ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ತಮ್ಮ ಸೌಂದರ್ಯದಲ್ಲಿ ಯಾವ ನಟಿಗೂ ಕಮ್ಮಿ ಇಲ್ಲ. ಮೀರಾ ರಜಪೂತ್ ಅವರು ತಮ್ಮದೇ ಆದ ಫ್ಯಾಷನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದು, ಶಾಹಿದ್ ಕಪೂರ್ ಅವರ ಪತ್ನಿಯಾಗಿ ಮಾತ್ರವಲ್ಲದೆ, ತನ್ನದೇ ಆದ ಶೈಲಿಯ ಫ್ಯಾಷನ್ ಐಕಾನ್ ಆಗಿಯೂ ಗಮನ ಸೆಳೆದಿದ್ದಾರೆ. ಮೀರಾ ರಜಪೂತ್ ಅವರ ಈವರೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಗಳನ್ನು ಪಡೆದಿರುವ ಫೋಟೋಗಳಲ್ಲಿನ ಅವರ ಕಾಸ್ಟ್ಯೂಮ್ ಹಾಗೂ ಆಭರಣಗಳ ಸೆಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ.
ಸಮಕಾಲೀನ ಹಾಗೂ ಕ್ಲಾಸಿಕ್ ಚಾರ್ಮ್ ಸಮ್ಮಿಲನವಿರುವ ಆಭರಣಗಳ ಕಲೆಕ್ಷನ್ ಮೀರಾ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಅವರಲ್ಲಿರುವ ಆಭರಣಗಳ ಸಂಗ್ರಹ ದೈನಂದಿನ ಉಡುಗೆ ಹಾಗೂ ರೆಡ್ ಕಾರ್ಪೆಟ್ ಈವೆಂಟ್ಗಳೆರಡಕ್ಕೂ ಸರಿಹೊಂದುವಂತಿವೆ. ಅವರು ಮಾಡುವ ಆಭರಣಗಳ ಸೆಲೆಕ್ಷನ್ ಸಾಂಪ್ರದಾಯಿಕ ಪರಂಪರೆಯನ್ನು ಆಧುನಿಕ ಶೈಲಿಯೊಂದಿಗೆ ಬೆಸೆಯುವ ಅವರ ಕೌಶಲ್ಯವನ್ನು ತೋರಿಸುತ್ತದೆ.
ಮೀರಾ ಅವರು ಆಧುನಿಕ ವಜ್ರದ ವಿನ್ಯಾಸಗಳಿಗೆ ಹೆಚ್ಚು ಆಕರ್ಷಿತಗೊಂಡಿದ್ದರೂ, ಸಾಂಪ್ರದಾಯಿಕ ಪೋಲ್ಕಿ ಆಭರಣಗಳತ್ತವೂ ಸಮಾನವಾದ ಮೆಚ್ಚುಗೆ ಹೊಂದಿದ್ದಾರೆ. ಮೀರಾ ಆಗಾಗ್ಗೆ ಅನಿತಾ ಡೋಂಗ್ರೆ ಪಿಂಕ್ ಸಿಟಿಯಿಂದ ಸಿಂಗಲ್ ಲೈನ್ ಪೋಲ್ಕಿ ನೆಕ್ಲೇಸ್ನಂತಹ ಹಳದಿ ಪ್ರಿಂಟೆಡ್ ಡಿಸೈನರ್ ಸೀರೆಗಳಿಗೆ ಒಪ್ಪುವಂತಹ ಆಭರಣಳನ್ನು ಆಯ್ಕೆ ಮಾಡುತ್ತಿರುತ್ತಾರೆ.
ಡೋಂಗ್ರೆ ಅವರ ಚಾಂದ್ಬಾಲಿ ಶೈಲಿಯ ಕಿವಿಯೋಲೆಗಳಿಗೆ ಅಭಿಮಾನಿಯಾಗಿರುವ ಮೀರಾ ಅವರು, ಉತ್ಕೃಷ್ಟವಾದ ಮಾರ್ಸಾಲಾ ವೆಲ್ವೆಟ್ ಲೆಹೆಂಗಾ ದಿರಿಸಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವಂತಹ ಆಕಾರವಿಲ್ಲದಿರುವ ವಜ್ರಗಳು, ಹಸಿರು ಲೇಪಿತ, ರಷ್ಯನ್ ಪಚ್ಚೆಗಳು, ಸೌಥ್ ಸೀಪರ್ಲ್ನಿಂದ ತಯಾರಿಸಿದ ಆಭರಣವನ್ನು ಸೆಲೆಕ್ಟ್ ಮಾಡುತ್ತಾರೆ.
