ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಕೆರೆಬೇಟೆ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇದೀಗ ಸಿನಿಮಾ ತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. 'ಕೆರೆಬೇಟೆ' ಮಲೆನಾಡು ಭಾಗದ ಮೀನು ಬೇಟೆ ಮಾಡುವ ಒಂದು ಪದ್ಧತಿ. ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ ನಿರ್ದೇಶಕ ರಾಜ್‌ಗುರು ತರುತ್ತಿದ್ದಾರೆ. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ ವಿಭಿನ್ನವಾದ ಒಂದೊಳ್ಳೆ ಹಳ್ಳಿ ಸೊಗಡಿನ ಸಿನಿಮಾ ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗಮನ ಸೆಳೆಯುತ್ತಿದೆ. ಅಂಟಿಗೆ ಪಿಂಟಿಗೆ ಶೈಲಿಯಲ್ಲೇ ಟ್ರೈಲರ್ ರಿಲೀಸ್ ಮಾಡಿರುವುದು ವಿಶೇಷವಾಗಿತ್ತು. ರಿಲೀಸ್ಗೂ ಮೊದಲು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ, ಹಾರೈಸಿ ಎಂದು ದೀಪ ಹಿಡಿದು ಕೇಳಿಕೊಂಡಿದ್ದಾರೆ. ಬಳಿಕ ನಾಯಕ ಗೌರಿ ಶಂಕರ್ ಅವರ ಪುತ್ರಿ ಪುಟ್ಟ ಕಂದ ಈಶ್ವರಿ ಮನ ಟ್ರೈಲರ್ ಮಾಡಿದಳು.
- " class="align-text-top noRightClick twitterSection" data="">
ಟ್ರೈಲರ್‌ನಲ್ಲಿ ಮಲೆನಾಡಿ ಕೆರೆಬೇಟೆ ಜೊತೆಗೆ 'ಅಂಟಿಕೆ ಪೆಂಟಿಗೆ..' ಸಂಸ್ಕೃತಿ ಕೂಡ ಹೈಲೆಟ್ ಆಗಿದೆ. ಅಂಟಿಕೆ ಪಿಂಟಿಗೆಯಿಂದನೆ ಟ್ರೈಲರ್ ಪ್ರಾರಂಭವಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. ಮಲೆನಾಡಿನ ಹಳ್ಳಿಯಲ್ಲೇ ನಡೆಯುವ ಸಿನಿಮಾ ಇದಾಗಿದೆ. ಕೆರೆಬೇಟೆ ಜೊತೆಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ ಸೇರಿದಂತೆ ಈ ಪುಟ್ಟ ಟ್ರೈಲರ್‌ನಲ್ಲೇ ಮಲೆನಾಡಿನ ಸಂಪೂರ್ಣ ಚಿತ್ರಣ ನೋಡಬಹುದು. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮತ್ತು ನಿರೀಕ್ಷೆ ದುಪ್ಪಟ್ಟು ಮಾಡಿದೆ.
ನಾಯಕ ಗೌರಿ ಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ತನ್ನ ನಟನೆಯ ಝಲಕ್ ತೋರಿಸಿದ್ದಾರೆ. ನಾಯಕಿ ಬಿಂದು ಶಿವರಾಮ್ ಕೂಡ ತನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಬಿಂದು ಅವರಿಗೆ ಇದು ಮೊದಲ ಸಿನಿಮಾ. ಹಾಗಾಗಿ ತನ್ನ ಚೊಚ್ಚಲ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ.
ಅಂದಹಾಗೆ ನಿರ್ದೇಶಕ ರಾಜ್‌ಗುರು ಅವರಿಗೂ ಇದು ಚೊಚ್ಚಲ ಸಿನಿಮಾ. ಹಾಗಂತ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಮಲೆನಾಡಿನವರೇ ಆಗಿರುವುದರಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಹಾಗಾಗಿ ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ. ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ಕೂಡ ಸುಂದರವಾಗಿ ಮೂಡಿ ಬಂದಿದೆ.
ಇನ್ನು ಉಳಿದಂತೆ ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ನಾಯಕ ಗೌರಿಶಕಂಕರ್ ಅವರ ಜನಮನ ಸಿನಿಮಾಸ್ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಕೆರೆಬೇಟಿ ಮುಂದಿನ ತಿಂಗಳು ಮಾರ್ಚ್ 15ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಇದನ್ನೂ ಓದಿ : ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಅಭಿಷೇಕ್ ಶೆಟ್ಟಿ