ಹೈದರಾಬಾದ್: ಬಾಲಿವುಡ್ ಯಂಗ್ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಭೂಲ್ ಭುಲೈಯ್ಯಾ 3''. ಈ ದೀಪಾವಳಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಲು ಸಜ್ಜಾಗಿದೆ ಈ ಸಿನಿಮಾ. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ತೃಪ್ತಿ ದಿಮ್ರಿ, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಹಾರರ್ ಕಾಮಿಡಿ ಸಿನಿಮಾ ಬಹುತಾರಾಗಣವನ್ನು ಹೊಂದಿದೆ. ಸಿನಿಮಾ ಪೋಸ್ಟರ್, ಗ್ಲಿಂಪ್ಟ್ಗಳಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಬಹುನಿರೀಕ್ಷಿತ ಭೂಲ್ ಭುಲೈಯಾ 3ರ ಟೀಸರ್ ಶುಕ್ರವಾರ, ಸೆಪ್ಟೆಂಬರ್ 27ರಂದು ಬಿಡುಗಡೆ ಆಗಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
'ಭೂಲ್ ಭುಲೈಯ್ಯಾ 3' ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಟೀಸರ್ 1 ನಿಮಿಷ, 32 ಸೆಕೆಂಡ್ಗಳಿರಲಿದೆ ಎಂದು ವರದಿಯಾಗಿದೆ. ಇದು ಅಭಿಮಾನಿಗಳ ಉತ್ಸಾಹ ಹೆಚ್ಚಿಸುವ ನಿರೀಕ್ಷೆ ಇದೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ಕಾರ್ತಿಕ್ ಆರ್ಯನ್, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತೆರೆಮರೆ ವಿಡಿಯೋ ಹಂಚಿಕೊಳ್ಳುವ ಮೂಲಕ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದ್ದರು.
ಭೂಷಣ್ ಕುಮಾರ್ ನಿರ್ಮಣದ ಭೂಲ್ ಭುಲೈಯಾ 3 ಸ್ಪೂಕಿ ಎಂಟರ್ಟೈನ್ಮೆಂಟ್ ನೀಡುವ ಭರವಸೆ ಇದೆ. ಕಾರ್ತಿಕ್ ಹೊರತಾಗಿ ಅಮಿ ಜೆ ತೋಮರ್ ಹಾಡಿನಲ್ಲಿ ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದಾರೆ.
ದೀಪಾವಳಿ ಸಂದರ್ಭ ಬಿಡುಗಡೆಯಾಗಲಿರುವ ಈ ಚಿತ್ರ ಅಜಯ್ ದೇವಗನ್ ಅವರ ಸಿಂಗಮ್ ಎಗೇನ್ ಜೊತೆ ತೀವ್ರ ಸ್ಪರ್ಧೆ ಎದುರಿಸಲಿದೆ. ಇದು ಈ ವರ್ಷದ ವರ್ಷದ ದೊಡ್ಡ ಬಾಕ್ಸ್ ಆಫೀಸ್ ಫೈಟ್ ಎಂದೇ ಹೇಳಬಹುದು.