ಅಯೋಧ್ಯೆ (ಉತ್ತರಪ್ರದೇಶ) : ಅಯೋಧ್ಯೆಯಲ್ಲಿ ನಾಳೆ (ಜನವರಿ 22) ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆಹ್ವಾನಿತ ನಟ, ನಟಿಯರು ರಾಮಜನ್ಮಭೂಮಿಗೆ ಈಗಾಗಲೇ ಬಂದಿಳಿದಿದ್ದು, ನಟಿ ಕಂಗನಾ ರಣಾವತ್ ಕೂಡ ಅಯೋಧ್ಯೆಗೆ ಬಂದಿದ್ದಾರೆ. ಇಲ್ಲಿನ ಹನುಮಾನ್ ಗಢಿ ದೇಗುಲದಲ್ಲಿ ಸೇವಾ ಕಾರ್ಯ ನಡೆಸಿದ್ದಾರೆ.
ಕ್ವೀನ್ ನಟಿ ಕಂಗನಾ ಭಾನುವಾರ ಇಲ್ಲಿನ ಹನುಮಾನ್ ಗಢಿ ದೇವಸ್ಥಾನದ ಮಹಡಿಗಳನ್ನು ಗುಡಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಅಯೋಧ್ಯೆಗೆ ಬಂದಿಳಿದ ನಟಿ ಶ್ರೀರಾಮಭದ್ರಾಚಾರ್ಯರನ್ನು ಮೊದಲು ಭೇಟಿ ಮಾಡಿದರು. ಭದ್ರಾಚಾರ್ಯರು ನಟಿಗೆ ಆಶೀರ್ವದಿಸಿದರು. ಇದರ ಸರಣಿ ಚಿತ್ರಗಳನ್ನೂ ಕಂಗನಾ ಹಂಚಿಕೊಂಡಿದ್ದಾರೆ.
-
आओ मेरे राम ।
— Kangana Ranaut (@KanganaTeam) January 21, 2024 " class="align-text-top noRightClick twitterSection" data="
आज परमपूजनीय श्री रामभद्राचार्य जी से भेंट हुई, उनका आशीर्वाद लिया।
उनके द्वारा आयोजित शास्त्रवत् सामूहिक हनुमान जी यज्ञ में भाग लिया।
अयोध्या धाम में श्री राम के स्वागत में सब राममयी हैं। कल अयोध्या के राजा लम्बे वनवास के बाद अपने घर आ रहे हैं ।
आओ मेरे राम, आओ… pic.twitter.com/XKxHHGIgh0
">आओ मेरे राम ।
— Kangana Ranaut (@KanganaTeam) January 21, 2024

आओ मेरे राम, आओ… pic.twitter.com/XKxHHGIgh0आओ मेरे राम ।
— Kangana Ranaut (@KanganaTeam) January 21, 2024
आज परमपूजनीय श्री रामभद्राचार्य जी से भेंट हुई, उनका आशीर्वाद लिया।
उनके द्वारा आयोजित शास्त्रवत् सामूहिक हनुमान जी यज्ञ में भाग लिया।
अयोध्या धाम में श्री राम के स्वागत में सब राममयी हैं। कल अयोध्या के राजा लम्बे वनवास के बाद अपने घर आ रहे हैं ।
आओ मेरे राम, आओ… pic.twitter.com/XKxHHGIgh0
ಭಗವಾನ್ ರಾಮನ ಭಕ್ತ ಹನುಮಾನ್ನ ದೇವಸ್ಥಾನದಲ್ಲಿ ಭಕ್ತಸಮೂಹದ ನಡುವೆಯೂ ಸೇವಾ ಕಾರ್ಯ ನಡೆಸಲಾಯಿತು ಎಂದು ಅವರು ಹಂಚಿಕೊಂಡ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಸುಂದರವಾದ ಬಾಲರಾಮನ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಶ್ಲಾಘಿಸಿದರು.
ಮಿತಿಯಿಲ್ಲದ ಸಂತಸ: ಇದಕ್ಕೂ ಮೊದಲು ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಳೊಂದಿಗೆ ಮಾತನಾಡಿದ್ದ ನಟಿ ಕಂಗನಾ ರಣಾವತ್, ಇದು ನವ ಯುಗದ ಪ್ರಾರಂಭವನ್ನು ಪ್ರತಿನಿಧಿಸುತ್ತದೆ. ರಾಮಮಂದಿರ ಕೇವಲ ಕಟ್ಟಡವಲ್ಲ. ಬದಲಿಗೆ ಅಗಾಧ ಪ್ರಜ್ಞೆಯ ಸಾಕಾರ ಕ್ಷಣ. ಹಾಗಾಗಿ ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಮಿತಿಯಿಲ್ಲದ ಸಂತಸ, ವರ್ಣನಾತೀತ ಸಂತೋಷ ಸೃಷ್ಟಿಸುತ್ತದೆ ಎಂದರು.
ಈ ಐತಿಹಾಸಿಕ ಸಂದರ್ಭಕ್ಕೆ ಆಹ್ವಾನಿಸಿದ್ದಕ್ಕಾಗಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ ಕಂಗನಾ, ಭಗವಾನ್ ಶ್ರೀರಾಮನ ಮೇಲಿರುವ ತಮ್ಮ ಭಕ್ತಿಯನ್ನು ಬಹಿರಂಗಪಡಿಸಿದರು. ನಟಿಯ ದೃಷ್ಟಿಯಲ್ಲಿ, ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ 'ಕರ್ಮ'ದ ಫಲವಾಗಿ. ಈ ಮಹತ್ವದ ದಿನವನ್ನು ತರಲು ದೇಶವು ಒಗ್ಗೂಡಿದ್ದು, ಇಡೀ ರಾಷ್ಟ್ರಕ್ಕಿದು ಅದೃಷ್ಟದ ಕ್ಷಣವೆಂದು ಭಾವಿಸಿದ್ದಾರೆ.
ಸೌಭಾಗ್ಯದ ಕ್ಷಣ: ಪಾಪರಾಜಿಗಳು ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ, ಆಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು. ನನಗಿದು ಸೌಭಾಗ್ಯದ ಕ್ಷಣ. ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಅಯೋಧ್ಯೆಯಲ್ಲೇ ಇರುವೆ ಎಂದು ತಿಳಿಸಿದ್ದಾರೆ.
ಕಂಗನಾ ರಣಾವತ್ ಅವರ ಇತ್ತೀಚಿನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರದರ್ಶನ ಕಂಡಿವೆ. ಕೊನೆಯ ಚಿತ್ರವಾದ 'ತೇಜಸ್' ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಸದ್ಯ 'ಎಮರ್ಜೆನ್ಸಿ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನವನ್ನು ಆಧರಿಸಿದೆ.
ಇದನ್ನೂ ಓದಿ: ಅಯೋಧ್ಯೆ ತಲುಪಿದ ಕಂಗನಾ ರಣಾವತ್: 'ಪುಣ್ಯವಿದ್ದವರಿಗೆ ಶ್ರೀರಾಮನ ದರ್ಶನ ಸಾಧ್ಯ'ವೆಂದ ನಟಿ