ETV Bharat / entertainment

ಬಜೆಟ್ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್​ ಎಂ ಸುರೇಶ್: ನಿರ್ಮಾಪಕ ಉಮೇಶ್ ಬಣಕಾರ್ ಅಸಮಾಧಾನ - ಕೇಂದ್ರ ಬಜೆಟ್

ಬಜೆಟ್​ನಲ್ಲಿ ಚಿತ್ರರಂಗಕ್ಕೆ ಅನುಕೂಲ ಆಗುವ ಯಾವುದೇ ಸೌಲಭ್ಯಗಳಿಲ್ಲ ಎಂದು ಕರ್ನಾಟಕ ಚಿತ್ರ ಮಂಡಳಿ ಅಧ್ಯಕ್ಷ ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕ ಚಿತ್ರಮಂಡಳಿ ಅಧ್ಯಕ್ಷ್ಯ ಅಸಮಾಧಾನ
ಕರ್ನಾಟಕ ಚಿತ್ರಮಂಡಳಿ ಅಧ್ಯಕ್ಷ್ಯ ಅಸಮಾಧಾನ
author img

By ETV Bharat Karnataka Team

Published : Feb 1, 2024, 9:18 PM IST

Updated : Feb 2, 2024, 5:59 PM IST

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್​ ಎಂ ಸುರೇಶ್

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಆದರೆ, ಸಿನಿಮಾರಂಗಕ್ಕೆ ಅನುಕೂಲ ಆಗುವ ಸೌಲಭ್ಯಗಳು ಯಾವುದೂ ಇಲ್ಲ ಎಂದು ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್ ಎಂ ಸುರೇಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಅಗಲಿ ಅಥವಾ ಕೇಂದ್ರ ಕನ್ನಡ ಚಿತ್ರರಂಗಕ್ಕೆ ಯಾವುದೇ ಅನುಕೂಲ ಆಗುವ ಸೌಲಭ್ಯ ನೀಡುತ್ತಿಲ್ಲ. ಕನ್ನಡ ಸಿನಿಮಾಗಳು ಈಗ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಆದರೆ ಚಿತ್ರರಂಗಕ್ಕೆ ಉಪಯೋಗ ಆಗುವ ಸೌಲಭ್ಯಗಳು ಸಿಗುತ್ತಿಲ್ಲ. ಅದರಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರಿಗೆ ಉಪಯೋಗ ಆಗುತ್ತಿಲ್ಲ.

ಇನ್ನು ಕೇಂದ್ರ ಸೆನ್ಸಾರ್ ಮಂಡಳಿ ತಾರತಮ್ಯ ಮಾಡುತ್ತಿದೆ ಅದನ್ನ ಬಿಡುಬೇಕು. ಇದರ ಜೊತೆಗೆ ಕೇಂದ್ರ ಸರ್ಕಾರದಿಂದ ಕನ್ನಡ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಕೋಟ್ಯಂತರ ರೂಪಾಯಿ ಸಿನಿಮಾಗಳಿಂದ ಟ್ಯಾಕ್ಸ್​ ಕಟ್ಟುತ್ತೇವೆ ಹಾಗೇ ಸೆನ್ಸಾರ್​ನಲ್ಲಿ ಒಂದು ಸಿನಿಮಾಗೆ 30 ರಿಂದ 35 ಸಾವಿರ ಹಣ ಕಟ್ಟುತ್ತಿವೆ. ಆದರಿಂದ ನಮಗೆ ಏನು ಪ್ರಯೋಜನವಿಲ್ಲ. ಇದು ಎಲೆಕ್ಷನ್ ಹೊಸ್ತಿಲಲ್ಲಿ ತಲೆ ಇಟ್ಟುಕೊಂಡು ಮಾಡಿರುವ ಬಜೆಟ್. ಸಿನಿಮಾ ರಂಗ ಕೂಡ ಪವರ್ ಫುಲ್ ಅಂತಾ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ ಅಸಮಾಧಾನ ಹೊರ ಹಾಕಿದರು.

