ETV Bharat / entertainment

ಫೈಟರ್‌: 3 ದಿನದಲ್ಲಿ ₹100 ಕೋಟಿ ಸನಿಹ ತಲುಪಿದ ಹೃತಿಕ್, ದೀಪಿಕಾ ಸಿನಿಮಾ - Fighter Collection

ವೈಮಾನಿಕ ಆ್ಯಕ್ಷನ್ ಸಿನಿಮಾ 'ಫೈಟರ್' ಬಾಕ್ಸ್​ ಆಫೀಸ್​ ಪ್ರಯಾಣ ಉತ್ತಮವಾಗಿದೆ.

Fighter Collection
ಫೈಟರ್ ಕಲೆಕ್ಷನ್​​
author img

By ETV Bharat Karnataka Team

Published : Jan 28, 2024, 12:14 PM IST

'ಪಠಾಣ್' ಸಿನಿಮಾ​ ಖ್ಯಾತಿಯ ನಿರ್ದೇಶಕ ಸಿದ್ಧಾರ್ಥ್ ಆನಂದ್ ಆ್ಯಕ್ಷನ್​​ ಕಟ್​ ಹೇಳಿರುವ ವೈಮಾನಿಕ ಆ್ಯಕ್ಷನ್ ಸಿನಿಮಾ 'ಫೈಟರ್' ಗುರುವಾರ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರುವ ಸಿನಿಮಾ ಬಾಕ್ಸ್ ಆಫೀಸ್​​ ಪ್ರಯಾಣ ಅತ್ಯುತ್ತಮವಾಗಿದೆ. ಶುಕ್ರವಾರದ ಗಣರಾಜ್ಯೋತ್ಸವ ರಜೆಯ ಲಾಭ ಪಡೆದ ಸಿನಿಮಾದ ಕಲೆಕ್ಷನ್​ ಏರಿಕೆ ಕಂಡಿತು. ಆದಾಗ್ಯೂ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರದ ವ್ಯವಹಾರದಲ್ಲಿ ಕೊಂಚ ಕುಸಿತವಾಗಿದೆ.

ಆರಂಭದ ಎರಡು ದಿನಗಳ ಕಲೆಕ್ಷನ್​​​ಗೆ ಹೋಲಿಸಿದರೆ, ಶನಿವಾರದ ಗಳಿಕೆಯಲ್ಲಿ ಶೇ.29.11ರಷ್ಟು ಇಳಿಕೆಯಾಗಿದೆ. 3ನೇ ದಿನ, ಶನಿವಾರ ಭಾರತದಲ್ಲಿ 28 ಕೋಟಿ ರೂಪಾಯಿ ಗಳಿಸಿದೆ. ತೆರೆಕಂಡ ಮೊದಲ ದಿನ 22.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಎರಡನೇ ದಿನ, ಗಣರಾಜ್ಯೋತ್ಸವದಂದು 39.5 ಕೋಟಿ ರೂ. ಕಲೆಕ್ಷನ್​​ ಮಾಡಿದೆ. ಶನಿವಾರ ಶೇ.29.58ರಷ್ಟು ಆಕ್ಯುಪೆನ್ಸಿ ದರದ ಹೊರತಾಗಿಯೂ ಒಟ್ಟಾರೆ ದೇಶೀಯ ಬಾಕ್ಸ್ ಆಫೀಸ್ ಗಳಿಕೆ ಸರಿಸುಮಾರು 90 ಕೋಟಿ ರೂ. ಆಗಿದೆ. ಫೈಟರ್ ಹಲವು ಅಡೆತಡೆಗಳನ್ನು ಎದುರಿಸಿದೆ. ತೆರೆಕಂಡ ಮೊದಲ ದಿನ ಸಕಾರಾತ್ಮಕ ವಿಮರ್ಷೆ ವ್ಯಕ್ತವಾದರೂ ಗಲ್ಫ್ ದೇಶಗಳಲ್ಲಿ ಸಿನಿಮಾಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್: 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​ ಡೇಟ್ ಅನೌನ್ಸ್

ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. 2023ರಲ್ಲಿ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಬ್ಲಾಕ್‌ಬಸ್ಟರ್ 'ಪಠಾಣ್'​​ ನಂತರ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಚಿತ್ರ ಇದಾಗಿದ್ದು, ನಿರೀಕ್ಷೆ ತಲುಪಿದೆ. ಈ ಹಿಂದಿನ ಸಿನಿಮಾದಂತೆ ಫೈಟರ್​ ಕೂಡ ಭರ್ಜರಿ ಸೀಕ್ವೆನ್ಸ್​​ ಹೊಂದಿದೆ. ಬ್ಯಾಂಗ್ ಬ್ಯಾಂಗ್ (2014) ಮತ್ತು ವಾರ್ (2019) ನಂತರ ಸಿದ್ಧಾರ್ಥ್ ಆನಂದ್​ ಮತ್ತು ಹೃತಿಕ್ ರೋಷನ್​ ಅವರ ಮೂರನೇ ಚಿತ್ರವಿದು. ನಟಿ ದೀಪಿಕಾ ಪಡುಕೋಣೆ ಸಹ ಮೂರನೇ ಬಾರಿ ಸಿದ್ಧಾರ್ಥ್ ಆನಂದ್ ಜೊತೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಕು: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಕಲಹ

ಶ್ರೀನಗರ ಕಣಿವೆಯಲ್ಲಿನ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟ ಹಾಕಲು ಏರ್ ಫೋರ್ಸ್ ಹೆಡ್‌ಕ್ವಾರ್ಟರ್ಸ್‌ನಿಂದ ನಿಯೋಜಿಸಲ್ಪಟ್ಟ ಏರ್ ಡ್ರ್ಯಾಗನ್‌ ಯೂನಿಟ್​​ನ ಚಿತ್ರಣವನ್ನು ಈ ಸಿನಿಮಾ ಒದಗಿಸಿದೆ. ನಮ್ಮ ಚಿತ್ರ ಭಾರತೀಯ ಸೇನೆಗೆ ಸಲ್ಲಿಸುತ್ತಿರುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.