ಹೈದರಾಬಾದ್: 'ಹ್ಯಾಪಿ ಬರ್ತ್‌ಡೇ ಟು ಯೂ'. ಪ್ರತಿಯೊಬ್ಬರ ಜೀವನದಲ್ಲೂ ವರ್ಷಕ್ಕೊಮ್ಮೆಯಾದರೂ ಹಾಡುವ, ಕೇಳುವ ಸಾಂಗ್ ಇದು. ವಿಶ್ವಾದ್ಯಂತ ಶತಮಾನದಿಂದಲೂ ಇದನ್ನು ಶತಕೋಟಿ ಬಾರಿ ಹಾಡಿರಬಹುದು. ಬರ್ತ್‌ಡೇ ಸೆಲೆಬ್ರೇಶನ್ಸ್, ಗ್ಯಾದರಿಂಗ್ಸ್ ಎಂದು ಜನಸಾಮಾನ್ಯರು, ಸೆಲೆಬ್ರಿಟಿಗಳು, ವಿಶ್ವ ನಾಯಕರು ಸೇರಿದಂತೆ ಪ್ರತಿಯೊಬ್ಬರೂ ಈ ಬರ್ತ್‌ಡೇ ಸಾಂಗ್ ಅನ್ನು ಹಾಡಿರುತ್ತಾರೆ. ಆದರೆ ಈ ಆಕರ್ಷಕ ಗೀತೆಯ ರಚನೆ ಅಥವಾ ಹುಟ್ಟಿನ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?.
ಇದು 19ನೇ ಶತಮಾನದಲ್ಲಿ ಇಬ್ಬರು ಅಮೆರಿಕನ್ ಸಹೋದರಿಯರಾದ ಪ್ಯಾಟಿ ಮತ್ತು ಮಿಲ್ಡ್ರೆಡ್ ಹಿಲ್ ಅವರಿಂದ ಪ್ರಾರಂಭವಾಯಿತು. ಅವರು ತಮ್ಮ ಶಿಶುವಿಹಾರದ ವಿದ್ಯಾರ್ಥಿಗಳಿಗಾಗಿ 'ಗುಡ್ ಮಾರ್ನಿಂಗ್ ಟು ಆಲ್' ಎಂಬ ಹಾಡು ರಚಿಸಿದರು. ಇದು ಇಂಗ್ಲಿಷ್ ಭಾಷೆಯಲ್ಲಿ ವ್ಯಾಪಕವಾಗಿ ಗುರುತಿಸಲ್ಪಡುವ ಹಾಡಾಗುತ್ತದೆ ಎಂಬುದು ಅವರಿಗೂ ತಿಳಿದಿರಲಿಲ್ಲ. 20ನೇ ಶತಮಾನದ ಆರಂಭದಲ್ಲಿ ಇದು ಬರ್ತ್‌ಡೇ ಸಾಂಗ್ ಆಗಿ ಜನಪ್ರಿಯತೆ ಗಳಿಸಿತು. 'ಗುಡ್ ಮಾರ್ನಿಂಗ್ ಟು ಆಲ್' ಸಾಹಿತ್ಯ 'ಹ್ಯಾಪಿ ಬರ್ತ್‌ಡೇ ಟು ಯೂ' ಆಗಿ ರೂಪುಗೊಂಡಿತು. ನಂತರದ್ದು ಇತಿಹಾಸ. ಹ್ಯಾಪಿ ಬರ್ತ್‌ಡೇ ಟು ಯೂ ಜನಪ್ರಿಯತೆ ಬಗ್ಗೆ ನಿಮಗೆ ವಿಶೇಷ ಪರಿಚಯ ಬೇಕೆನಿಸದು.
ಸಹೋದರಿಯರ ಈ ಕಥೆಯು ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿ ಶುರುವಾಯಿತು. ಅಲ್ಲಿ ಅವರು ಸಂಗೀತವನ್ನು ಬಳಸಿಕೊಂಡು ವಿನೂತನ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಿದರು. 1893ರಲ್ಲಿ ಸದ್ಯ ಜನಪ್ರಿಯತೆಯಲ್ಲಿರುವ ಸಾಹಿತ್ಯವನ್ನು ಒಳಗೊಂಡ ಸಾಂಗ್ ಬುಕ್ ಅನ್ನು ಪ್ರಕಟಿಸಿದರು.
ಹ್ಯಾಪಿ ಬರ್ತ್‌ಡೇ ಟು ಯೂ ಸಾಂಗ್ನ ಸಂಪೂರ್ಣ ಸಾಹಿತ್ಯ 1901ರಲ್ಲಿ ಮೊದಲ ಬಾರಿಗೆ ಪ್ರಿಂಟ್ ಆಯಿತು. 1911ರಲ್ಲಿ ಮೊದಲ ಬಾರಿಗೆ ಸಂಗೀತ ಸಂಯೋಜಿಸಲಾಯಿತು. 1930ರ ಹೊತ್ತಿಗೆ, ಹಾಡು ಜನಪ್ರಿಯತೆ ಗಳಿಸಿತು. ಆದರೆ ಹಕ್ಕುಸ್ವಾಮ್ಯ ಸಮಸ್ಯೆಗಳು ಉದ್ಭವಿಸಿದವು.
