ಕತ್ರಿನಾ ಕೈಫ್. ಪ್ರತಿಭೆ, ಪರಿಶ್ರಮ ಮತ್ತು ಸೌಂದರ್ಯಕ್ಕೆ ಹೆಸರುವಾಸಿ ಈ ಬಾಲಿವುಡ್ ಅಭಿನೇತ್ರಿ. ಬುದ್ಧಿವಂತಿಕೆಯ ಮಾತುಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.
ಸೂಪರ್ ಹಿಟ್ ಹಿಂದಿ ಸಿನಿಮಾಗಳ ಜೊತೆಗೆ ತೆಲುಗಿನಲ್ಲೂ ಪಾತ್ರ ಮಾಡಿರುವ ಇವರು ಕೆಲವು ದಿನಗಳಿಂದ ನಟನೆಯಿಂದ ಕೊಂಚ ದೂರ ಉಳಿದಿದ್ದರು. ಈ ವರ್ಷಾರಂಭದಲ್ಲಿ 'ಮೇರಿ ಕ್ರಿಸ್ಮಸ್' ಬಿಡುಗಡೆಯಾಗಿದ್ದು ಬಿಟ್ಟರೆ ಬೇರಾವುದೇ ಸಿನಿಮಾಗಳ ಸುದ್ದಿಗಳಿಲ್ಲ. ಆದರೀಗ ಇವರು ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಜೋರಾಗಿದೆ.
ಕಳೆದ ತಿಂಗಳಾಂತ್ಯದಲ್ಲಿ ಪತಿ, ನಟ ವಿಕ್ಕಿ ಕೌಶಲ್ ಜೊತೆ ಲಂಡನ್ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ಕೆಲವು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ನಟಿ ತೊಟ್ಟಿದ್ದ ಸಡಿಲ ಉಡುಗೆ, ಗರ್ಭಿಣಿಯಾಗಿಬಹುದೆಂಬ ವದಂತಿಗೆ ಕಾರಣವಾಗಿತ್ತು. ಆದಾಗ್ಯೂ, ಈ ಜೋಡಿ ಅಂತೆಕಂತೆಗಳಿಗೆ ಉತ್ತರಿಸುವ ರಿಸ್ಕ್ ತೆಗೆದುಕೊಳ್ಳಲಿಲ್ಲ.
ಆದರೆ, ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕಾಣಿಸಿಕೊಂಡು ಮತ್ತದೇ ಊಹಾಪೋಹಕ್ಕೆ ಕಾರಣರಾದರು. ಬ್ಲ್ಯಾಕ್ ಪ್ಯಾಂಟ್, ಶರ್ಟ್, ಅದರ ಮೇಲೆ ಲೂಸ್ ಬ್ಲ್ಯೂ ಡೆನಿಮ್ ಜಾಕೆಟ್ ಧರಿಸಿರುವ ವಿಡಿಯೋ ಆನ್ಲೈನ್ನಲ್ಲಿ ಹರಿದಾಡಿದೆ. ಹೊಟ್ಟೆ ಕೊಂಚ ಉಬ್ಬಿದಂತೆ ತೋರಿದ್ದು, ಸಡಿಲ ಜಾಕೆಟ್ ಧರಿಸಿರುವುದರಿಂದ ನಿಜವಾಗಿಯೂ ಗರ್ಭಿಣಿಯಾಗಿದ್ದಾರೆ ಎಂದು ನೆಟ್ಟಿಗರ ಅನುಮಾನ. ಈ ಬಾರಿ, ಕತ್ರಿನಾ ಗರ್ಭಿಣಿ ಎಂದು ಬಹುತೇಕರು ಬಲವಾಗಿ ನಂಬಿರುವಂತೆ ತೋರುತ್ತಿದೆ. ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋದ ಕಾಮೆಂಟ್ ಸೆಕ್ಷನ್ನಲ್ಲಿ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕಲ್ಕಿ ದಾಖಲೆ: ಹೈದರಾಬಾದ್ನ ಮಲ್ಟಿಪ್ಲೆಕ್ಸ್ವೊಂದರಲ್ಲಿ ಗುರುವಾರ 42 ಶೋಗಳು; ಟಿಕೆಟ್ಸ್ ಸೋಲ್ಡ್ ಔಟ್ - Kalki 2898 AD
ನಟಿಯ ನಡಿಗೆಯ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರು, "ಈ ಬಾರಿ ಅವರು ಗರ್ಭಿಣಿ" ಎಂದು ಕಾಮೆಂಟ್ ಮಾಡಿದ್ದಾರೆ. "ಹೌದು ಇದು ಶೇ.100ರಷ್ಟು ಖಚಿತ" ಎಂಬುದು ಇನ್ನೊಬ್ಬರ ಊಹೆ. ಇದನ್ನು ನಂಬದವರೂ ಕೂಡ ತಮ್ಮ ಪ್ರತಿಕ್ರಿಯಿಸುತ್ತಿದ್ದಾರೆ. "ಕತ್ರಿನಾ ಗರ್ಭಿಣಿ ಎಂದು ಕಳೆದ ಕೆಲ ಸಮಯದಿಂದ ಹೇಳುತ್ತಿದ್ದಾರೆ, ಅವರು ಗರ್ಭಿಣಿಯಲ್ಲ, ತೂಕ ಹೆಚ್ಚಿಸಿಕೊಂಡಿದ್ದಾರೆ ಅಷ್ಟೇ" ಎಂದಿದ್ದಾರೆ. ಹೀಗೆ ಮತ್ತೋರ್ವರು ಪ್ರತಿಕ್ರಿಯಿಸಿ, "ಯಾರಾದರೂ ಗರ್ಭಧಾರಣೆಯನ್ನು ಘೋಷಿಸಿದರೆ, ಜನರು ಅದು ನಿಜವಲ್ಲ ಎಂದು ಸಾಬೀತುಪಡಿಸಲು ಬಯಸುತ್ತಾರೆ. ಮತ್ತೊಂದೆಡೆ, ಗರ್ಭಧಾರಣೆಯನ್ನು ಬಹಿರಂಗಪಡಿಸದ ಸಂದರ್ಭಗಳಲ್ಲಿ ಅವರು ಗರ್ಭಿಣಿ ಎಂದು ಸಾಬೀತುಪಡಿಸಲು ಬಯಸುತ್ತಾರೆ" ಎಂದು ನೆಟ್ಟಿಗರ ವರ್ತನೆಯನ್ನು ಬಿಚ್ಚಿಟ್ಟಿದ್ದಾರೆ.
ನಿಮಗೆ ತುಂಬು ಗರ್ಭಿಣಿ ದೀಪಿಕಾರನ್ನು ಟೀಕಿಸಿದ್ದು ಗೊತ್ತೇ ಇದೆ. ಬೇಬಿ ಬಂಪ್ ಸ್ಪಷ್ಟವಾಗಿ ತೋರಿದ್ದರೂ ಕೂಡ ಫೇಕ್ ಪ್ರೆಗ್ನೆನ್ಸಿ ಎಂದು ಹೇಳಿದವರು ಹಲವರು.
ಇದನ್ನೂ ಓದಿ: ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಟ್ರೇಲರ್: ಪ್ರೇಕ್ಷಕರ ರಿಯಾಕ್ಷನ್ ಹೀಗಿತ್ತು - Indian 2 Trailer
ತಾರಾ ಜೋಡಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ 2021ರ ಡಿಸೆಂಬರ್ 9ರಂದು ದಾಂಪತ್ಯ ಜೀವನ ಆರಂಭಿಸಿದ್ದರು.