ETV Bharat / entertainment

ಹೈದರಾಬಾದ್‌ ಡ್ರಗ್​​ ಕೇಸ್​: ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಸೇರಿ 10 ಮಂದಿ ಅರೆಸ್ಟ್! - Hyderabad Drug Case

author img

By ETV Bharat Karnataka Team

Published : Jul 16, 2024, 2:01 PM IST

ಹೈದರಾಬಾದ್​​​​​ ಡ್ರಗ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ ಸೇರಿದಂತೆ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

Rakul Preet Singh - Aman Preet Singh
ರಾಕುಲ್ ಪ್ರೀತ್ ಸಿಂಗ್ - ಅಮನ್ ಪ್ರೀತ್ ಸಿಂಗ್ (ANI)

ಡ್ರಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ ಸೇರಿದಂತೆ ಒಟ್ಟು 10 ಮಂದಿಯನ್ನು ಸೋಮವಾರದಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಸೈಬರಾಬಾದ್ ಪೊಲೀಸರ ಪ್ರಕಾರ, 35 ಲಕ್ಷ ರೂ. ಮೌಲ್ಯದ 199 ಗ್ರಾಂ ಕೊಕೇನ್​​​ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ತೆಲಂಗಾಣ ಆ್ಯಂಟಿ ನಾರ್ಕೋಟಿಕ್ಸ್ ಬ್ಯೂರೋ (ಟಿಜಿಎಎನ್‌ಬಿ) ಮತ್ತು ಸೈಬರಾಬಾದ್‌ನ ನರಸಿಂಗಿ ಪೊಲೀಸರು ಸೇರಿ ಜಂಟಿ ದಾಳಿ ನಡೆಸಿದ್ದು, ಐವರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಉಳಿದ ಬಂಧಿತ ಐವರು ಗ್ರಾಹಕರಲ್ಲಿ ಅಮನ್ ಪ್ರೀತ್ ಸಿಂಗ್ ಕೂಡಾ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿ ಆಧಾರದ ಮೇಲೆ, ವಿಶಾಲ್ ನಗರದ ಫ್ಲ್ಯಾಟ್‌ನಲ್ಲಿ ದಾಳಿ ನಡೆಸಲಾಯಿತು. ಅವರ ಬಳಿ ಇದ್ದ 35 ಲಕ್ಷ ರೂ. ಮೌಲ್ಯದ 199 ಗ್ರಾಂ ಕೊಕೇನ್ ಅನ್ನು ವಶಕ್ಕೆ ಪಡೆಯಲಾಯಿತು. ಐವರು ಡ್ರಗ್ ಡೀಲರ್​​​​ಗಳಲ್ಲದೇ ಅಧಿಕಾರಿಗಳು ಅಮನ್ ಪ್ರೀತ್ ಸಿಂಗ್ (ಗ್ರಾಹಕ) ಅವರನ್ನೂ ಅರೆಸ್ಟ್ ಮಾಡಿದ್ದಾರೆ.

ಡ್ರಗ್​ ಗ್ರಾಹಕರು: "ಈವರೆಗೆ, ಐವರನ್ನು ಕರೆತಂದು ಪರೀಕ್ಷಿಸಲಾಗಿದೆ. ರಿಸಲ್ಟ್​​ ಪಾಸಿಟಿವ್​​ ಎಂದು ಬಂದಿದೆ. ಗ್ರಾಹಕರುಗಳಾದ ಅನಿಕೇತ್ ರೆಡ್ಡಿ, ಪ್ರಸಾದ್, ಅಮನ್ ಪ್ರೀತ್ ಸಿಂಗ್, ಮಧುಸೂಧನ್ ಮತ್ತು ನಿಖಿಲ್ ದಾಮನ್ ಕೊಕೇನ್​​​ ತೆಗೆದುಕೊಂಡಿರುವುದು ದೃಢಪಟ್ಟಿದೆ. ಎಲ್ಲರನ್ನೂ ಎಸ್‌ಒಟಿ ತಂಡ ವಶಕ್ಕೆ ತೆಗೆದುಕೊಂಡಿದ್ದು, ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು'' ಎಂದು ಡಿಸಿಪಿ ರಾಜೇಂದ್ರ ನಗರ್ ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್​​​ಡೇ ಕತ್ರಿನಾ: ಪತಿ ವಿಕ್ಕಿ ಕೌಶಲ್​ಗಿಂತ ಹೆಚ್ಚು ಆಸ್ತಿ ಹೊಂದಿರುವ ನಟಿಗೆ ಶುಭಾಶಯಗಳ ಮಹಾಪೂರ - HBD Katrina

ಡ್ರಗ್​ ಪೆಡ್ಲರ್​ಗಳು: ದಾಳಿಯ ವಿವರಗಳನ್ನು ಒದಗಿಸಿಸುವ ಅಧಿಕಾರಿಗಳು, ಹೈದರ್‌ಶಾಕೋಟೆಯ ವಿಶಾಲ ನಗರದಲ್ಲಿನ ಫ್ಲಾಟ್ ನಂ.202ರ ಜನಬ್ ಫೋರ್ಟ್ ವ್ಯೂವ್​​​​ ಅಪಾರ್ಟ್‌ಮೆಂಟ್‌ನಲ್ಲಿ ಟಿಜಿಎಎನ್‌ಬಿ ಮತ್ತು ನರಸಿಂಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರು ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಲಾಗಿದೆ. ನೈಜೀರಿಯಾದ ಲಾಗೋಸ್ ಮೂಲದ ಅಜೀಜ್ ನೊಹೀಮ್ ಅಡೆಶೋಲಾ (29), ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಅಲ್ಲಂ ಸತ್ಯ ವೆಂಕಟ ಗೌತಮ್ (31), ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಮೂಲದ ಸಾನಬೋಯಿನ ವರುಣ್ ಕುಮಾರ್ (42) ಮತ್ತು ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಮೊಹಮ್ಮದ್ ಮಹಬೂಬ್ ಶರೀಫ್ (36) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಜನ್ಮ ದಿನಕ್ಕೂ ಮುನ್ನ ಅಭಿಮಾನಿಗಳೊಂದಿಗೆ ಸೂಪರ್​ ಸ್ಟಾರ್ ಸೂರ್ಯ ರಕ್ತದಾನ: ವಿಡಿಯೋ ಇಲ್ಲಿದೆ ನೋಡಿ - Suriya Donates Blood

"ಅವರು ಸೈಬರಾಬಾದ್​ನ ನರಸಿಂಗಿ ಪಿಎಸ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಅವರಿಂದ ಎರಡು ಪಾಸ್‌ಪೋರ್ಟ್‌ಗಳು, ಎರಡು ಮೋಟಾರ್‌ಸೈಕಲ್‌ಗಳು, 10 ಮೊಬೈಲ್ ಫೋನ್‌ಗಳು ಮತ್ತು ಇತರೆ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.