ETV Bharat / entertainment

ಬಿಗ್​ ಬಾಸ್​: ತುಕಾಲಿ ಮಹಾರಾಜರಿಗೆ ಮನೆಮಂದಿಯೆಲ್ಲ ಸೇವಕರು! - ಬಿಗ್​ ಬಾಸ್​ ಫಿನಾಲೆ

'ಸ್ಪರ್ಧಿಗಳ ಆಸೆಗಳಿಗೆ ತಥಾಸ್ತು ಎಂದರಾ ಬಿಗ್ ಬಾಸ್?' ಶೀರ್ಷಿಕೆಯಡಿ ಬಿಗ್ ಬಾಸ್​ ಪ್ರೋಮೋ ಅನಾವರಣಗೊಂಡಿದೆ.

Bigg Boss Thukali Santhosh
ಬಿಗ್​ ಬಾಸ್​ ತುಕಾಲಿ ಸಂತೋಷ್
author img

By ETV Bharat Karnataka Team

Published : Jan 26, 2024, 5:26 PM IST

ನಟ ಸುದೀಪ್​ ನಿರೂಪಣೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 10'ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ, ನಾಡಿದ್ದು ಅಂತಿಮ ಕಾರ್ಯಕ್ರಮ ನಡೆಯಲಿದ್ದು, ವಿಜೇತರ ಹೆಸರು ಘೋಷಣೆಯಾಗಲಿದೆ. ಬಿಗ್​ ಬಾಸ್​ ಟ್ರೋಫಿಯನ್ನು ಯಾರು ಕೊಂಡೊಯ್ಯಲಿದ್ದಾರೆ? ಎಂಬ ಕುತೂಹಲ ಸಾಕಷ್ಟು ಮಂದಿಯಲ್ಲಿದೆ. ಈ ವಾರವಿಡೀ ಮನೆಮಂದಿ ನಕ್ಕು ನಲಿದಿದ್ದು, ಕೆಲ ಭಾವುಕ ಕ್ಷಣಗಳಿಗೂ ಬಿಗ್​ ಬಾಸ್​ ಸಾಕ್ಷಿಯಾಗಿದೆ. ಇಂದಿನ ಎಪಿಸೋಡ್​ ಇನ್ನೂ ಮನರಂಜನಾತ್ಮಕವಾಗಿರಲಿದೆ.

ಬಿಗ್​ ಬಾಸ್​ ಪ್ರೋಮೋ: ಕೆಲ ದಿನಗಳ ಹಿಂದೆ 'ಬಿಗ್‌ ಬಾಸ್‌', ಮನೆಯಲ್ಲಿರುವ ಆರು ಸ್ಪರ್ಧಿಗಳಿಗೆ ಅವರ ಆಸೆಗಳನ್ನು ಕೇಳಿತ್ತು. ಈಗ ಅವರ ಆಸೆಗಳನ್ನೆಲ್ಲ ಒಂದೊಂದಾಗಿ ಈಡೇರಿಸುತ್ತಿದ್ದಾರೆ. ಆ ಸನ್ನಿವೇಶ ಹೇಗಿದೆ ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಜಾಹೀರಾಗಿದೆ. 'ಸ್ಪರ್ಧಿಗಳ ಆಸೆಗಳಿಗೆ ತಥಾಸ್ತು ಎಂದರಾ ಬಿಗ್ ಬಾಸ್?' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ.

'ತುಕಾಲಿ ಮಹಾರಾಜ್‌'..... 'ತುಕಾಲಿಯವರೇ ಕೆಲಸಮಯಕ್ಕೆ ರಾಜನಂತೆ ಬದುಕಬೇಕು' ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಂಪು ಸೂಟ್ ತೊಟ್ಟು 'ತುಕಾಲಿ ಮಹಾರಾಜ್‌' ಮರುಕ್ಷಣವೇ ಮನೆಮಂದಿಗೆ ಅಪ್ಪಣೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.

