ETV Bharat / entertainment

'ಡೈಲಾಗ್ ಹೊಡಿ, ಕೂತ್ಕೋ, ಒಂದಷ್ಟ್​ ಹಣ್ ತಿನ್ನು': ಆರ್ಭಟಿಸುವ ರಜತ್​​ಗೆ ಟಾಂಗ್​ ಕೊಟ್ಟ ಗೌತಮಿ - GAUTHAMI RAJATH CLASH

ಎಂಥಾ ಸಂದರ್ಭಗಳಲ್ಲೂ ಬಹಳ ತಾಳ್ಮೆಯಿಂದ ವರ್ತಿಸುವ ಗೌತಮಿ ಜಾಧವ್​ ಅವರು ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​ ಕಿಶನ್​ ಅವರೆದುರು ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ.

Gauthami Jadav, Rajath kishan Fight
ಗೌತಮಿ, ರಜತ್​ ಫೈಟ್​​ (Photo: Bigg Boss Team)
author img

By ETV Bharat Entertainment Team

Published : Dec 16, 2024, 1:00 PM IST

ಕನ್ನಡ ಕಿರುತೆರೆಯ ಬಿಗ್​ ಬಾಸ್​ ಕಾರ್ಯಕ್ರಮ ಸರಿಸುಮಾರು 80 ದಿನಗಳ ಆಟ ಮುಗಿಸಿದ್ದು, ಫಿನಾಲೆ ಸಮೀಪಿಸುತ್ತಿದೆ. ಆಟ ಮತ್ತಷ್ಟು ರೋಚಕತೆಯಿಂದ ಕೂಡಿದ್ದು, ಸ್ಪರ್ಧಿಗಳ ವರ್ತನೆ ಸಹ ಬದಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ರಜತ್​​ ಕಿಶನ್​ ಮತ್ತು ಗೌತಮಿ ಜಾಧವ್​ ನಡುವೆ ಮಾತಿಗೆ ಮಾತು ಬೆಳೆದಿದ್ದು, ಮುಂದೆ ಏನಾಗಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು.

'ಪಾಸಿಟಿವಿಟಿ ಜಪ ಬಿಟ್ಟು ಕಡೆಗೂ ರೊಚ್ಚಿಗೆದ್ರಾ ಗೌತಮಿ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​​ನಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ರಜತ್​ ಮತ್ತು ಗೌತಮಿ ನಡುವೆ ಮಾತಿಗೆ ಮಾತು ಬೆಳೆದಿರೋದನ್ನು ಕಾಣಬಹುದು.

ಇಡೀ ಬಿಗ್​ ಬಾಸ್​​ ಮನೆಯಲ್ಲಿ ಕಸ ತುಂಬಿಕೊಂಡಿದೆ. 60 ನಿಮಿಷಗೊಳಗಾಗಿ ಸ್ಪರ್ಧಿಗಳು ಮನೆಯನ್ನು ಸ್ವಚ್ಛಗೊಳಿಸಬೇಕು ಎಂದು ಬಿಗ್​ ಬಾಸ್​​ ಸೂಚಿಸಿದ್ದಾರೆ. ಸ್ಪರ್ಧಿಗಳೆಲ್ಲ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ರಜತ್​ ಒಂದು ಬದಿ ಕುಳಿತುಕೊಂಡಿದ್ದು, ಒಬ್ಬರೇ ಸುಮ್ನೆ ಕುಳಿತಿರುವುದನ್ನು ನೋಡಲು ಆಗುತ್ತಿಲ್ಲ ಎಂಬ ಮಾತು ಮನೆಯ ಇತರ ಸ್ಪರ್ಧಿಗಳ ಕಡೆಯಿಂದ ಬಂದಿದೆ.

ಗೌತಮಿ ಮಾತನಾಡಿ, ಡೈಲಾಗ್ ಹೊಡಿ, ಕೂತ್ಕೋ, ಒಂದಷ್ಟ್​ ಹಣ್ ತಿನ್ನು ಎಂದಿದ್ದಾರೆ. ಕೆರಳಿದ ರಜತ್​ ಏನ್​​​ ಮನೆಯಿಂದ ತಂದ್​ ಕೊಟ್ಟಿದ್ದೀಯಾ ನೀನು ಎಂದಿದ್ದಾರೆ. ನಿಮ್ಮಂತೋನಿಗೆ ಹೆದ್ರೋದೆ ಇಲ್ಲ ನಾನು ಎಂದು ಗೌತಮಿ ತಿಳಿಸಿದ್ದಾರೆ. ಗೌತಮಿ ಬಳಿ ಪಿಲ್ಲೋ ಎಸೆದ ರಜತ್​, ಡ್ರಾಮಾ ಮಾಡ್ಕೊಂಡೇ ಬಂದ್ಬುಟ್ಟೆ 12 ವಾರಗಳಿಂದ, ಒಂದ್​ ಬಕೆಟ್​​ ಇನ್ನೊಂದ್​ ಬಕೆಟ್​​​ ಇಡ್ಕೊಂಡಿರೋದನ್ನು ಫಸ್ಟ್​ ಟೈಮ್​​ ನೋಡಿದ್ದು, ನೀನ್​ ದಬಾಕಿರೋದನ್ನು 12 ವಾರಗಳಿಂದ ನೋಡಿದ್ದೀನಿ, ಸಪೋರ್ಟ್​ ಬೇಕು ಅಂತಾ ಯಾರದ್ದೋ ಕಾಲ್ ಹಿಡಿದುಕೊಂಡು ಹೋಗೋದಲ್ಲ, ತಾಕತ್ತಿದ್ರೆ ಇಂಡ್ಯುವಿಶುವಲ್ ಆಗಿ ಅಡು ಎಂದು ರಜತ್​​ ಮಾತಿನ ಮಳೆ ಸುರಿಸಿದ್ದಾರೆ.