ಪ್ಯಾಟಿ ಹಿಲ್ ಮತ್ತು ಅವರ ಕುಟುಂಬ ವಿವಿಧ ಪ್ರೊಜೆಕ್ಟ್ಗಳಲ್ಲಿ ಹಾಡಿನ ಬಳಕೆಯನ್ನು ಪ್ರಶ್ನಿಸಿ ಮೊಕದ್ದಮೆಗಳನ್ನು ಹೂಡಿತ್ತು. ಅಂತಿಮವಾಗಿ ಹಕ್ಕುಸ್ವಾಮ್ಯವನ್ನು ಪಡೆದುಕೊಂಡರು. ಆದಾಗ್ಯೂ ಮಾಲೀಕತ್ವವು ಹಲವು ಬಾರಿ ಬದಲಾವಣೆಗಳಾದವು. ಫೈನಲಿ, 1988ರಲ್ಲಿ ವಾರ್ನರ್ ಕಮ್ಯುನಿಕೇಷನ್ಸ್ ಹಕ್ಕುಗಳನ್ನು ಪಡೆದುಕೊಂಡಿತು.
ಹೆಚ್ಚಿನ ಪರವಾನಗಿ ಶುಲ್ಕ ಹಿನ್ನೆಲೆಯಿಂದ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿನ ಬರ್ತ್‌ಡೇ ದೃಶ್ಯಗಳಿಗೆ ಪರ್ಯಾಯ ಮ್ಯೂಸಿಕ್ ಹುಡುಕುವಂತಾಯಿತು. ರಾಯಲ್ಟಿ ಪಾವತಿಸುವುದನ್ನು ತಪ್ಪಿಸೋ ನಿಟ್ಟಿನಲ್ಲಿ ರೆಸ್ಟೋರೆಂಟ್‌ಗಳು ತಮ್ಮದೇ ಆದ ಜಿಂಗಲ್ಸ್ ಅನ್ನೂ ಸಹ ಅಭಿವೃದ್ಧಿಪಡಿಸಿದವು.
ಇದನ್ನೂ ಓದಿ: 'ಟಾಕ್ಸಿಕ್' ನಿರ್ಮಾಪಕರ ಜೊತೆ ಕರಾವಳಿಯಲ್ಲಿ ನಟ ಯಶ್ ಟೆಂಪಲ್ ರನ್: ಕಾರಣವೇನು? - Yash Temple Run
2016ರಲ್ಲಿ ಹಾಡಿಗೆ ಸಂಬಂಧಿಸಿದ ಕಾನೂನು ಹೋರಾಟ ಪೂರ್ಣಗೊಂಡಿತು. ವಾರ್ನರ್ ಮ್ಯೂಸಿಕ್ ಗ್ರೂಪ್ ಪ್ರಕರಣದಲ್ಲಿ ಸೋತು $14 ಮಿಲಿಯನ್ ಮೊತ್ತ ಪಾವತಿಸಬೇಕಾಯಿತು. ಅಂತಿಮವಾಗಿ ಹಾಡು ಸಾರ್ವಜನಿಕರಿಗೆ ಮುಕ್ತವಾಗಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ವ್ಯಕ್ತಿತ್ವದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ರೋಚಕ ಸಂಗತಿ - Indrajit Lankesh on Sudeep
ಕೋವಿಡ್ ಸಂದರ್ಭ ಹ್ಯಾಪಿ ಬರ್ತ್‌ಡೇ ಟು ಯೂ ಸಾಂಗ್ ಹ್ಯಾಂಡ್ ವಾಶ್ ರುಟಿನ್ನ ಭಾಗವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಎರಡು ಬಾರಿ ಹಾಡುವುದರಿಂದ ಕನಿಷ್ಠ 20 ಸೆಕೆಂಡ್ಸ್ ಸಮಯ ಹಿಡಿಯುತ್ತದೆ, ಪರಿಣಾಮಕಾರಿಯಾಗಿ ಕೈ ತೊಳೆಯಲು ಶಿಫಾರಸ್ಸು ಮಾಡಲಾದ ಆ 20 ಸೆಕೆಂಡುಗಳನ್ನು ಆವರಿಸುತ್ತದೆ. ಇದರಿಂದ ವೈರಸ್ ಹರಡುವಿಕೆಯನ್ನು ನಿಯಂತ್ರಿಸಬಹುದು. ಹಾಗಾಗಿ ಹ್ಯಾಂಡ್ ವಾಶ್ ಸಂದರ್ಭ ಈ ಸಾಂಗ್ ಹಾಡಲು ಪ್ರೇರೇಪಿಸಲಾಯಿತು.