ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತಾಯಿ ಜೀನತ್ ಹುಸೇನ್ ಅವರ 90ನೇ ವರ್ಷದ ಜನ್ಮದಿನಾಚರಣೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಜೂನ್ 13ರಂದು ಜನ್ಮದಿನದ ಹಿನ್ನೆಲೆಯಲ್ಲಿ ಅಮೀರ್ ಖಾನ್ ವಿಶೇಷ ಪಾರ್ಟಿ ಆಯೋಜಿಸಿದ್ದರು. ತಮ್ಮ ಆತ್ಮೀಯ ವರ್ಗದ 200 ಮಂದಿಗೆ ಮಾತ್ರ ಆಹ್ವಾನ ನೀಡಿದ್ದರು ಎಂದು ತಿಳಿದುಬಂದಿದೆ.
ಬಾಲಿವುಡ್ ನಟಿ ಜೂಹಿ ಚಾವ್ಲಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಮೀರ್ ಮತ್ತು ಅವರ ತಾಯಿ ಜೀನತ್ ಹುಸೇನ್ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ಕಂಗೊಳಿಸಿದ್ದು, ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಅಮೀರ್ ಖಾನ್‌ಗೆ ಧನ್ಯವಾದ ತಿಳಿಸಿದ್ದಾರೆ.
![Juhi Chawla shares Aamir khan Mother 90th Birthday Photos in Social media](https://etvbharatimages.akamaized.net/etvbharat/prod-images/14-06-2024/21708099_thu.png)
ಅಮೀರ್ ಖಾನ್ ತಮ್ಮ ತಾಯಿಯೊಂದಿಗೆ ವಿಶೇಷ ಬಂಧ ಹೊಂದಿದ್ದಾರೆ. ತಾವು ಆಯ್ಕೆ ಮಾಡುವ ಸಿನಿಮಾ ಮತ್ತು ಸ್ಕ್ರಿಪ್ಟ್ ಕುರಿತು ತಾಯಿ ಜೊತೆ ಚರ್ಚೆ ನಡೆಸುತ್ತಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲೂ ತಾಯಿ ಪಾತ್ರ ಪ್ರಮುಖವಾಗಿದೆ ಎಂದು ಅಮೀರ್ ಖಾನ್ ಈ ಹಿಂದೆ ಹೇಳಿದ್ದರು. ಜೀನತ್ ಹುಸೇನ್ ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿದ್ದು ಬಳಿಕ ಚೇತರಿಸಿಕೊಂಡಿದ್ದರು.
ಇದನ್ನೂ ಓದಿ: ದರ್ಶನ್ ಪ್ರಕರಣ: 'ಸ್ಟಾರ್ ವರ್ಶಿಪ್ ಸಿಂಡ್ರೋಮ್ನ ಸೈಡ್ ಎಫೆಕ್ಟ್' - ನಿರ್ದೇಶಕ ಆರ್ಜಿವಿ ಟ್ವೀಟ್