ETV Bharat / entertainment

ಬರ್ತ್‌ಡೇ ಖುಷಿಯಲ್ಲಿ ಅಭಿಮಾನಿಗಳಿಗೆ ಮೂರು ಚಿತ್ರದ ಅಪ್ಡೇಟ್ಸ್‌ ಕೊಟ್ಟ ಮೇಘಾ ಶೆಟ್ಟಿ - Megha Shetty - MEGHA SHETTY

ನಟಿ ಮೇಘಾ ಶೆಟ್ಟಿ 26ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರಗಳಾದ 'ಆಫ್ಟರ್​​ ಆಪರೇಶನ್​ ಲಂಡನ್​​ ಕೆಫೆ', 'ಗ್ರಾಮಾಯಣ' ಹಾಗು 'ಚೀತಾ' ಕುರಿತ ಕುತೂಹಲಕಾರಿ ಪೋಸ್ಟರ್​​ಗಳು ರಿಲೀಸ್ ಆಗಿವೆ.

Megha Shetty
ನಟಿ ಮೇಘಾ ಶೆಟ್ಟಿ (ETV Bharat)
author img

By ETV Bharat Karnataka Team

Published : Aug 5, 2024, 2:56 PM IST

'ಜೊತೆ ಜೊತೆಯಲಿ' ಜನಪ್ರಿಯತೆಯ ನಟಿ ಮೇಘಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಮೂರು ಹೊಸ ಸಿನಿಮಾಗಳ ಅಪ್ಡೇಟ್ಸ್​​ ನೀಡಿದ್ದಾರೆ. ಭಾನುವಾರ ಇವರು 26ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಖುಷಿಯದಲ್ಲಿದ್ದ ನಟಿಗೆ ಕುಟುಂಬ, ಚಿತ್ರರಂಗ ಸೇರಿದಂತೆ ಅಭಿಮಾನಿ ಬಳಗ ಶುಭಾಶಯಗಳ ಸುರಿಮಳೆಗೈದಿದೆ.

ಮುಂದಿನ ಚಿತ್ರಗಳ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ನಟಿಗೆ ವಿಶೇಷವಾಗಿ ಶುಭ ಕೋರಿದೆ. ಆಫ್ಟರ್​​ ಆಪರೇಶನ್​ ಲಂಡನ್​​ ಕೆಫೆ, ಗ್ರಾಮಾಯಣ ಮತ್ತು ಚೀತಾ ನಟಿಯ ಮುಂಬರುವ ಚಿತ್ರಗಳಾಗಿವೆ.

'ಆಫ್ಟರ್​​ ಆಪರೇಶನ್​ ಲಂಡನ್​​ ಕೆಫೆ': ಪೋಸ್ಟರ್​ಗಳ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿರುವ 'ಆಫ್ಟರ್​​ ಆಪರೇಶನ್​ ಲಂಡನ್​​ ಕೆಫೆ' ಟೀಸರ್​ ರಿಲೀಸ್​​​ಗೆ ಕೌಂಟ್​ಡೌನ್​​ ಶುರುವಾಗಿದೆ. ಆಕರ್ಷಕ ಪೋಸ್ಟರ್ ಜೊತೆಗೆ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದಾಗಿ​ ಬಹಿರಂಗಪಡಿಸಿದ್ದಾರೆ. ಈ ಅನೌನ್ಸ್​​ಮೆಂಟ್​ ಪೋಸ್ಟರ್ ಅನ್ನು ಕರಾವಳಿ ಬೆಡಗಿ ಮೇಘಾ ಶೆಟ್ಟಿ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಲಂಗ, ದಾವಣಿ ತೊಟ್ಟು ಹಳ್ಳಿ ಹುಡುಗಿಯಾಗಿ ನೋಟ ಬೀರಿದ್ದಾರೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್​ನಲ್ಲಿ ಚಿತ್ರ ಮೂಡಿಬರಲಿದೆ. ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ದೇಶಕ ಸಡಗರ ರಾಘವೇಂದ್ರ ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.

ಇದನ್ನೂ ಓದಿ: ''ಎಂಥ ಚೆಂದಾನೆ ಇವಳು'' ಅಂತಿದ್ದಾರೆ ರಿಷಬ್​​ ಶೆಟ್ಟಿ ತಂಡ: 'ಲಾಫಿಂಗ್ ಬುದ್ಧ'ನ ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ - Enta Chendane Ivalu

'ಗ್ರಾಮಾಯಣ': ಮೇಘಾ ಶೆಟ್ಟಿ ಅಭಿನಯದ ಮತ್ತೊಂದು ಚಿತ್ರ 'ಗ್ರಾಮಾಯಣ'. ಈ ಸಿನಿಮಾದಲ್ಲೂ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲಂಗ ದಾವಣಿ ತೊಟ್ಟು ಸೈಕಲ್​​ ಹೊಡೆಯುತ್ತಿರುವ ಪೋಸ್ಟರ್​​ ಅನಾವರಣಗೊಂಡಿದೆ. ವಿನಯ್​​ ರಾಜ್​​​ಕುಮಾರ್​ ಹಾಗೂ ಮೇಘಾ ತೆರೆಹಂಚಿಕೊಂಡಿರುವ ಚಿತ್ರಕ್ಕೆ ದೇವನೂರು ಚಂದ್ರು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಜಿ.ಮನೋಹರನ್​ ಮತ್ತು ಶ್ರೀಕಾಂತ್​ ಕೆ.ಪಿ. ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಇಂದು ಮುಂಬೈನಲ್ಲಿ 'ಮಾರ್ಟಿನ್'​ ಟ್ರೇಲರ್​​ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ - Dhruva Sarja Martin

'ಚೀತಾ': ಪ್ರಜ್ವಲ್​ ದೇವರಾಜ್​ ಮುಖ್ಯಭೂಮಿಕೆಯ 'ಚೀತಾ'ದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ನಿರ್ದೇಶನದ​ ಚೊಚ್ಚಲ ಚಿತ್ರದ ಪೋಸ್ಟರ್​​ನಲ್ಲಿ ಮೇಘಾ ರುದ್ರ ರೂಪದಲ್ಲಿದ್ದಾರೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ಚಿತ್ರ ನಿರ್ಮಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.