ETV Bharat / entertainment

'ಕುಬುಸ' ಬಿಡುಗಡೆ: ಚಿತ್ರತಂಡಕ್ಕೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್​​​​ಕುಮಾರ್ - Kubusa - KUBUSA

ರಘುರಾಮ್ ಚರಣ್ ಹೂವಿನ ಹಡಗಲಿ ನಿರ್ದೇಶನದ ಚೊಚ್ಚಲ ಚಿತ್ರ 'ಕುಬುಸ' ಬಿಡುಗಡೆಯಾಗಿದೆ.

Kubusa team
'ಕುಬುಸ' ಈವೆಂಟ್​ನಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್ (ETV Bharat)
author img

By ETV Bharat Karnataka Team

Published : Jul 26, 2024, 3:54 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳು ಮೂಡಿ ಬರುತ್ತಿವೆ. ಕೆಲ ಸಿನಿಮಾಗಳು ಟೈಟಲ್​​ನಿಂದ ಜನರ ಗಮನ ಸೆಳೆಯಲು ಶುರುಮಾಡಿವೆ. ಕಂಟೆಂಟ್ ಕೂಡ ಗಮನ ಸೆಳೆಯುತ್ತಿದೆ. ಇಂಥ ಸಿನಿಮಾಗಳ ಪೈಕಿ 'ಕುಬುಸ' ಕೂಡ ಒಂದು. ಇತ್ತೀಚೆಗೆ ಟ್ರೇಲರ್​​​ ಅನಾವರಣಗೊಂಡು ಗಮನ ಸೆಳೆದಿದ್ದ ಚಿತ್ರ ಇಂದು ತೆರೆಗಪ್ಪಳಿಸಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​​​ಕುಮಾರ್ 'ಕುಬುಸ' ಟ್ರೇಲರ್ ಅನಾವರಣಗೊಳಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಮಂಜಮ್ಮ ಜೋಗತಿ ಅವರು ಮುಖ್ಯ ಅತಿಥಿಯಾಗಿ ಮತ್ತು ಹೊಸಪೇಟೆಯ ಸಮಾಜ ಸೇವಕರಾದ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷರಾದ ಕವಿತಾ ಈಶ್ವರ್ ಸಿಂಗ್ ಭಾಗಿಯಾಗಿದ್ದರು. ಈವೆಂಟ್​ನಲ್ಲಿ ಮಾತನಾಡಿದ ಮಂಜಮ್ಮ ಜೋಗತಿ, ಓರ್ವ ಮಹಿಳೆ ನಿರ್ಮಾಪಕರಾಗಿ ಉತ್ತಮ ಚಲನಚಿತ್ರವನ್ನು ಕಷ್ಟಪಟ್ಟು ನಿರ್ಮಿಸಿದ್ದಾರೆ. ನಾವೆಲ್ಲರೂ ಅವರಿಗೆ ಪ್ರೋತ್ಸಾಹಿಸಬೇಕು. ನಾನು ಸದಾ ಕಲಾವಿದರಿಗೆ ಬೆಂಬಲವಾಗಿ ಇರುತ್ತೇನೆ ಎಂದು ಹೇಳಿದರು.

Kubusa team
'ಕುಬುಸ' ಈವೆಂಟ್​ನಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್ (ETV Bharat)

ಅಪ್ಪು ಅಭಿಮಾನಿ, ಯೂತ್ ಐಕಾನ್ ಎಂದು ಹೆಸರು ಪಡೆದಿರುವ ಸಮಾಜ ಸೇವಕ ಸಿದ್ದಾರ್ಥ್ ಸಿಂಗ್ ಅವರು ಅಪ್ಪು ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಕೇಳಿಕೊಂಡರು. ಜೊತೆಗೆ ಚಿತ್ರದ ಕಲಾವಿದರನ್ನು ಪ್ರೋತ್ಸಾಹಿಸಿದರು. ಇವರ ಜೊತೆ ಹೋಂ ಆಫ್ ಹೋಪ್ ಸಂಸ್ಥಾಪಕರಾದ ಆಟೋರಾಜ್, ಹರಿಪ್ರಸಾದ್, ಕೃಷ್ಣ, ರಿತ್ತಿ, ಯೂಸುಫ್, ಇಮ್ತಿಯಾಜ್, ರಾಜು ಉಪ್ಪರ್, ನಂದೀಶ ಸೇರಿ ಹಲವರು ಉಪಸ್ಥಿತರಿದ್ದರು.

