ETV Bharat / entertainment

'NTR 31'ನಿಂದ ಬಿಗ್​ ಅಪ್‌ಡೇಟ್ - ಪ್ರಶಾಂತ್ ನೀಲ್ ಚಿತ್ರದ ಶೂಟಿಂಗ್ ಯಾವಾಗ? - NTR31 - NTR31

ಎನ್‌ಟಿಆರ್ - ಪ್ರಶಾಂತ್ ನೀಲ್ ಕಾಂಬೋದಲ್ಲಿ ತಯಾರಾಗುತ್ತಿರುವ 'NTR31' ಚಿತ್ರದಿಂದ ಹೊಸ ಮಾಹಿತಿ ಹೊರಬಿದ್ದಿದೆ. ಚಿತ್ರದ ಶೂಟಿಂಗ್ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

NTR31 UPDATE  JR NTR BIRTHDAY  JR NTR UPCOMING FILMS  TOLLYWOOD
ಪ್ರಶಾಂತ್ ನೀಲ್ ಚಿತ್ರದ ಶೂಟಿಂಗ್ ಯಾವಾಗ (ಕೃಪೆ: ETV Bharat)
author img

By ETV Bharat Karnataka Team

Published : May 20, 2024, 4:31 PM IST

ಹೈದರಾಬಾದ್​: ಸ್ಟಾರ್ ಜೂನಿಯರ್ ಎನ್ ಟಿಆರ್ - ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ 'ಎನ್​ಟಿಆರ್ 31' (ವರ್ಕಿಂಗ್ ಟೈಟಲ್) ಸಿನಿಮಾ ತಯಾರಾಗುತ್ತಿದೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಯಾವುದೇ ಅಪ್ ಡೇಟ್ ಸಿಕ್ಕಿರಲಿಲ್ಲ. ಆದರೆ, ಸೋಮವಾರ (ಮೇ 20) ಎನ್‌ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ನಿರ್ಮಾಪಕರು ಸಖತ್ ಅಪ್‌ಡೇಟ್ ನೀಡಿದ್ದಾರೆ.

ಹೌದು, ಎನ್​ಟಿಆರ್​ 31 ಚಿತ್ರದ ಶೂಟಿಂಗ್ ಆಗಸ್ಟ್ 2024 ರಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ಮಾಣ ಸಂಸ್ಥೆ Mythri Moviemakers ಅಧಿಕೃತವಾಗಿ ಘೋಷಿಸಿದೆ. ತಾರಕ್ ಅವರಿಗೆ ಜನ್ಮದಿನದ ಶುಭಾಶಯಗಳು, ಆಗಸ್ಟ್ 2024 ರಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಪವರ್ ಹೌಸ್ ಯೋಜನೆಗೆ ಸಿದ್ಧರಾಗಿ' ಎಂದು ಟ್ವಿಟರ್​ನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆದರೆ, ಈ ಸಿನಿಮಾದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ.

ಎನ್​ಟಿಆರ್ ಸದ್ಯ ದೇವರ ಪಾರ್ಟ್​ 1 ಮತ್ತು ವಾರ್​ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ದೇವರ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದಾರೆ. ಎನ್‌ಟಿಆರ್ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಈ ಚಿತ್ರದ ಹಾಡು ಬಿಡುಗಡೆ ಮಾಡಲಾಗಿದೆ. ‘ಫಿಯರ್​ ಸಾಂಗ್​’ ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಿರುವ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಾಡು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

NTR31 UPDATE  JR NTR BIRTHDAY  JR NTR UPCOMING FILMS  TOLLYWOOD
ಪ್ರಶಾಂತ್ ನೀಲ್ ಚಿತ್ರದ ಶೂಟಿಂಗ್ ಯಾವಾಗ (ಕೃಪೆ: ETV Bharat)

‘ಫಿಯರ್​ ಸಾಂಗ್​’ ಹಾಡಿಗೆ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಎನರ್ಜಿಟಿಕ್ ಮ್ಯೂಸಿಕ್ ನೀಡಿದ್ದು, ತೆಲುಗಿನಲ್ಲಿ ಖ್ಯಾತ ಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಈ ಹಾಡಿಗೆ ಪವರ್ ಫುಲ್ ಸಾಹಿತ್ಯ ನೀಡಿದ್ದಾರೆ. 'ದೇವರ ಮುಂಗೀಟ ನುವ್ವೆಂತಾ' ಹಾಡು ಸದ್ಯ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳಿಗೆ ಗೂಸ್‌ಬಂಪ್ಸ್ ನೀಡುತ್ತಿದೆ. ದೃಶ್ಯಗಳು ಕೂಡ ಬೇರೆ ಲೆವೆಲ್​ನಲ್ಲಿವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ನಲ್ಲಿ ಮಿಕ್ಕಿಲಿನೇನಿ ಸುಧಾಕರ್, ಕೊಸರಾಜು ಹರಿಕೃಷ್ಣ ಮತ್ತು ನಂದಮೂರಿ ಕಲ್ಯಾಣ್ ರಾಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರು.120 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಅನಿರುದ್ಧ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್ 10, 2024 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.

ಓದಿ: "ನಿನಗಾಗಿ" ಮತ್ತೆ ಬಂದ ದಿವ್ಯಾ ಉರುಡುಗ - Divya Uruduga ninagaagi serial

ETV Bharat Logo

Copyright © 2024 Ushodaya Enterprises Pvt. Ltd., All Rights Reserved.