ಆಕಾಶ್ ಹಾಗೂ ಶ್ಲೋಕಾ ಅಂಬಾನಿ ಅವರ ಮದುವೆ ಸಮಾರಂಭಕ್ಕಾಗಿ ಸುನೀತಾ ಶೇಖಾವತ್ ಅವರು ತಯಾರಿಸಿದಂತಹ ಮೀನಕಾರಿ ಚೋಕರ್ ಹಾಗೂ ಕಡವನ್ನು ಧರಿಸಿದ್ದರು. ಈ ಆಭರಣಗಳು ಅವರು ಧರಿಸಿದ್ದ ಅನುಜ್ ಮೋದಿ ಲೆಹೆಂಗಾಕ್ಕೆ ಸುಂದರವಾಗಿ ಒಪ್ಪುವಂತಿತ್ತು. ಸ್ನೇಹಿತರೊಬ್ಬರ ಮದುವೆ ಸಮಾರಂಭದಲ್ಲಿ ಮೀರಾ ತಿಳಿ ಗುಲಾಬಿ ಬಣ್ಣದ ಲೆಹೆಂಗಾಗೆ ಹೊಂದಿಕೆಯಾಗುವಂತಹ, ಶೇಖಾವತ್ ಅವರು ತಯಾರಿಸಿದ ಹೂವಿನಾಕಾರದ ಪೋಲ್ಕಿ ಚೋಕರ್ ಧರಿಸಿದ್ದರು. ಆ ಉಡುಗೆಯಲ್ಲಿ ಅವರು ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು.
ಯಾವುದೇ ರೀತಿಯ ಕಿವಿಯೋಲೆಗಳನ್ನು ಅವುಗಳ ಕನಿಷ್ಠ ಡಿಸೈನ್ ಆಗಿರಲಿ ಅಥವಾ ಅದ್ಧೂರಿಯಾಗಿರಲಿ, ಅವುಗಳು ತಾವು ಧರಿಸಿರುವ ಬಟ್ಟೆಗಳು ಹಾಗೂ ಆ ಕಾಲಕ್ಕೆ ಪ್ರಸ್ತುತವಾಗಿವೆಯೇ ಎಂಬುದನ್ನು ಮೀರಾ ಮೊದಲು ಖಚಿತಪಡಿಸಿಕೊಳ್ಳುತ್ತಾರೆ. ಆ ಕಾಲಕ್ಕೆ ಪ್ರಸ್ತುತವೆನಿಸುವ ಆಭರಣಗಳ ಶೈಲಿಯನ್ನೇ ಅವರು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಸಾಂಪ್ರದಾಯಿಕ ಆಭರಣವನ್ನು ತೊಟ್ಟರೂ, ಅವುಗಳಿಗೆ ಆಧುನಿಕ ಸ್ಪರ್ಶವನ್ನೂ ನೀಡುವ ಕೆಲಸ ಮಾಡುತ್ತಾರೆ.
ಸಾಮಾನ್ಯವಾಗಿ ಸರಳವಾದ ಬಟ್ಟೆಗಳನ್ನು ಧರಿಸಿ, ಅವುಗಳಿಗೆ ಹೊಂದಾಣಿಕೆಯಾಗುವಂತಹ ಉಂಗುರ, ಕಿವಿಯೋಲೆ ಹಾಗೂ ಆಭರಣಗಳ ವಿನ್ಯಾಸಗಳನ್ನು ಧರಿಸುತ್ತಾರೆ. ಯಾವಾಗಲಾದರೂ ಒಮ್ಮೆ ಈವೆಂಟ್ಗೆ ಹೊಂದುವಂತೆ ಬೋಲ್ಡ್, ವರ್ಣರಂಜಿತ ರತ್ನ, ಸ್ಟೋನ್ಗಳ ಕುಸುರಿಯಿರುವ ಆಭರಣ ಮತ್ತು ಹೊಳೆಯುವ ನೀಲಮಣಿ ನೆಕ್ಲೇಸ್ ಅಥವಾ ಪಚ್ಚೆ ಕಲ್ಲುಗಳ ಕಿವಿಯೋಲೆಗಳನ್ನೂ ಧರಿಸುತ್ತಾರೆ.
ಒಟ್ಟಿನಲ್ಲಿ, ತಮ್ಮ ಕಾಸ್ಟ್ಯೂಮ್ಗೆ ಮ್ಯಾಚ್ ಆಗುವಂತಹ ಆಭರಣಗಳನ್ನು ಧರಿಸುವ ಮೂಲಕ ಮೀರಾ ರಜಪೂತ್ ಕಪೂರ್ ಅವರು ತಮ್ಮದೇ ಆದ ಆಕರ್ಷಿತ ಸ್ಟೈಲ್ವೊಂದನ್ನು ರೂಪಿಸಿಕೊಂಡಿದ್ದಾರೆ.