡುಗಡೆ ದಿನಾಂಕವನ್ನು ದಲಾಯಿಸಿದ್ದೇಕೆ? ಎಷ್ಟು ಬಾರಿ ಬದಲಾಯಿಸುತ್ತೀರಿ? ಇದು ಸರಿಯಲ್ಲ" ಎಂದಿದ್ದಾರೆ.

ಇದನ್ನೂ ಓದಿ: ಪುಷ್ಪ 2 vs ಛಾವಾ: ರಶ್ಮಿಕಾರ ಎರಡೂ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್​ ಪಕ್ಕಾ - Pushpa 2 Vs Chhava

ಮತ್ತೊಂದೆಡೆ, ಹಲವರು ಚಿತ್ರತಂಡದ ನಿರ್ಧಾರವನ್ನು ಅರ್ಥಮಾಡಿಕೊಂಡಿದ್ದಾರೆ. 'ಪುಷ್ಪ: ದಿ ರೈಸ್‌'ನ ಯಶಸ್ಸನ್ನು ಉಲ್ಲೇಖಿಸಿದ್ದಾರೆ. ಆರಂಭದಲ್ಲಿ 'ಪುಷ್ಪ 1' ಅನ್ನು 2021ರ ಆಗಸ್ಟ್​, ಸ್ವಾತಂತ್ರಯ ದಿನಾಚರಣೆ ಸಂದರ್ಭ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಅಂತಿಮವಾಗಿ ಡಿಸೆಂಬರ್ 17ರಂದು ಚಿತ್ರಮಂದಿರ ಪ್ರವೇಶಿಸಿ, ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಅಭಿಮಾನಿಯೋರ್ವರು, ಇದನ್ನು ಕಾಕತಾಳೀಯ ಎಂದು ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.