ETV Bharat / entertainment

ಲೈಟ್ ಬಾಯ್​​​ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್​​: ಇಂದೇ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ಯಶ್​​​ - Yash Toxic - YASH TOXIC

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿದೆ. ಯಶ್ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಲೈಟ್ ಬಾಯ್ ಕೈಯಲ್ಲಿ ತಮ್ಮ ಪ್ಯಾನ್ ವರ್ಲ್ಡ್ ಮೂವಿಯ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ ಗಮನ ಸೆಳೆದಿದ್ದಾರೆ.

Toxic Muhurta event
'ಟಾಕ್ಸಿಕ್' ಮುಹೂರ್ತ ಸಮಾರಂಭ (ETV Bharat)
author img

By ETV Bharat Entertainment Team

Published : Aug 8, 2024, 1:25 PM IST

'ಟಾಕ್ಸಿಕ್' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಕೆಜಿಎಫ್​​ 1 ಮತ್ತು 2 ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಸಂಪಾದಿಸಿರೋ ರಾಕಿಂಗ್​​ ಸ್ಟಾರ್​​​ ಸಿನಿಮಾ ಮೇಲೆ ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಗಣ್ಯರೂ ಕೂಡಾ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನ ಭೇಟಿ ಸಲುವಾಗಿ ಸುದ್ದಿಯಲ್ಲಿದ್ದ ತಂಡವಿಂದು ತಮ್ಮ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದೆ.

'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿಭಾಯ್​​​​ ಅಭಿನಯಿಸುತ್ತಿರುವ ಸಿನಿಮಾವೇ 'ಟಾಕ್ಸಿಕ್​​'. ಈ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಆದಾಗಿಂದಲೂ ಸ್ಯಾಂಡಲ್​​ವುಡ್​​ನಿಂದ ಹಿಡಿದು ಬಾಲಿವುಡ್ ವರೆಗೂ ಸಖತ್​​ ಸೆನ್ಸೇಷನ್​​ ಕ್ರಿಯೇಟ್ ಮಾಡಿದೆ. ಅನೌನ್ಸ್​​ಮೆಂಟ್​​​ಗೂ ಮುನ್ನ ಬಂದ ಅಂತೆಗಕಂತೆಗಳೂ ಕೂಡ ಕಡಿಮೆಯೇನಿಲ್ಲ. ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ನಾಯಕಿ ಕರೀನಾ ಕಪೂರ್ ಖಾನ್​​ ಎಂದೆಲ್ಲಾ ವದಂತಿ ಹರಡಿತ್ತು. ಆದರೆ ಇಂದು ಅಧಿಕೃತವಾಗಿ 'ಟಾಕ್ಸಿಕ್' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ನಡೆದ ಟಾಕ್ಸಿಕ್​​​​​​ ಮುಹೂರ್ತ ಸಮಾರಂಭಕ್ಕೆ ಚಿತ್ರತಂಡ ಸಾಕ್ಷಿಯಾಗಿತ್ತು.

Toxic Muhurta event
'ಟಾಕ್ಸಿಕ್' ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ (ETV Bharat)

ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದಿರುವ ವಿಷಯ ಅಂದ್ರೆ, ಯಶ್ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಲೈಟ್ ಬಾಯ್ ಕೈಯಲ್ಲಿ ತಮ್ಮ ಪ್ಯಾನ್ ವರ್ಲ್ಡ್ ಮೂವಿಯ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿದ್ದಾರೆ. ಈ ಮೂಲಕ ತಂತ್ರಜ್ಞ ಹಾಗೂ ಕಾರ್ಮಿಕರ ಮೇಲೆ ತಮಗಿರುವ ಗೌರವ, ಕಾಳಜಿಯನ್ನು ಸಾಬೀತುಪಡಿಸಿದ್ದಾರೆ. ಈ ಸುದ್ದಿಯನ್ನು ಕೆವಿನ್ ಪ್ರೊಡಕ್ಷನ್ಸ್​​​ ಅಧಿಕೃತವಾಗಿ ತಿಳಿಸಿದೆ.

Toxic Muhurta event
'ಟಾಕ್ಸಿಕ್' ಮುಹೂರ್ತ ಸಮಾರಂಭ (ETV Bharat)

ಬೆಂಗಳೂರಿನ ಹೆಚ್​​​ಎಂಟಿ ಜಾಗದಲ್ಲಿ ಸಿದ್ಧವಾಗಿರುವ ಟಾಕ್ಸಿಕ್ ಸೆಟ್​​ನಲ್ಲೇ ಮುಹೂರ್ತ ಕಾರ್ಯಕ್ರಮ ನಡೆಸಲಾಯಿತು. ಇಂದಿನಿಂದಲೇ ಶೂಟಿಂಗ್ ಸಹ ಆರಂಭವಾಗಲಿದ್ದು, ರಾಕಿ ಭಾಯ್ ಕೂಡಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೆವಿನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಒಟ್ಟಾರೆ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ ಸಿಕ್ಕಿದೆ.

Toxic Muhurta event
ನಟ ನಿರ್ಮಾಪಕರ ಸಂತಸದ ಕ್ಷಣ (ETV Bharat)

ಇದನ್ನೂ ಓದಿ: ಕಾಂತಾರ ಸೂಪರ್ ಹಿಟ್ ಆದ್ರೂ ರಿಷಬ್ ಬಾಡಿಗೆ ಮನೆಯಲ್ಲಿದ್ದಾರೆ: ಪ್ರಮೋದ್ ಶೆಟ್ಟಿ - Pramod Shetty Interview

ಇನ್ನೂ ಈ ಮೊದಲೇ ಹೇಳಿದಂತೆ 'ಟಾಕ್ಸಿಕ್' ಡ್ರಗ್ ಮಾಫಿಯಾ ಕಥೆಯನ್ನು ಒಳಗೊಂಡಿದೆ. ಯಶ್ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ಕಾಸ್ಟ್​​ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

Toxic Muhurta event
'ಟಾಕ್ಸಿಕ್' ಮುಹೂರ್ತ ಸಮಾರಂಭದಲ್ಲಿ ತಂಡ (ETV Bharat)

ಇದನ್ನೂ ಓದಿ: 230 ಸಿನಿಮಾ, 2 ರಾಷ್ಟ್ರಪ್ರಶಸ್ತಿ, ನವಿಲೇ ನಾಚುವ ನೃತ್ಯ: ದಕ್ಷಿಣ ಭಾರತದ ಈ ರೂಪಸಿ ಸಿಂಗಲ್​​ ಮದರ್​​! - Actress Shobhana

ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಸದ್ಯದಲ್ಲೇ ಈ ವಿಚಾರವನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ. ಈ ಸಿನಿಮಾವನ್ನು ಮಲೆಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರೋ ಹಿನ್ನೆಲೆ ಕುತೂಹಲ, ನಿರೀಕ್ಷೆಗಳು ದುಪ್ಪಟ್ಟಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿನಿಮಾದ ಶೂಟಿಂಗ್​​​ ಶುರುವಾಗಿದ್ದು, ಅಭಿಮಾನಿಗಳ ಕುತೂಹಲ ಗರಿಗೆದರಿದೆ ಸಿನಿಮಾವನ್ನು ಮುಂದಿನ ವರ್ಷ ಏಪ್ರಿಲ್​ 10ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

Toxic Muhurta event
ವೆಂಕಟ್ ನಾರಾಯಣ್ ಕೋನಂಕಿ ಜೊತೆ ಯಶ್​​ (ETV Bharat)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.