ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ''ಕಣ್ಣಪ್ಪ'' ಸಿನಿಮಾ ಇದೀಗ ವಿಶೇಷ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಹಿರಿಯ ನಟ ಮೋಹನ್ ಬಾಬು, ವಿಷ್ಣು ಮಂಚು ಸೇರಿದಂತೆ ಕಣ್ಣಪ್ಪ ಚಿತ್ರ ತಂಡ, ಕೇದಾರನಾಥ್, ಬದರಿನಾಥ್ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದೆ. ಈ ಮೂಲಕ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಮುಂದಾಗಿದ್ದಾರೆ.
ನಟ ಮೋಹನ್ ಬಾಬು, ಅವರ ಪುತ್ರ ವಿಷ್ಣು ಮಂಚು, ನಿರ್ಮಾಪಕ ಮುಖೇಶ್ ಕುಮಾರ್ ಮತ್ತು ನಟ ಅರ್ಪಿತ್ ರಂಕಾ ಕೇದಾರನಾಥ, ಬದರಿನಾಥ್ ಮತ್ತು ಋಷಿಕೇಶದ ಶಿವನ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಧ್ಯಾತ್ಮಿಕ ಯಾತ್ರೆ ಕೈಗೊಂಡರು.
Started the journey of the 12 Jyotirlingas. First one to visit is the holy #Kedarnathॐ. Prayed for #Kannappa🏹 and the journey it's going to take. #HarHarMahadevॐ pic.twitter.com/5ddgBuV0Do
— Vishnu Manchu (@iVishnuManchu) October 25, 2024
ಭವ್ಯ ಹಿಮಾಲಯದ ನಡುವೆ ನೆಲೆಸಿರುವ ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ ತಂಡವು ಭೇಟಿ ನೀಡಿತು. ಬಳಿಕ ಬದರಿನಾಥದಲ್ಲಿ ಪ್ರಾರ್ಥನೆ ಸಲ್ಲಿಸಿ, ಋಷಿಕೇಶಕ್ಕೆ ಭೇಟಿ ನೀಡಿದರು.
ಈ ಯಾತ್ರೆ ಬಗ್ಗೆ ಮಾತನಾಡಿರುವ ವಿಷ್ಣು ಮಂಚು, "ಕಣ್ಣಪ್ಪ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲ 12 ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಗುರಿ. ಅದರಂತೆ ಮೊದಲಿಗೆ ಕೇದಾರನಾಥನ ದರ್ಶನ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನುಳಿದ 10 ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಲಿದ್ದೇವೆ. ಅದೇ ರೀತಿ ಶೀಘ್ರದಲ್ಲಿಯೇ ಈ ನಮ್ಮ ಸಿನಿಮಾ ರಿಲೀಸ್ ಆಗಲಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೇವರಾಜ್ ಪುತ್ರನಿಗೆ ಶಿವಣ್ಣ ಬೆಂಬಲ: ಅದ್ಭುತ ಕಥೆ ಹೇಳಲು ಸಜ್ಜಾದ ರಂಗಾಯಣ ರಘು, ಪ್ರಣಂ ದೇವರಾಜ್
ದಿ ಲಾರ್ಡ್ ಆಫ್ ದಿ ರಿಂಗ್ಸ್‌ನಂತಹ ಮಹಾಕಾವ್ಯ ಕಥೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ದೃಶ್ಯವೈಭವದ ಮೂಲಕವೇ ಎಲ್ಲರನ್ನು ಬೆರಗುಗೊಳಿಸುವ ಭರವಸೆ ನೀಡಿದೆ. ಹೆಸರಾಂತ ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ ಅವರು ನ್ಯೂಜಿಲೆಂಡ್‌ನ ರಮಣೀಯ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಬದಲು ಬಿಗ್ ಬಾಸ್ ಪಂಚಾಯ್ತಿ ನಡೆಸಲು ಬಂದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು ಶರತ್‌ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕಣ್ಣಪ್ಪ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಬಿಗ್ ಬಜೆಟ್‌ನ ಈ ಸಿನಿಮಾದ ಬಹುಪಾಲು ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ಶೂಟ್ ಮಾಡಲಾಗಿರುವ ಕಣ್ಣಪ್ಪ ಚಿತ್ರದ ಈ ವರ್ಷ ಅಂತ್ಯದಲ್ಲಿ ತೆರೆಗೆ ಬರಲಿದೆ. ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ, ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.