Kubusa team
'ಕುಬುಸ' ಟ್ರೇಲರ್ ರಿಲೀಸ್​ ಈವೆಂಟ್​​ (ETV Bharat)

ಟ್ರೇಲರ್​​ ರಿಲೀಸ್ ಬಳಿಕ ಮಾತನಾಡಿದ್ದ ನಾಯಕ ನಟ ರಾಜ್ ಎಸ್ ಭಟ್, ಸಿನಿಮಾದ ಆಮಂತ್ರಣ ಹಾಡುಗಳು. ಟೀಸರ್, ಟ್ರೇಲರ್​​​ ಇನ್ನಷ್ಟು ಇನ್ವಿಟೇಶನ್ ಎಂದುಕೊಂಡು ಕೊಟ್ಟಿದ್ದೇವೆ. ಇಂಥ ಚಿತ್ರ ನಿರ್ಮಾಣ ಮಾಡಲು ವಿ ಶೋಭಾ ಆದಿ ನಾರಾಯಣರವರಂತಹ ಒಳ್ಳೆಯ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಈ ರೀತಿಯ ಚಿತ್ರಗಳು ಗೆಲ್ಲಬೇಕು. ಈ ಸಿನಿಮಾ ಗೆದ್ದಾಗ ಮಾತ್ರ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮ ಹಾಕಿದ್ದಾರೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ ಎಂದರು.

Kubusa team
'ಕುಬುಸ' ಕಲಾವಿದರು (ETV Bharat)

ನಿರ್ದೇಶಕ ರಘುರಾಮ ಚರಣ್ ಮಾತನಾಡಿ, ಪುಟ್ಟ ಕನಸೊಂದು ದೊಡ್ಡದಾಗುತ್ತಾ ಬಂತು. ಅದೀಗ ಸಿನಿಮಾ ರೂಪ ತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ. ಕಥೆ ಬರೆಯುವಾಗ ಏನು ವಿಶ್ವಲ್ ಬಂತೋ ಅದನ್ನೇ ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದಲ್ಲಿ ಬರುವ ಕಥೆಯಿದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ನಿರ್ಮಾಪಕಿ ವಿ.ಶೋಭಾ ಆದಿನಾರಾಯಣ ಮಾತನಾಡಿ, ಇದೊಂದು ಹಳ್ಳಿ ಸೊಗಡಿನ ಕಥೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಿದ್ದೇನೆ. ಚಿತ್ರದಲ್ಲಿ 4 ಹಾಡುಗಳಿದ್ದು, ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜನಪ್ರಿಯ ಲೇಖಕ ಕುಂ ವೀರಭದ್ರಪ್ಪ ಅವರ ಕಥೆ ಆಧರಿಸಿದ ಸಿನಿಮಾ 'ಕುಬುಸ' ಬಿಡುಗಡೆಗೆ ರೆಡಿಯಾಗಿದೆ. ರಘುರಾಮ್ ಚರಣ್ ಹೂವಿನಹಡಗಲಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಆರ್ ಚಂದ್ರು ಅವರ ಗರಡಿಯಲ್ಲಿ ಪಳಗಿರುವ ರಘು ರಾಮ್ ಚರಣ್ ಹೂವಿನಹಡಗಲಿ ನಿರ್ದೇಶನದ ಚೊಚ್ಚಲ ಚಿತ್ರವಿದು. ನಿರ್ದೇಶಕರಾದ ಟಿ.ಎಸ್ ನಾಗಾಭರಣ, ಪ್ರೇಮ್, ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಕೆಲಸ ಮಾಡಿರುವ ಅನುಭವದೊಂದಿಗೆ ಸ್ವತಂತ್ರ್ಯ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: 'ಪರಪಂಚ ಘಮ ಘಮ' ಅಂತಿದ್ದಾರೆ ದಿಗಂತ್​ ಟೀಂ: 'ಪೌಡರ್' ಚಿತ್ರತಂಡಕ್ಕೆ ಗಾಯಕ ಆಂಟೋನಿ ದಾಸ್ ಸಾಥ್ - Parapancha Gama Gama Song

