ETV Bharat / entertainment

ಕೃಷ್ಣಂ ಪ್ರಣಯ ಸಖಿಯ 'ದ್ವಾಪರ' ಸಾಂಗ್​ಗೆ ಮೆಚ್ಚುಗೆ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಗಣಿ - Krishnam Pranaya Sakhi - KRISHNAM PRANAYA SAKHI

ಬಹುನಿರೀಕ್ಷಿತ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ 'ದ್ವಾಪರ' ಸಾಂಗ್​ ಅನಾವರಣಗೊಂಡಿದೆ.

Krishnam Pranaya Sakhi Pictures
ಗೋಲ್ಡನ್ ಸ್ಟಾರ್ ಗಣೇಶ್ - ಮಾಳವಿಕ ನಾಯರ್ (ETV Bharat)
author img

By ETV Bharat Karnataka Team

Published : Jul 23, 2024, 12:56 PM IST

ಸ್ಯಾಂಡಲ್​ವುಡ್​ನ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ'. ಶಿವಂ ಹಾಗೂ ದಂಡುಪಾಳ್ಯ ಸಿನಿಮಾಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ಶ್ರೀನಿವಾಸರಾಜು ಅವರು ಗಣಿ ಅಭಿನಯದ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಬಾರಿ ರೊಮ್ಯಾಂಟಿಕ್ ಜೊತೆಗೆ ಫ್ಯಾಮಿಲಿ ಕಥೆಯನ್ನು ಹೇಳಲು ಸಜ್ಜಾಗಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಂದ ಟಾಕ್ ಆಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಮೂರನೇ ಹಾಡು ಅನಾವರಣಗೊಂಡಿದೆ.

Krishnam Pranaya Sakhi Pictures
'ಕೃಷ್ಣಂ ಪ್ರಣಯ ಸಖಿ'ಯ 'ದ್ವಾಪರ' ಸಾಂಗ್​ ರಿಲೀಸ್ (ETV Bharat)

'ದ್ವಾಪರ' ಸಾಂಗ್​ ರಿಲೀಸ್​: ಈಗಾಗಲೇ 'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಹಾಗೂ 'ಚಿನ್ನಮ್ಮ' ಹಾಡುಗಳು ಬಿಡುಗಡೆಯಾಗಿ ಮಿಲಿಯನ್​​ಗಟ್ಟಲೆ ವೀಕ್ಷಣೆ ಕಂಡು ಜನರ ಮನ ಗೆದ್ದಿವೆ. ಇತ್ತೀಚೆಗೆ 'ದ್ವಾಪರ' ಎಂಬ ಸಾಂಗ್​ ರಿಲೀಸ್​​ ಆಗಿ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿದೆ. ಹಾಡಿನಲ್ಲಿ ಗಣಿ, ಮಲಯಾಳಂ ಮನಮೋಹಿನಿ ಮಾಳವಿಕ ನಾಯರ್ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.

Krishnam Pranaya Sakhi Pictures
'ದ್ವಾಪರ' ಸಾಂಗ್​ ಸೀನ್​​ (ETV Bharat)

2 ಮಿಲಿಯನ್​​ಗೂ ಹೆಚ್ಚು ವೀಕ್ಷಣೆ, ಗಣಿ ಧನ್ಯವಾದ: ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಖತ್ ಟ್ಯೂನ್ ಹಾಕಿದ್ದು, ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗಿರುವ ಸುಮಧುರ ಹಾಡನ್ನು ಎರಡು ಮಿಲಿಯನ್​​ಗೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚಿದ್ದಾರೆ. ಈ ಹಿನ್ನೆಲೆ ಗಣೇಶ್​ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಹಾಡಿನ ಪ್ರೋಮೋ ಶೇರ್ ಮಾಡಿ 'ಈ ಹಾಡನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

Krishnam Pranaya Sakhi Pictures
ಗೋಲ್ಡನ್ ಸ್ಟಾರ್ ಗಣೇಶ್ - ಮಾಳವಿಕ ನಾಯರ್ (ETV Bharat)

ಗಣಿ ನಟನೆಯ 41ನೇ ಚಿತ್ರ: 'ಕೃಷ್ಣಂ ಪ್ರಣಯ ಸಖಿ', ನಟ ಗಣೇಶ್ ಅಭಿನಯದ 41ನೇ ಚಿತ್ರ. ಗಣೇಶ್ ಜೊತೆ ಮಾಳವಿಕ ನಾಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ರಿವೀಲ್​ ಆಯ್ತು ಉಪ್ಪಿ ಅಭಿನಯದ 'ಯುಐ' ಬಿಡುಗಡೆ ದಿನಾಂಕ: ಗುಟ್ಟು ಬಿಟ್ಟುಕೊಟ್ರಾ ನಿರ್ಮಾಪಕರು..! - UI Release Date

ಚಿತ್ರದಲ್ಲಿ 6 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು, ವಿಯೆಟ್ನಾಂ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ: 'ಮಾಡರ್ನ್ ಮಾಸ್ಟರ್ಸ್' ಟ್ರೈಲರ್ ಔಟ್: ಟಾಲಿವುಡ್‌ನಿಂದ ಹಾಲಿವುಡ್‌ ವರೆಗೆ.. ರಾಜಮೌಳಿ ಟ್ಯಾಲೆಂಟ್​ ಬಣ್ಣಿಸಿದ ಸಿನಿ ಪ್ರಮುಖರು - Modern Masters trailer out

ಸದ್ಯ ಹಾಡುಗಳ ಮೂಲಕ ಈಗಾಗಲೇ ಸಿನಿಪ್ರೇಮಿಗಳ ಮನ ಗೆದ್ದಿರುವ 'ಕೃಷ್ಣಂ ಪ್ರಣಯ ಸಖಿ' ಆಗಸ್ಟ್ 15 ರಂದು ತೆರೆಗಪ್ಪಳಿಸಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ 'ಕೃಷ್ಣಂ ಪ್ರಣಯ ಸಖಿ' ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಬರುವ ತಿಂಗಳು ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.