ಮುಂಬೈ: ಬಾಲಿವುಡ್ ಬೆಡಗಿ ಮಲ್ಲಿಕಾ ಶರವಾತ್ ಅಕ್ಯುಪಂಕ್ಚರ್ ತಮ್ಮ ಮೆಚ್ಚಿನ ಚಿಕಿತ್ಸೆಯಾಗಿದ್ದು, ಇದನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ಬೆಡ್ ಮೇಲೆ ಮಲಗಿ, ಸೂಜಿಗಳಿಂದ ತಮ್ಮ ಮುಖಕ್ಕೆ ಚುಚ್ಚಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ಅಕ್ಯುಪಂಕ್ಚರ್ ಚಿಕಿತ್ಸೆಯಲ್ಲಿ ದೇಹದ ನಿರ್ದಿಷ್ಟ ಪಾಯಿಂಟ್ನಲ್ಲಿ ಉತ್ತೇಜಿಸಲು ಸಣ್ಣ ಸೂಜಿಗಳನ್ನು ತ್ವಚೆಯ ಮೇಲೆ ಚುಚ್ಚಲಾಗುವುದು. ಈ ಚಿಕಿತ್ಸೆಯು ನೋವು ಸೇರಿದಂತೆ ಹಲವು ಆರೋಗ್ಯ ಪರಿಸ್ಥಿತಿಗಳನ್ನು ಸುಧಾರಣೆಗೆ ಸಹಾಯ ಮಾಡುತ್ತದೆ. ಇದು ಸಾಂಪ್ರದಾಯಿಕ ಚೀನಿ ಚಿಕಿತ್ಸೆಯಾಗಿದೆ. ಒಟ್ಟಾರೆ ಯೋಗಕ್ಷೇಮ ಮತ್ತು ಒತ್ತಡ ನಿವಾರಣೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಪ್ರಯೋಜನವನ್ನು ಈ ಚಿಕಿತ್ಸೆ ಹೊಂದಿದೆ.
ಈ ಚಿಕಿತ್ಸೆ ಪಡೆಯುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿರುವ ನಟಿ. ನನ್ನ ಅಚ್ಚುಮೆಚ್ಚಿನ ಚಿಕಿತ್ಸೆ ಅಂಕ್ಯುಪಂಕ್ಚರ್ ಎಂದಿದ್ದಾರೆ. ಇದಕ್ಕೆ ಮೊದಲು ಅವರು, ಶನಿವಾರ ಹಂಚಿಕೊಂಡ ಪೋಸ್ಟ್ನಲ್ಲಿ ಬಿಸಿಲಿನ ಬೇಗೆ ನಿವಾರಿಸಲು ಈಜುಕೊಳದಲ್ಲಿ ಇಳಿದಿರುವುದಾಗಿ ತಿಳಿಸಿದ್ದಾರೆ.
ಬೇಸಿಗೆಯ ಬಿರು ಬಿಸಿಲನ್ನು ಕಡಿಮೆ ಮಾಡುವಲ್ಲಿ ಪೂಲ್ಗಿಂತ ತಾಜಾತನ ನೀಡುವುದು ಮತ್ತೊಂದಿಲ್ಲ. ಈ ಬಿಸಿಲನ್ನು ನೀವು ಹೇಗೆ ನಿವಾರಿಸುತ್ತೀರಾ ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ, ಫಿಟ್ನೆಸ್ ಬಗ್ಗೆ ಅತ್ಯುತ್ಸಾಹವನ್ನು ಹೊಂದಿರುವ ನಟಿ ಮಲ್ಲಿಕಾ, ಆಗ್ಗಿಂದಾಗೆ ತಮ್ಮ ವರ್ಕ್ಔಟ್ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.
ವೃತ್ತಿ ಜೀವನದೆಡೆಗೆ ಗಮನಿಸಿಸುವುದಾದರೆ ನಟಿ, ಕಡೇಯ ಬಾರಿ ಕಾಮಿಡಿ ಡ್ರಾಮಾವಾಗಿದ್ದ, 'ಆರ್ಕೆ'. ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರಜತ್ ಕಪೂರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಶೋರೆಯ್, ಮನು ರಿಷಿ ಚಧಾ, ಕುಬ್ರಾ ಶೇಠ್ ಕಾಣಿಸಿಕೊಂಡಿದ್ದರು.
2002ರಲ್ಲಿ ಜೀನಾ ಸಿರ್ಫ್ ಮೆರೆ ಲಿಯಾ ಚಿತ್ರದ ಮೂಲಕ ನಟಿ ಬಾಲಿವುಡ್ ಪ್ರವೇಶಿಸಿದ್ದರು. ಇತ್ತೀಚಿಗೆ ಖ್ವಾಹಿಶ್ ಮತ್ತು 'ಕಿಸ್ ಕಿಸ್ ಕಿ ಕಿಸ್ಮತ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2004ರಲ್ಲಿ ನಟ ಇಮ್ರಾನ್ ಹಶ್ಮಿ ಜೊತೆಗೆ ಮರ್ಡರ್ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ ಬಳಿಕ ಇವರು ಚಿತ್ರರಂಗದಲ್ಲಿ ಮುನ್ನಲೆಗೆ ಬಂದಿದ್ದರು.
ಬಾಲಿವುಡ್ ಮಾತ್ರವಲ್ಲದೇ, ಹಾಲಿವುಡ್ನಲ್ಲೂ ಮಲ್ಲಿಕಾ ಶೆರಾವತ್ ಮಿಂಚಿದ್ದಾರೆ. 'ಹಿಸ್ಸ್' ಮತ್ತು 'ಪೊಲಿಟಿಕ್ಸ್ ಆಫ್ ಲವ್' ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ತೆರೆಮರೆಗೆ ಸರಿದಿರುವ ನಟಿ, ಅಂತಹ ಹೇಳಿಕೊಳ್ಳುವ ಪಾತ್ರಗಳಲ್ಲಿ ಮಿಂಚುತ್ತಿಲ್ಲ. ಆದರೆ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 18 ವರ್ಷಗಳ ನಂತರ ತೆಲುಗು ಪರದೆ ಮೇಲೆ ಈ ನಟಿಯ ಮಿಂಚು