ETV Bharat / entertainment

15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ನಟಿ ಕೀರ್ತಿ ಸುರೇಶ್ - KEERTHY SURESH MARRIAGE

ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ ಗೋವಾದಲ್ಲಿ ಹಸೆಮಣೆ ಏರಿದ್ದು, ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

keerthy suresh Antony Thattil wedding
ಕೀರ್ತಿ ಸುರೇಶ್ ಮತ್ತು​ ಆಂಟೋನಿ ಥಟ್ಟಿಲ್ ಮದುವೆ (Photo: ETV Bharat)
author img

By ETV Bharat Entertainment Team

Published : Dec 12, 2024, 2:53 PM IST

'ಮಹಾನಟಿ' ಸಿನಿಮಾ ಮೂಲಕ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್‌ಡಮ್​​​ ಹೊಂದಿರುವ ನಟಿ ಕೀರ್ತಿ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರೊಂದಿಗೆ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ.

ಸೌತ್ ಸ್ಟಾರ್​​​ ನಟಿಯಾಗಿರುವ ಕೀರ್ತಿ ಸುರೇಶ್ ತಮ್ಮ ಬಾಲ್ಯ ಸ್ನೇಹಿತ ಆಂಟೋನಿ ಥಟ್ಟಿಲ್​​ ಅವರನ್ನು ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಹುಟ್ಟಿದ ಪ್ರೇಮ್​ ಕಹಾನಿ ಇದು. ಇದೀಗ ತಮ್ಮ ಪ್ರೇಮಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಗೋವಾದಲ್ಲಿ ಹಸೆಮಣೆ ಏರಿ ತಮ್ಮ ಜೀವನದುದ್ದಕ್ಕೂ ಪರಸ್ಪರರು ಸಾಥ್​ ನೀಡುವುದಾಗಿ ಪ್ರಮಾಣ ಮಾಡಿಕೊಂಡರು.

ಜನಪ್ರಿಯ ನಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಡೆಸ್ಟಿನೇಷನ್​​ ವೆಡ್ಡಿಂಗ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಇಬ್ಬರೂ ಅತ್ಯಂತ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ತಾಳಿ ಕಟ್ಟುವ ಕ್ಷಣದಿಂದ ಹಿಡಿದು ವೆಡ್ಡಿಂಗ್​​ನ ಹಲವು ಫೋಟೋಗಳನ್ನು ಕಾಣಬಹುದು. ಪೋಸ್ಟ್​​ಗೆ '#ForTheLoveOfNyke' ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ವಧು ಹಸಿರು, ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ, ವರ ವೈಟ್​ ಲುಂಗಿ ಧರಿಸಿದ್ದರು. ಹಲವು ಶಾಸ್ತ್ರಗಳು ನೆರವೇರಿದ್ದು, ಕೆಂಪು ಸೀರೆಯಲ್ಲೂ ನಟಿಯನ್ನು ಕಾಣಬಹುದು. ಹಂಚಿಕೊಂಡಿರುವ ಸರಣಿ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ. ನವ ಜೀವನಕ್ಕೆ ಶುಭ ಕೋರುತ್ತಿದ್ದಾರೆ.

ಕಳೆದ ದಿನ, ಮದುವೆ ಸಂಭ್ರಮಾಚರಣೆಯ ಪ್ರಾರಂಭದ ಬಗ್ಗೆ ಫೋಟೋ ಹಂಚಿಕೊಂಡಿದ್ದರು. ಮೇಕಪ್‌ಗೆ ರೆಡಿಯಾಗುತ್ತಿರುವ, ಮೇಕಪ್ ಗೌನ್‌ನಲ್ಲಿರುವ ಫೋಟೋ ಅದಾಗಿತ್ತು. ಇದೀಗ ವಿವಾಹ ಸಮಾರಂಭದ ಫೋಟೋಗಳು ಹೊರಬಿದ್ದಿವೆ.

ಆಂಟೋನಿ ಥಟ್ಟಿಲ್ ಕೊಚ್ಚಿ ಮೂಲದವರು. ಇಂಜಿನಿಯರ್ ಆಗಿರುವ ಇವರು ಕೇರಳದ ಆಸ್ಪರೋಸ್ ವಿಂಡೋಸ್ ಸೊಲ್ಯೂಷನ್ಸ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಕೊಚ್ಚಿಯಲ್ಲಿ ಹಲವು ರೆಸಾರ್ಟ್‌ಗಳನ್ನೂ ಹೊಂದಿದ್ದಾರೆ.

ಇಬ್ಬರೂ ಹದಿನೈದು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಆದ್ರೆ ಸ್ಟಾರ್​ ಹೀರೋಯಿನ್ ಮಾತ್ರ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇತ್ತೀಚೆಗಷ್ಟೇ ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ತಮ್ಮ ಪ್ರೀತಿಯ ಕುರಿತು ತಿಳಿಸಿದ್ದರು.

ಇದನ್ನೂ ಓದಿ: Watch: ದೇಸಿ ಗರ್ಲ್ ಸಾಂಗ್​ಗೆ ಐಶ್ವರ್ಯಾ ಅಭಿಷೇಕ್ ಡ್ಯಾನ್ಸ್,​ ಬ್ಯೂಟಿಫುಲ್​ ವಿಡಿಯೋ ವೈರಲ್​

ಮದುವೆಗೂ ಮುನ್ನ ಕೀರ್ತಿ ಸುರೇಶ್​​ ದೇವಸ್ಥಾನಕ್ಕೆ ಭೇಟಿ ನೀಡಿದ್ದು ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ತಮ್ಮ ಕುಟುಂಬದೊಂದಿಗೆ ತಿರುಪತಿಗೆ ಬಂದು ದೇವರ ಆಶೀರ್ವಾದ ಪಡೆದಿದ್ದರು. ಅಂದು ನಟಿಯೊಂದಿಗೆ ತಂದೆ ಸುರೇಶ್ ಕುಮಾರ್, ತಾಯಿ ಮೇನಕಾ ಸುರೇಶ್ ಮತ್ತು ಸಹೋದರಿ ರೇವತಿ ಸುರೇಶ್ ಇದ್ದರು.

ಇದನ್ನೂ ಓದಿ: 'ನಾನು ಉಪೇಂದ್ರರ ದೊಡ್ಡ ಅಭಿಮಾನಿ': ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​​

ನಟಿಯ ಮುಂದಿನ ಸಿನಿಮಾಗಳು: ಡಿಸೆಂಬರ್ 25ರಂದು 'ಬೇಬಿ ಜಾನ್' ಹಿಂದಿ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಲು ಕೀರ್ತಿ ಸಜ್ಜಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾದಲ್ಲಿ ವರುಣ್ ಧವನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದಲ್ಲದೇ 'ರಿವಾಲ್ವರ್ ರೀಟಾ' ಮತ್ತು 'ಕನ್ನಿ ವೇದಿ'ಯಂತಹ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.