'ಪಿಲ್ಲೋ ತೆಗೆದುಕೊಂಡು ನನಗೆ ಬೀಸು' ಎಂದು ಕಾರ್ತಿಕ್‌ ಅವರಿಗೆ ತುಕಾಲಿ ಸಂತೋಷ್​ ಅಪ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ತುಕಾಲಿ ಮಹಾರಾಜರ ಮನಗೆಲ್ಲಲು ಬಿಗ್‌ ಬಾಸ್‌ ಮನೆಯಲ್ಲಿ ಹೊಸ ರಾಜಕುಮಾರಿ ಕೂಡ ಅವತರಿಸಿದ್ದಾಳೆ. ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರದಿಂದ ಮುತ್ತಿಟ್ಟು ತನ್ನ ಪ್ರೇಮವನ್ನೂ ವ್ಯಕ್ತಪಡಿಸಿದ್ದಾಳೆ. 'ಎಷ್ಟು ಆತುರದಿಂದ ಕಾಯುತ್ತಿದ್ದೀಯಾ ಎಂದು ಈಗ ಗೊತ್ತಾಯ್ತು' ಎಂದು ಆ ರಾಜಕುಮಾರಿಯ ಪ್ರೇಮಕ್ಕೆ ಮಹಾರಾಜರೇ ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಹೊಸಬರ 'ಚೌ ಚೌ ಬಾತ್' ಕಂಪ್ಲೀಟ್​; ಟ್ರೇಲರ್ ನೋಡಿ

ಅಷ್ಟೇ ಅಲ್ಲ, ಪ್ರತಾಪ್‌ ಕಂಪನಿಯ ಡ್ರೋಣ್‌ ಕೂಡ ಬಿಗ್‌ ಬಾಸ್‌ ಮನೆಯೊಳಗೆ ಲ್ಯಾಂಡ್ ಆಗಿದೆ. ನೀಲಿ ಬಣ್ಣದ ಈ ಡ್ರೋಣ್ ನೋಡಿದ ಪ್ರತಾಪ್‌, ಬಹಳ ಉತ್ಸಾಹದಿಂದ ಮುನ್ನುಗ್ಗಿ ಬಂದು ಎತ್ತಿಕೊಂಡಿದ್ದಾರೆ. ಬಿಗ್‌ಬಾಸ್‌ನ ಈ ಕೊನೆಯ ದಿನಗಳು ಭಾವುಕತೆ, ಸಾರ್ಥಕತೆ ಮತ್ತು ಭರಪೂರ ಮನರಂಜನೆಯ ನಗುವಿನಲ್ಲಿ ತುಂಬಿ ಹೋಗುತ್ತಿದೆ. ಮನೆಯೊಳಗಿನ ಆರೂ ಸ್ಪರ್ಧಿಗಳೂ ತಮ್ಮೆಲ್ಲ ಮನಸ್ತಾಪಗಳನ್ನು ಮರೆತು ಈ ಕ್ಷಣದ ಖುಷಿಯಲ್ಲಿ ಕಳೆದು ಹೋಗುತ್ತಿದ್ದಾರೆ. 'ಹ್ಯಾಪಿ ಬಿಗ್‌ ಬಾಸ್' ಎಂಬ ಟ್ಯಾಗ್‌ ಲೈನ್‌ ಅನ್ನು ಅಕ್ಷರಶಃ ಸತ್ಯವಾಗಿಸುತ್ತಿದ್ದಾರೆ.

ಇದನ್ನೂ ಓದಿ: ಚಿರಂಜೀವಿಗೆ 'ಪದ್ಮವಿಭೂಷಣ': ಧನ್ಯವಾದ ಅರ್ಪಿಸಿದ ಮೆಗಾಸ್ಟಾರ್‌

ಬಿಗ್‌ ಬಾಸ್‌ ಸೀಸನ್ 10ರ ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದೆ. ಯಾರು ಗೆಲ್ಲುತ್ತಾರೆ? ಎಂಬ ಕೋಟ್ಯಂತರ ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ. ಫಿನಾಲೆಯನ್ನು ಜಿಯೋ ಸಿನಿಮಾ ಆ್ಯಪ್‌ನಲ್ಲಿ ಉಚಿತವಾಗಿ ಎಲ್ಲಿ ಬೇಕಾದರೂ ನೋಡ ಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.