ಇದನ್ನೂ ಓದಿ: ಅತ್ಯದ್ಭುತ ನಿರ್ದೇಶನ ಮಾತ್ರವಲ್ಲ, ನೃತ್ಯಕ್ಕೂ ಸೈ ರಾಜಮೌಳಿ : ಜಕ್ಕಣ್ಣನ ಜಬರ್​ದಸ್ತ್​ ಡ್ಯಾನ್ಸ್​ ನೋಡಿ

ತಾಳ್ಮೆ, ಪಾಸಿಟಿವಿಟಿಗೆ ಹೆಸರುವಾಸಿಯಾಗಿರುವ ಗೌತಮಿ ಈ ಬಾರಿ ಮಾತಿಗೆ ಮಾತು ಕೊಟ್ಟಿದ್ದಾರೆ. ಡ್ರಾಮಾಗೆ ತಿರುಗೇಟು ಎಂಬಂತೆ ಡೈಲಾಗ್​ ಹೊಡ್ಕೊಂಡು ನೀವುಗಳೇ ಇಲ್ವಾ ಈ ಮನೆಯಲ್ಲಿ ಎಂದಿದ್ದಾರೆ. ನಡಿಯೋಕೆ ಅಲ್ಲಾ ಗುರು ಈ ಮನೆಗೆ ಬಂದಿರೋದು ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಸಂಪೂರ್ಣ ಸನ್ನಿವೇಶ ನೋಡಲು ವೀಕ್ಷಕರು ಕಾತರರಾಗಿದ್ದಾರೆ.

ಈ ವಾರ ಆಟ ಮುಗಿಸಿದವರು ಶಿಶಿರ್! ಕಳೆದ ಸಂಚಿಕೆಯಲ್ಲಿ ಶಿಶಿರ್​ ಅವರು ಎಲಿಮಿನೇಟ್​ ಆಗಿದ್ದಾರೆ. ಟಫ್​ ಕಂಟಸ್ಟೆಂಟ್​​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಇವರು ಮನೆಯಿಂದ ಹೊರಬಂದಿದ್ದು, ಅಭಿಮಾನಿಗಳಿಗೆ ನೋವುಂಟುಮಾಡಿದೆ. ಬಿಗ್​ ಬಾಸ್​ ಫಿನಾಲೆ ತಲುಪುತ್ತಿರುವ ಹಿನ್ನೆಲೆ, ಇನ್ಮುಂದೆ ನಾಮಿನೇಷನ್​, ಎಲಿಮಿನೇಷನ್​​ ಬಿಸಿ ಜೋರಾಗಿರಲಿದೆ.

ಇದನ್ನೂ ಓದಿ: ವಿಡಿಯೋ: ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್​​ ಭೇಟಿಯಾದ ಉಪೇಂದ್ರ; ಐಕಾನ್​ ಸ್ಟಾರ್​ ಬಿಗಿದಪ್ಪಿದ​​ ರಿಯಲ್​ ಸ್ಟಾರ್​​​

ಬಿಗ್​ ಬಾಸ್​ 50 ದಿನಗಳನ್ನು ಪೂರೈಸಿದ ಹೊತ್ತಲ್ಲಿ ವೈಲ್ಡ್​​ ಕಾರ್ಡ್​ ಮೂಲಕ ಮನೆ ಪ್ರವೇಶಿಸಿದ ರಜತ್​ ಕಿಶನ್​​ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಆದರೆ ಕೆಲವೊಮ್ಮೆ ಹೆಚ್ಚು ಆರ್ಭಟಿಸುವ ಹಿನ್ನೆಲೆ ಅವರ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತವೆ. ಅದರಂತೆ, ಇಂದಿನ ಸಂಪುರ್ಣ ಸಂಚಿಕೆ ವೀಕ್ಷಿಸಲು ವೀಕ್ಷಕರು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.