ETV Bharat / entertainment

'ಕೆಜಿಎಫ್'​​ ಹಾದಿಯಲ್ಲಿ 'ಪುಷ್ಪ'? ಬ್ಲಾಕ್​ಬಸ್ಟರ್ ಸಿನಿಮಾಗಳ ಪಾರ್ಟ್ 3 ಸೆಟ್ಟೇರೋದ್ಯಾವಾಗ? - KGF And Pushpa

'ಕೆಜಿಎಫ್ 3' ಬರಲು ಸರಿಸಮಾರು 3 ವರ್ಷಗಳಾಗಬಹುದು. 'ಪುಷ್ಪ 3'ರ ಕಥೆಯೂ ಹಾಗೇ ಇದೆ.

Allu arjun
ಅಲ್ಲು ಅರ್ಜುನ್ (ANI)
author img

By ETV Bharat Karnataka Team

Published : May 28, 2024, 3:36 PM IST

ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಚಿತ್ರಗಳು ಎರಡು ಭಾಗಗಳಲ್ಲಿ ಮೂಡಿ ಬರುತ್ತಿವೆ. ಕಥೆಗೆ ಬೇಡಿಕೆ ಇದ್ದು, ಸೂಕ್ತ ಬಂಡವಾಳ ಸಿಕ್ಕರೆ ನಿರ್ದೇಶಕರು ಮೂರನೇ ಭಾಗಕ್ಕೂ ಮುಂದಾಗುತ್ತಾರೆ. ಅದರಂತೆ 'ಕೆಜಿಎಫ್ 3' ಪ್ರೊಜೆಕ್ಟ್​​ ಸಖತ್​​ ಸುದ್ದಿಯಲ್ಲಿದೆ. ಸಿನಿಮಾಗೆ ಸಿನಿಪ್ರಿಯರಿಂದ ಸಾಕಷ್ಟು ಬೇಡಿಕೆ ಇದೆ. ಈ ಪಟ್ಟಿಗೀಗ 'ಪುಷ್ಪ' ಕೂಡ ಸೇರಿಕೊಂಡಿದೆ. 2021ರ ಬ್ಲಾಕ್​ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್'​ನ ಮುಂದುವರಿದ ಭಾಗ 'ಪುಷ್ಪ 2: ದಿ ರೂಲ್' ಚಿತ್ರ ಬಿಡುಗಡೆ ಹೊಸ್ತಿಲಲ್ಲಿದ್ದು, 'ಪುಷ್ಪ 3' ಮಾಡಲು ಸಾಕಷ್ಟು ಸ್ಕೋಪ್ ಇದೆ ಎಂದು ಚಿತ್ರತಂಡ ಈಗಾಗಲೇ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದೆ.

ಈ ವಿಚಾರದಲ್ಲಿ ಪುಷ್ಪ ತಂಡ ಬ್ಲಾಕ್​ಬಸ್ಟರ್ 'ಕೆಜಿಎಫ್' ಸೂತ್ರವನ್ನು ಅನುಸರಿಸುತ್ತಿರುವಂತೆ ತೋರಿದೆ. 'ಕೆಜಿಎಫ್ 2' ನಂತರ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಾಯಕ ನಟ ಯಶ್ ಬೇರೆ ಪ್ರೊಜೆಕ್ಟ್​ ಕಡೆ ಮುಖ ಮಾಡಿದರು. ನೀಲ್ ಸದ್ಯ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ 'ಸಲಾರ್-2'ನಲ್ಲಿ ಬ್ಯುಸಿಯಾಗಿದ್ದು, ನಂತರ ಜೂ. ಎನ್​ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಕೆಜಿಎಫ್​ ಬಳಿಕ ಅವರ ಸಲಾರ್​ 1 ರಿಲೀಸ್​ ಆಗಿ ಯಶ ಕಂಡಿದೆ. ಇನ್ನೂ ಯಶ್ ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರೀಕರಣ ಪೂರ್ಣಗೊಳಿಸಬೇಕಿದೆ. ಇದೆಲ್ಲದರ ನಂತರ 'ಕೆಜಿಎಫ್ 3' ಸಾಧ್ಯತೆ ಇದೆ. ಇದು ಕನಿಷ್ಠ ಮೂರು ವರ್ಷಗಳನ್ನು ತೆಗೆದುಕೊಳ್ಳಬಹುದು. ಇದರ ಮಧ್ಯೆ ಯಶ್​ ಬೇರೆ ಪ್ರೊಜೆಕ್ಟ್​ಗೆ ಒಪ್ಪಿಗೆ ನೀಡಿದರೆ ಇನ್ನೂ ತಡವಾಗಬಹುದು.

ಇದೇ ಸೂತ್ರವನ್ನು 'ಪುಷ್ಪ 3' ವಿಷಯದಲ್ಲೂ ಅಳವಡಿಸಿದಂತೆ ತೋರುತ್ತಿದೆ. 'ಪುಷ್ಪ 2' ಬಿಡುಗಡೆಯಾದ ತಕ್ಷಣ 'ಪುಷ್ಪ 3' ಶುರುವಾಗುವುದಿಲ್ಲ. ಪುಷ್ಪರಾಜ್​​ ಅಲ್ಲು ಅರ್ಜುನ್ ಬೇರೆ ನಿರ್ದೇಶಕರ ಜೊತೆ ಎರಡು ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬುದು ಟಾಲಿವುಡ್ ಟಾಕ್. ಅಟ್ಲಿ ಜೊತೆಗಿನ ಸಿನಿಮಾದ ಚರ್ಚೆಯೂ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಈವರೆಗೆ ಅಧಿಕೃತ ಘೋಷಣೆ ಚಿತ್ರತಂಡದಿಂದ ಬಂದಿಲ್ಲ. ಅಲ್ಲದೇ ಈ ಹಿಂದೆ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವುದಾಗಿ ಅಲ್ಲು ಅರ್ಜುನ್ ತಿಳಿಸಿದ್ದರು. ತಿವಿಕ್ರಂ ಕೂಡ ಕಥೆ ಸಿದ್ಧಪಡಿಸುತ್ತಿದ್ದಾರೆ. 'ಪುಷ್ಪ'ದಲ್ಲಿ ಕಂಪ್ಲೀಟ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್​​, 'ಅಲ ವೈಕುಂಠಪುರಮಲೋ' ರೀತಿ ಕ್ಲಾಸಿಯಾಗಿ ಕಾಣುವಂತ ಕಥೆ, ಪಾತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 'ವಿಜಯ್​​ ದೇವರಕೊಂಡ ನನ್ನ ಮೆಚ್ಚಿನ ನಟ': ನಾಚಿ ನೀರಾದ ರಶ್ಮಿಕಾ ಮಂದಣ್ಣ- ವಿಡಿಯೋ ನೋಡಿ - Rashmika Vijay

ಮತ್ತೊಂದೆಡೆ, ಪುಷ್ಪ ನಿರ್ದೇಶಕ ಸುಕುಮಾರ್ ಕೂಡ ಸೂಪರ್ ಸ್ಟಾರ್ ರಾಮ್ ಚರಣ್ ಪ್ರಾಜೆಕ್ಟ್‌ಗೂ ಆ್ಯಕ್ಷನ್​​ ಕಟ್​ ಹೇಳಬೇಕಾಗಿದೆ. ಬುಚ್ಚಿಬಾಬು ಅವರ ಚಿತ್ರದ ನಂತರವೇ ರಾಮ್​​​ ಚರಣ್ ಲಭ್ಯವಾಗಲಿದ್ದಾರೆ. ಈ ಸಿನಿಮಾ ನಂತರ ಸುಕುಮಾರ್-ಚರಣ್ ಸಿನಿಮಾ ಸೆಟ್ಟೇರಲಿದೆ. ಅಲ್ಲಿವರೆಗೆ ಸುಕುಮಾರ್ ಕಾಯುತ್ತಾರಾ? ಅಥವಾ ನಡುವೆ ಬೇರೆ ಪ್ರಾಜೆಕ್ಟ್​​ ಕೈಗೆತ್ತಿಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕು. ಈ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷಗಳಾಗಬಹುದು. ಈ ಲೆಕ್ಕಾಚಾರದ ಪ್ರಕಾರ 'ಕೆಜಿಎಫ್ 3' ಮತ್ತು 'ಪುಷ್ಪ3' ಸೆಟ್ಟೇರೋದು ತಡವಾಗುವ ಸಾಧ್ಯತೆಗಳಿವೆ. ಎಲ್ಲದಕ್ಕೂ ಅಧಿಕೃ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 'ಕೋಟಿ'ಯ ಮಾತು ಸೋತು ಹಾಡು ಟ್ರೆಂಡಿಂಗ್‌‌ನಲ್ಲಿ: ಡಾಲಿ ಧನಂಜಯ್ ಸಿನಿಮಾ ಮೇಲೆ ಕುತೂಹಲ - Maathu Sothu song

ಆರು ಭಾಷೆಗಳಿಗೆ ಓರ್ವ ಗಾಯಕಿ: ಶ್ರೇಯಾ ಘೋಷಾಲ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹೆಸರಾಂತ ಗಾಯಕಿಯ ಬಹುತೇಕ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ ಮತ್ತೊಮ್ಮೆ ತಮ್ಮ ಧ್ವನಿಯ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ 'ಪುಷ್ಪ 2'ನಿಂದ ಅಪ್ಡೇಟ್ಸ್​​​ ಹೊರ ಬರುತ್ತಿವೆ. ಶ್ರೇಯಾ ಘೋಷಾಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ 'ಸುಸೇಕಿ ಅಗ್ಗಿ ರವ್ವಾ ಮದಿರಿ ಉಂಟದೇ ನಾ ಸಾಮಿ..' ಎಂಬ ಹಾಡನ್ನು ಹಾಡಿದ್ದಾರೆ. ನಾಳೆ ಬೆಳಗ್ಗೆ 11.07ಕ್ಕೆ ಹಾಡು ಅನಾವರಣಗೊಳ್ಳಲಿದೆ. ಈ ಹಾಡಿಗೆ ಖ್ಯಾತ ಗಾಯಕ-ಸಂಯೋಜಕ ದೇವಿಶ್ರೀ ಪ್ರಸಾದ್ ಜೊತೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.