ETV Bharat / entertainment

'ಫುಲ್‌ ಮೀಲ್ಸ್' ಸಿನಿಮಾದಲ್ಲಿ ಲಿಖಿತ್‌ ಶೆಟ್ಟಿಗೆ ವೆಡ್ಡಿಂಗ್ ಫೋಟೋಗ್ರಾಫರ್ ಪಾತ್ರ - Full meals

'ಫುಲ್ ಮೀಲ್ಸ್' ಚಿತ್ರೀಕರಣ ಮುಕ್ತಾಯವಾಗಿದೆ. ಸಿನಿಮಾದ ಉಳಿದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಶೀಘ್ರವೇ ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ.

ಫುಲ್ ಮೀಲ್ಸ್  ಸಂಕಷ್ಟ ಕರ ಗಣಪತಿ  ಲಿಖಿತ್ ಶೆಟ್ಟಿ  ವೆಡ್ಡಿಂಗ್ ಫೋಟೋಗ್ರಾಫರ್  wedding photographer  Full meals  Likhit Shetty
ವೆಡ್ಡಿಂಗ್ ಫೋಟೋಗ್ರಾಫರ್ ಆದ ಸಂಕಷ್ಟ ಕರ ಗಣಪತಿ ಖ್ಯಾತಿಯ ಲಿಖಿತ್ ಶೆಟ್ಟಿ
author img

By ETV Bharat Karnataka Team

Published : Jan 23, 2024, 10:40 AM IST

'ಸಂಕಷ್ಟಕರ ಗಣಪತಿ' ಮತ್ತು 'ಫ್ಯಾಮಿಲಿ ಪ್ಯಾಕ್' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟ ಲಿಖಿತ್ ಶೆಟ್ಟಿ. ಇದೀಗ ವಿಭಿನ್ನ ಕಥೆ ಹೊಂದಿರುವ 'ಫುಲ್ ಮೀಲ್ಸ್' ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ, ಕನಕಪುರ ರಸ್ತೆಯ ರೆಸಾರ್ಟ್‌ವೊಂದರ ರಮಣೀಯ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸದ್ಯ ನಡೆಯುತ್ತಿವೆ.

ಎನ್.ವಿನಾಯಕ ನಿರ್ದೇಶನ: ಈ ಹಿಂದೆ ಸಂಕಷ್ಟಕರ ಗಣಪತಿ ಹಾಗೂ ಫ್ಯಾಮಿಲಿ ಪ್ಯಾಕ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಾಯಕ ಲಿಖಿತ್ ಶೆಟ್ಟಿ, ಫುಲ್ ಮೀಲ್ಸ್ ಮೂಲಕ ಮತ್ತೊಂದು ಹಂತ ಮೇಲೇರುವ ವಿಶ್ವಾಸ ಹೊಂದಿದ್ದಾರೆ. ಆಲ್ಬಮ್ ಸಾಂಗ್ಸ್ ಮತ್ತು ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಎನ್.ವಿನಾಯಕ ಈ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.

ಫುಲ್ ಮೀಲ್ಸ್  ಸಂಕಷ್ಟ ಕರ ಗಣಪತಿ  ಲಿಖಿತ್ ಶೆಟ್ಟಿ  ವೆಡ್ಡಿಂಗ್ ಫೋಟೋಗ್ರಾಫರ್  wedding photographer  Full meals  Likhit Shetty
'ಫುಲ್ ಮೀಲ್ಸ್' ಚಿತ್ರದ ಪೋಸ್ಟರ್

ತಾರಾಗಣ: ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ನಾಯಕಿಯರಾಗಿದ್ದಾರೆ. ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

ವೆಡ್ಡಿಂಗ್ ಫೋಟೋಗ್ರಾಫರ್ ಕಥಾ ಹಂದರ: ವೆಡ್ಡಿಂಗ್ ಫೋಟೋಗ್ರಾಫರ್ ಕಥಾ ಹಂದರ ಹೊಂದಿರುವ ಈ ಸಿನಿಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಇಷ್ಟಪಡುವ ವಿಶ್ವಾಸ ಚಿತ್ರತಂಡಕ್ಕಿದೆ. ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್.ಕುಮಾರ್ ಸಂಕಲನವಿದೆ.

ಇದನ್ನೂ ಓದಿ: ನಟಿ ಭಾವನಾರಿಂದ ತರಾಸು ವಿರಚಿತ 'ಹಂಸಗೀತೆ'ಯ ನೃತ್ಯರೂಪಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.