ನಾಗ್ ಅಶ್ವಿನ್ ನಿರ್ದೇಶನದ ಮೈಥೋಲಾಜಿಕಲ್ ಸೈನ್ಸ್ ಫಿಕ್ಷನ್ ಸಿನಿಮಾ ''ಕಲ್ಕಿ 2898 ಎಡಿ'' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಸ್ಟಾರ್ ನಟರ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿ ಸಾಗಿದೆ. ಚಿತ್ರ ತೆರೆಕಂಡು ಮೊದಲ ಸೋಮವಾರದ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದ್ದರೂ, ಐದು ದಿನಗಳ ಕಲೆಕ್ಷನ್ ಅತ್ಯುತ್ತಮವಾಗಿದೆ.
ಕಲ್ಕಿ 2898 ಎಡಿ ಚಿತ್ರ ಸೋಮವಾರದಂದು 34.6 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಹಿಂದಿಯಲ್ಲಿ 16.5 ಕೋಟಿ ರೂಪಾಯಿ, ತೆಲುಗು ಆವೃತ್ತಿಯಲ್ಲಿ 14.5 ಕೋಟಿ ರೂಪಾಯಿ ಸಂಪಾದಿಸಿದರೆ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಕ್ರಮವಾಗಿ 2 ಕೋಟಿ, 0.3 ಕೋಟಿ ಮತ್ತು 1.3 ಕೋಟಿ ರೂ. ಸಂಪಾದಿಸಿದೆ.
5 ದಿನಗಳಲ್ಲಿ ಸಿನಿಮಾ 343.6 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗಿನಿಂದ 182 ಕೋಟಿ ರೂ., ತಮಿಳಿನಿಂದ 20.3 ಕೋಟಿ ರೂ., ಹಿಂದಿಯಿಂದ 128 ಕೋಟಿ ರೂ., ಕನ್ನಡದಿಂದ 2.1 ಕೋಟಿ ರೂ. ಮತ್ತು ಮಲಯಾಳಂನಿಂದ 11.2 ಕೋಟಿ ರೂ. ಕಲೆಕ್ಷನ್ ಮಾಡಿದೆ. ಪ್ಯಾನ್-ಇಂಡಿಯಾ ಸಿನಿಮಾ ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ 2ಡಿ ಮತ್ತು 3ಡಿ ಎರಡರಲ್ಲೂ ಬಿಡುಗಡೆಯಾಗಿದೆ. ಬಿಗ್ ಬಜೆಟ್ ಪ್ರಾಜೆಕ್ಟ್ ವಿಶ್ವದಾದ್ಯಂತ 500 ಕೋಟಿ ರೂ.ನ ಕ್ಲಬ್‌ಗೆ ಸೇರಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.
ಮೂಲತಃ ಪ್ರಾಜೆಕ್ಟ್ ಕೆ ಎಂದು ಕರೆಯಲ್ಪಟ್ಟಿದ್ದ ಕಲ್ಕಿ 2898 ಎಡಿ ಪೌರಾಣಿಕ ಅಂಶಗಳನ್ನೊಳಗೊಂಡ ವೈಜ್ಞಾನಿಕ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭೈರವನ ಪಾತ್ರ ನಿರ್ವಹಿಸಿದರೆ, ದೀಪಿಕಾ SUM-80 ಪಾತ್ರದಲ್ಲಿ ನಟಿಸಿದ್ದಾರೆ. ಸುಪ್ರೀಮ್ ಯಾಸ್ಕಿನ್ ಪಾತ್ರವನ್ನು ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ನಿರ್ವಹಿಸಿದ್ದಾರೆ. ಇನ್ನೂ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ ನಟಿಸಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ; ಅಕ್ಟೋಬರ್ಗೆ ಕಂದನ ಜನನ - Harshika Poonacha Pregnant
ಇವರಲ್ಲದೇ, ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಸೇರಿ ಕೆಲವರು ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ದಿಶಾ ಪಟಾನಿ ರಾಕ್ಸಿ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಹಿಂದೂ ಧರ್ಮಗ್ರಂಥದಿಂದ ಹೆಚ್ಚು ಪ್ರೇರಿತವಾಗಿದ್ದು, ವೈಜ್ಞಾನಿಕ ವಿಷಯಗಳನ್ನು ಅಳವಡಿಸಿಕೊಂಡಿದೆ.
ಇದನ್ನೂ ಓದಿ: ಮೊದಲ ಗೌರವಕ್ಕೆ ಪಾತ್ರವಾದ 'ಕಲ್ಕಿ': ಅವಾರ್ಡ್ ಫೋಟೋ ಹಂಚಿಕೊಂಡ ನಿರ್ದೇಶಕ ನಾಗ್ ಅಶ್ವಿನ್ - Kalki First Award
ವೈಜಯಂತಿ ಮೂವೀಸ್ ಈ ಚಿತ್ರವನ್ನು ಬರೋಬ್ಬರಿ 600 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣ ಮಾಡಿದೆ. ಕಳೆದ ಗುರುವಾರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಆದ ಚಿತ್ರ, ಬಂಡವಾಳವನ್ನು ಬಹುತೇಕ ಪಾಪಸ್ ಪಡೆದುಕೊಂಡಿದೆ. ಒಟಿಟಿ ರೈಟ್ಸ್ ಕೂಡ ಬಹುತೇಕ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ.