ETV Bharat / entertainment

ತಿರುಪತಿ ದೇಗುಲದ ದರ್ಶನ ಪಡೆದ ನಟಿ ಕೀರ್ತಿ ಸುರೇಶ್: ಮದುವೆ ಬಗ್ಗೆ ಹೇಳಿದ್ದೇನು? ವಿಡಿಯೋ ನೋಡಿ - KEERTHY SURESH WEDDING

ನಟಿ ಕೀರ್ತಿ ಸುರೇಶ್ ಅವರು ಇಂದು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಮದುವೆಯನ್ನು ದೃಢಪಡಿಸಿದ್ದಾರೆ.

Keerthy Suresh Seeks Blessings at Tirupati
ತಿರುಪತಿಯಲ್ಲಿ ನಟಿ ಕೀರ್ತಿ ಸುರೇಶ್​​​ (ETV Bharat)
author img

By ETV Bharat Entertainment Team

Published : Nov 29, 2024, 2:19 PM IST

'ಮಹಾನಟಿ'ಯಂತಹ ಸೂಪರ್ ಹಿಟ್​ ಸಿನಿಮಾಗಳಲ್ಲಿನ ಅಮೋಘ ಅಭಿನಯದಿಂದ ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟಿ ಕೀರ್ತಿ ಸುರೇಶ್ ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ಕುಟುಂಬಸ್ಥರೊಂದಿಗೆ ತಾರೆ, ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ತಮ್ಮ ಮದುವೆ ಕುರಿತ ವದಂತಿಗಳನ್ನು ದೃಢೀಕರಿಸಿದ ಕೀರ್ತಿ ಸುರೇಶ್​​, ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್​ ನಡೆಯಲಿದೆ. ಮದುವೆ ಹಿನ್ನೆಲೆಯಲ್ಲಿ ದೇವರ ಆಶೀರ್ವಾದ ಪಡೆಯಲು ಬಂದೆ ಎಂದು ತಿಳಿಸಿದರು.

ತಿರುಪತಿಯಲ್ಲಿ ನಟಿ ಕೀರ್ತಿ ಸುರೇಶ್​​​ (ETV Bharat)

ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರೊಂದಿಗೆ ಡಿಸೆಂಬರ್ 11ರಂದು ನಟಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಮದುವೆಗೆ ದಿನಗಣನೆ ಆರಂಭವಾಗಿದ್ದು, ಇತ್ತೀಚೆಗಷ್ಟೇ ಭಾವಿ ಪತಿ ಆಂಟೋನಿ ಥಟ್ಟಿಲ್ ಜೊತೆಗಿನ ಒಂದು ಸುಂದರ ಚಿತ್ರವನ್ನು ಹಂಚಿಕೊಂಡಿದ್ದರು. ಇದೀಗ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೀಪಾವಳಿ ಸಂದರ್ಭ ಕ್ಲಿಕ್ಕಿಸಿದ ಫೋಟೋ, ಕೀರ್ತಿ ಮತ್ತು ಆಂಟೋನಿ ಹಬ್ಬದ ಉತ್ಸಾಹದಲ್ಲಿರೋದನ್ನು ತೋರಿಸಿದೆ. ಆಂಟೋನಿ ಪಟಾಕಿ ಹಿಡಿದಿದ್ದು, ಕೀರ್ತಿ ಪಕ್ಕದಲ್ಲಿ ನಿಂತಿದ್ದಾರೆ. ಭಾವಿ ಪತಿಯ ಭುಜದ ಮೇಲೆ ಕೈ ಇರಿಸಿ ಆ ಕ್ಷಣವನ್ನು ಆನಂದಿಸಿರುವುದು ಈ ಫೋಟೋದಲ್ಲಿ ಕಂಡುಬಂದಿದೆ. ಈ ಇನ್​ಸ್ಟಾಗ್ರಾಮ್​​ ಪೋಸ್ಟ್‌ನಲ್ಲಿ, ತಮ್ಮ 15 ವರ್ಷಗಳ ಸುದೀರ್ಘ ಸಂಬಂಧವನ್ನು ಉಲ್ಲೇಖಿಸಿದ್ದಾರೆ, "15 ವರ್ಷಗಳು... ಇದು ಎಂದೆಂದಿಗೂ.. AntoNY x KEerthy (Iykyk)" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ: ಹಳ್ದಿ ಶಾಸ್ತ್ರದ ಫೋಟೋ, ವಿಡಿಯೋ ನೋಡಿ

ಈಗಾಗಲೇ ಗೋವಾದಲ್ಲಿ ಇವರಿಬ್ಬರ ಮದುವೆಗೆ ಸಿದ್ಧತೆಗಳು ಶುರುವಾಗಿದ್ದು, ಈ ಸುದ್ದಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕೇರಳದ ಕೊಚ್ಚಿಯ ಉದ್ಯಮಿಯಾಗಿರುವ ಆಂಟೋನಿ ಥಟ್ಟಿಲ್​​ ಅವರು ರಾಜ್ಯದ ಪ್ರಮುಖ ರೆಸಾರ್ಟ್​​ಗಳನ್ನು ನಡೆಸುತ್ತಿದ್ದಾರೆ. ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ಗಣ್ಯವ್ಯಕ್ತಿಯಾಗಿ ಗುರುತಿಸಿಕೊಂಂಡಿದ್ದಾರೆ. ಗೋವಾದಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಪ್ರೇಮಪಕ್ಷಿಗಳ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣಕ್ಕೆ ಪುತ್ರನಿಂದ 'ಸಂಗೀತ ಸಂಜೆ' ಆಯೋಜನೆ

ಬಾಲನಟಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಕೀರ್ತಿ ಸುರೇಶ್, ಮಹಾನಟಿಯಂತಹ ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದರು. ಈ ಚಿತ್ರದಲ್ಲಿನ ಅಮೋಘ ಅಭಿನಯದಿಂದ ಅವರು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ಬಾಲಿವುಡ್​ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೂಪರ್​ ಸ್ಟಾರ್​ ವರುಣ್ ಧವನ್​ ಅಭಿನಯದ ಆ್ಯಕ್ಷನ್-ಪ್ಯಾಕ್ಡ್ ಡ್ರಾಮಾ ಬೇಬಿ ಜಾನ್‌ನಲ್ಲಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ. ನಟಿಯ ಮದುವೆಯ ಕೇವಲ ಎರಡು ವಾರಗಳ ನಂತರ ಅಂದರೆ ಡಿಸೆಂಬರ್ 25 ರಂದು ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಕೀರ್ತಿ ಅವರಿಗೆ ಬಾಲಿವುಡ್​ನಲ್ಲಿ ಯಶ ಸಿಗುತ್ತಾ, ಹಿಂದಿ ಚಿತ್ರರಂಗದಲ್ಲಿ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.