ETV Bharat / entertainment

ದುಬೈನಲ್ಲಿ ಪತಿ ಸಿದ್ಧಾರ್ಥ್​ ಜೊತೆ ಕಪ್ಪು ಗೌನ್​ನಲ್ಲಿ ಕಂಗೊಳಿಸಿದ ಕಿಯಾರಾ: ವಿಡಿಯೋ

author img

By ETV Bharat Karnataka Team

Published : Feb 12, 2024, 3:33 PM IST

ದುಬೈನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಾವು ಕ್ಯಾಮರಾಗಳಿಗೆ ಸ್ಟೈಲಿಶ್​ ಪೋಸ್ ​ನೀಡುತ್ತಿರುವ ವಿಡಿಯೋವನ್ನು ನಟಿ ಕಿಯಾರಾ ಅಡ್ವಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Actress Kiara Advani shined in black gown with her husband Siddharth
ಪತಿ ಸಿದ್ಧಾರ್ಥ್​ ಜೊತೆ ಕಪ್ಪು ಗೌನ್​ನಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ

ಬಾಲಿವುಡ್​ನ ಆಕರ್ಷಕ ತಾರಾ ದಂಪತಿಗಳಲ್ಲಿ ಒಂದಾದ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ಜೋಡಿ ಇತ್ತೀಚಿಗೆ ದುಬೈ ಕಾರ್ಯಕ್ರಮವೊಂದರಲ್ಲಿ ಅತ್ಯಾಕರ್ಷಕ ವಸ್ತ್ರ ವಿನ್ಯಾಸದಲ್ಲಿ ಕಾಣಿಸಿಕೊಂಡರು. ಕಿಯಾರಾ ಸ್ಟ್ರಾಪ್​ಲೆಸ್​ ಕಪ್ಪು ಗೌನ್​ ಮತ್ತು ಹರಳಿನ ಆಭರಣ ಧರಿಸಿದ್ದರೆ, ಸಿದ್ಧಾರ್ಥ್​ ಕಪ್ಪು ಟುಕ್ಸೆಡೋ, ಬೋ ಟೈ ಮತ್ತು ಕಿತ್ತಾಳೆ ಬಣ್ಣದ ಜಾಕೆಟ್​ನಲ್ಲಿ ಫ್ಯಾಶನ್‌ಪ್ರಿಯರ ಗಮನ ಸೆಳೆದರು. ಭಾರತಕ್ಕೆ ಹಿಂತಿರುಗಿರುವ ಜೋಡಿ, ತಾವು ಕ್ಯಾಮರಾಗೆ ಪೋಸ್​ ನೀಡುತ್ತಿರುವ ತೆರೆಮರೆಯ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಜೊತೆಗೆ, "ನನ್ನ ಒನ್ ಆ್ಯಂಡ್ ಓನ್ಲಿ @ooonezabeel @ooresortsನಲ್ಲಿ ಓಪನಿಂಗ್​ ನೈಟ್" ಎಂದು ಬರೆದಿದ್ದಾರೆ.

ಇನ್ನು ಸಿನಿಮಾಗಳತ್ತ ಕಣ್ಣಾಯಿಸುವುದಾದರೆ, ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ರೋಹಿತ್​ ಶೆಟ್ಟಿ ನಿರ್ದೇಶನದ 'ಇಂಡಿಯನ್​ ಪೊಲೀಸ್​ ಫೋರ್ಸ್'​ ವೆಬ್​ ಸಿರೀಸ್​ ಇತ್ತೀಚೆಗೆ ಬಿಡುಗಡೆಗೊಂಡಿದೆ. ಇದರಲ್ಲಿ ಸಿದ್ಧಾರ್ಥ್​ ಪೊಲೀಸ್​ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಸಿರೀಸ್​ನಲ್ಲಿ ಶಿಲ್ಪಾ ಶೆಟ್ಟಿ ಹಾಗೂ ವಿವೇಕ್​ ಒಬೆರಾಯ್​ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇದಾದ ಬಳಿಕ 'ಯೋಧಾ' ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿಶಾ ಪಟಾನಿ ಹಾಗೂ ರಾಶಿ ಖನ್ನಾ ಕೂಡ ಇವರೊಂದಿಗೆ ತೆರೆ ಹಂಚಿಕೊಳ್ಳುವರು.

ಕಿಯಾರಾ ಅಡ್ವಾನಿ ಅವರು ಎಸ್.ಶಂಕರ್​ ನಿರ್ದೇಶನದ, ಆರ್​ಆರ್​ಆರ್​ ಖ್ಯಾತಿಯ ಟಾಲಿವುಡ್​ ಸ್ಟಾರ್​ ರಾಮ್​ ಚರಣ್​ ನಾಯಕನಾಗಿರುವ ಪೊಲಿಟಿಕಲ್​ ಆ್ಯಕ್ಷನ್​ ಥ್ರಿಲ್ಲರ್​ 'ಗೇಮ್​ ಚೇಂಜರ್'​ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ತೆಲುಗು ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಈ ಹಿಂದೆ ರಾಮ್​ ಚರಣ್​ ಅವರೊಂದಿಗೆ 'ವಿನಯ ವಿಧೇಯ ರಾಮ' ಸಿನಿಮಾದಲ್ಲಿ ಕಿಯಾರಾ ನಟಿಸಿದ್ದರು. ಇದಲ್ಲದೆ, ಕಿಯಾರಾ ಅವರು ಹೃತಿಕ್​ ರೋಷನ್​ ಹಾಗೂ ಜೂನಿಯರ್​ ಎನ್‌ಟಿಆರ್​ ಜೊತೆಯಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಆ್ಯಕ್ಷನ್​ ಥ್ರಿಲ್ಲರ್​ 'ವಾರ್​ 2' ಸಿನಿಮಾದಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಹಸಿರು ಉಡುಗೆಯಲ್ಲಿ ಕಂಗೊಳಿಸಿದ ಬಾಲಿವುಡ್​ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.