ನಿರ್ಮಾಪಕ ಉಮೇಶ್ ಬಣಕಾರ್

ಉಮೇಶ್​ ಬಣಕಾರ್​ ಅಸಮಾಧಾನ: ಇದರ ಜೊತೆಗೆ ಕರ್ನಾಟಕ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಅಸಮಾಧಾನ ಹೊರ ಹಾಕಿದರು. ಪ್ರತಿ ಬಜೆಟ್​ನಲ್ಲಿ ಭಾರತೀಯ ಚಿತ್ರರಂಗ ಹಾಗೂ ಕನ್ನಡ ಚಿತ್ರರಂಗಕ್ಕೆ ಪ್ರಯೋಜನ ಆಗುವಂತೆ ಕೆಲಸ ಮಾಡಬೇಕಿದೆ. ಅದರಲ್ಲಿ ಪೈರಸಿ ಎಂಬ ಪಿಡುಗು ಹೋಗಲಾಡಿಸಲು ಒಂದು ಕಠಿಣವಾದ ಮಸೂದೆ ತರಬೇಕು. ಈ ಬಗ್ಗೆ ದಿವಗಂತ ಮಾಜಿ ಸಿಎಂ ಜಯಲಲಿತಾ ಅವರು ಕೂಡ ಪ್ರಸ್ತಾಪಿಸಿದ್ದರು. ಪ್ರದರ್ಶಕರ ವಲಯದಲ್ಲಿ ಚರ್ಚೆ ಮಾಡಿದಾಗ ಮೊಬೈಲ್​ನಲ್ಲಿ ಸೆರೆ ಹಿಡಿಯುವಂಥರಿಗೆ ಕ್ರಮ ತೆರೆದುಕೊಳ್ಳಬೇಕು ಎಂದಿದ್ದರು.

ಇದರ ಜೊತೆಗೆ ಕೇಂದ್ರ ಸರ್ಕಾರದ ಸೆನ್ಸಾರ್ ಮಂಡಳಿಯಲ್ಲಿ 100 ಕೋಟಿ ರೂಪಾಯಿ ಹಣ ಇದೆ. ಏಕೆಂದರೆ ಒಂದು ಕನ್ನಡ ಸಿನಿಮಾಗೆ ಸೆನ್ಸಾರ್ ಮಾಡೋದಕ್ಕೆ 35 ಸಾವಿರ ಕಟ್ಟಿಸಿಕೊಳ್ಳುತ್ತಿದೆ. ಆ ಹಣವನ್ನ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯಧನದ ರೂಪದಲ್ಲಿ ಕೊಟ್ಟಾಗ ಆ ಹಣ ನಿರ್ಮಾಪಕನ ಕಷ್ಟಕ್ಕೆ ಸಹಾಯ ಆಗುತ್ತೆ. ಈ ಬಗ್ಗೆ ರಾಜ್ಯಸಭಾ ಕೇಂದ್ರ ಸಂಸದರ ಜೊತೆ ಮಾತು ಕಥೆ ಮಾಡಿದ್ದೇನು ಇದು ಜಾರಿಗೆ ಬರಬೇಕು ಅಂತಾ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ ಬಣಕಾರ್ ಒತ್ತಾಯಿಸಿದರು. ಆದರೆ, ಈ ಬಜೆಟ್ ಸಿನಿಮಾ ರಂಗಕ್ಕೆ ಯಾವುದೇ ಉಪಯೋಗ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ತೆರಿಗೆಗಳ ಕುರಿತು ಯಥಾಸ್ಥಿತಿ ಕಾಪಾಡಿರುವ ಕ್ರಮ ಸ್ವಾಗತಾರ್ಹ: ಕಾಸಿಯಾ ಅಧ್ಯಕ್ಷ ಶಶಿಧರ್ ಶೆಟ್ಟಿ

Last Updated : Feb 2, 2024, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.