ಹೈದರಾಬಾದ್: ರಾಮಲಲ್ಲಾ ಪ್ರತಿಷ್ಠಾಪನೆ ಇಂದು ಅದ್ಧೂರಿಯಾಗಿ ನಡೆದ್ದು, ಇದೊಂದು ಐತಿಹಾಸಿಕ ಘಟನೆಯಾಗಿ ರೂಪುಗೊಂಡಿದೆ. ಭಾರತದ ಚಿತ್ರರಂಗದ ಹಲವು ಭಾಷೆಯ ನಟ - ನಟಿಯರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಮನಾಮ ಸ್ಮರಣೆ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರಾಮನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಮಹೇಶ್ ಬಾಬು, ದೀಪಿಕಾ ಪಡುಕೋಣೆ, ಕಂಗನಾ ರಣಾವತ್, ವರುಣ್ ಸೇರಿದಂತೆ ಅನೇಕ ಸೆಲಿಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಐತಿಹಾಸಿಕ ದಿನದ ಕುರಿತು ಪ್ರತಿಕ್ರಿಯಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
ರಾಮಲೀಲಾ ಚಿತ್ರದ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ರಾಮನ ವಿಗ್ರಹದ ಜೊತೆಗೆ ಬೆಳಗಿನ ದೀಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಕಂಗನಾ ರಣಾವತ್, ವಿಡಿಯೋವನ್ನು ಹಂಚಿಕೊಂಡಿದ್ದು, 'ರಾಮ ಬಂದನು' ಎಂದು ಕ್ಯಾಪ್ಷನ್ ಬರೆದಿದ್ದಾರೆ. ಈ ವಿಡಿಯೋದಲ್ಲಿ ನಟಿ, ಜೈ ಶ್ರೀ ರಾಮ್ನ ಜಪ ಮಾಡಿದ್ದಾರೆ. ಕಂಗನಾ ಇಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಗುಲದ ಮುಂದೆ ಹೆಲಿಕಾಪ್ಟರ್ ಮೇಲಿನಿಂದ ಹೂವಿನ ಮಳೆ ಸುರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಸೂಪರ್ಸ್ಟಾರ್ ಮಹೇಶ್ ಬಾಬು ಕೂಡ ಈ ದಿನದ ಸಂಭ್ರಮವನ್ನು ಹಂಚಿಕೊಳ್ಳುವುದನ್ನು ಮರೆತಿಲ್ಲ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ರಾಮನ ದೇಗುಲದ ಫೋಟೋ ಅವರು ಹಂಚಿಕೊಂಡಿದ್ದಾರೆ. ನಟ ವರುಣ್ ಧವನ್ ಕೂಡ ಈ ದಿನದ ಸಂತಸನದಲ್ಲಿ ಭಾಗಿಯಾಗಿದ್ದಾರೆ. ಇನ್ಸ್ಟಾಗ್ರಾಂನ ಸ್ಟೋರಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಹಂಚಿಕೊಂಡಿದ್ದಾರೆ. ಮೌನಿ ರಾಯ್ ಕೂಡ ಭಗವಾನ್ ರಾಮ ಮತ್ತು ಭಗವಾನ್ ಶಿವನ ಅನಿಮೇಟೆಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಜೈ ಶ್ರೀರಾಮ್. ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ.
ನಟ ಶೌರ್ಯ, ನಟಿ ಸಮಂತಾ ರುತ್ ಪ್ರಭು ಕೂಡ ಭಗವಾನ್ ರಾಮನೊಂದಿಗೆ ಸೀತಾ ಮತ್ತು ಲಕ್ಷ್ಮಣನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ 'ಅಯೋಧ್ಯೆಯಲ್ಲಿ ರಾಮ ಮತ್ತೊಮ್ಮೆ ವಿರಾಜಮಾನನಾಗಿದ್ದು, ವಿಜಯ ಪ್ರತಿಧ್ವನಿಸಿದೆ' ಎಂದಿದ್ದಾರೆ.
ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ದಂಪತಿಗಳಾದ ನಟಿ ರಣಬೀರ್ ಕಪೂರ್- ಆಲಿಯಾ ಭಟ್, ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಹಾಗೂ ನಟ ಅಮಿತಾಬ್ ಬಚ್ಚನ್, ಪವನ್ ಕಲ್ಯಾಣ್, ಚಿರಂಜೀವಿ, ರಾಮ್ ಚರಣ್, ಮಾಧುರಿ ದೀಕ್ಷಿತ್, ರಜನೀಕಾಂತ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಂದೇ ಅಯೋಧ್ಯೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