ತಾಯಿ ಮಗನ ಸೆಂಟಿಮೆಂಟ್ ಸಿನಿಮಾವೇ 'ಕುಬುಸ'. ಈ ಸಿನಿಮಾದಲ್ಲಿ ರಾಮ ರಾಮ ರೇ ಖ್ಯಾತಿಯ ನಟರಾಜ್ ಎಸ್ ಭಟ್, ಮಂಜು ಆರ್ಯ ಮೈಸೂರ್, ರಂಗಭೂಮಿ ಕಲಾವಿದೆ ಹನುಮಕ್ಕ, ಮರಿಯಮ್ಮನಹಳ್ಳಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ 'ಕುಬುಸ' ಸಿನಿಮಾದ ಪ್ರಮುಖ ಆಕರ್ಷಣೆ. ನಟರಾಜ್ ಎಸ್ ಭಟ್ ಈ ಚಿತ್ರದಲ್ಲಿ ಎರಡು ಶೇಡ್​​ನಲ್ಲಿ ನಡೆಸಿದ್ದು, ಎರಡನೇ ನಾಯಕನಾಗಿ ಒಂದು ಸರಳ ಪ್ರೇಮಕಥೆ, ಪಟಾಕಿ ಖ್ಯಾತಿಯ ಮಂಜು ಆರ್ಯ ಕಾಣಿಸಿಕೊಳ್ಳಲಿದ್ದಾರೆ. ಅನಿಕಾ ರಮ್ಯ, ಮಹಾಲಕ್ಷ್ಮಿ ಕೂಡ ಚಿತ್ರದ ಲೀಡ್ ರೋಲ್​​ನಲ್ಲಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗುಂಡಿ ರಮೇಶ್ ಅವರು ಹಾಗೂ ಅವರ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನೂರ್ ಸ್ವಾಮಿ, ಹುಲಿಗೆಪ್ಪ ಕಟ್ಟಿಮನಿ, ಕನ್ನಡ ಕಲಾ ಸಂಘದ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: ಜು.29ಕ್ಕೆ 'ಕೆಡಿ' ಸಿನಿಮಾದಿಂದ ಸಿಗಲಿದೆ ಬಿಗ್​ ಅಪ್ಡೇಟ್​​: ಧ್ರುವ ಅರ್ಜಾ ಅಭಿಮಾನಿಗಳಲ್ಲಿ ಕಾತರ - KD Movie

ಕುಬುಸ ಸಿನಿಮಾದ ಮೂಲ ಕಥೆಯಲ್ಲಿ ಇರುವಂತೆ ಬಳ್ಳಾರಿಯ ಭಾಷಾ ಸೊಗಡನ್ನು ಇಲ್ಲಿ ಕಾಣಬಹುದಾಗಿದೆ. ಇದು ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು, ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿವೆ . ಪ್ರದೀಪ್ ಚಂದ್ರರವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಅರ್ಜುನ್ ಕಿಟ್ಟು ಸಂಕಲನ ನಿರ್ವಹಿಸಿದ್ದಾರೆ. ಚೇತನ್ ಶರ್ಮಾ ಎ ಅವರ ಕ್ಯಾಮರಾ ಕೈಚಳಕವಿದೆ. ಶಿವಮೂರ್ತಿ ದೋಣಿಮಲೆ ಅವರ ಸಹ ನಿರ್ದೇಶನ ಚಿತ್ರಕ್ಕಿದೆ. ವಿ ಶೋಭಾ ಸಿನಿಮಾಸ್ ಬ್ಯಾನರ್ ಅಡಿ ಕುಬುಸ ಚಿತ್ರ ನಿರ್ಮಾಣಗೊಂಡಿದ್ದು, ಇಂದು ತೆರೆಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.