ETV Bharat / entertainment

ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಯೋಗ ಕಲಿಯಲು ಕಾರಣ ಏನೆಂಬುದು ನಿಮಗೆ ಗೊತ್ತೇ? - Rajkumar Yoga - RAJKUMAR YOGA

ದೇಶದೆಲ್ಲೆಡೆ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಯೋಗ ಪ್ರವೀಣ, ಕನ್ನಡ ಚಿತ್ರರಂಗದ ಮೇರು ನಟ ದಿ.ಡಾ.ರಾಜ್​ಕುಮಾರ್‌ ಅವರನ್ನು ಸ್ಮರಿಸಲಾಗುತ್ತಿದೆ.

Rajkumar yoga photo
ರಾಜ್​ಕುಮಾರ್ ಯೋಗಾಭ್ಯಾಸ (ETV Bharat)
author img

By ETV Bharat Karnataka Team

Published : Jun 21, 2024, 12:36 PM IST

ದೇಶದೆಲ್ಲೆಡೆ ಇಂದು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗಾಸನ ಅಥವಾ ಯೋಗಪಟು ಅಂದಾಕ್ಷಣ ಮೊದಲಿಗೆ ನೆನಪಿಗೆ ಬರೋದು ಕನ್ನಡ ಚಿತ್ರರಂಗದ ಮೇರು ನಟ ದಿ.ಡಾ.ರಾಜ್​ಕುಮಾರ್‌. ಅದರಲ್ಲೂ ಕಾಮನಬಿಲ್ಲು ಚಿತ್ರದಲ್ಲಿ ನೈಜವಾಗಿ ಯೋಗ ಮಾಡುವ ಮೂಲಕ ರಾಜ್ ಓರ್ವ ಶ್ರೇಷ್ಠ ನಟ ಮಾತ್ರವಲ್ಲದೇ, ಶ್ರೇಷ್ಠ ಯೋಗಪಟು ಎಂದೂ ಕರೆಯಿಸಿಕೊಂಡರು.

Rajkumar yoga photo
ರಾಜ್​ಕುಮಾರ್ ಯೋಗಾಭ್ಯಾಸ (ETV Bharat)

ಹೌದು, ಈ ಚಿತ್ರದ ಚಿತ್ರೀಕರಣದ ವೇಳೆ ಅಣ್ಣಾವ್ರು ಯೋಗ ಮಾಡುವ ದೃಶ್ಯವನ್ನು ಶೂಟ್ ಮಾಡಬೇಕಿತ್ತು. ಹಾಗಾಗಿ ಮುಂಜಾನೆ ಇಡೀ ಚಿತ್ರತಂಡ ಚಿತ್ರೀಕರಣದಲ್ಲಿ ಭಾಗವಹಿಸಿತ್ತು. ನಿರ್ದೇಶಕ ಚಿ. ದತ್ತುರಾಜ್, ‌‌‌ನಟಿ‌ ಸರಿತಾ ಸೇರಿದಂತೆ ಎಲ್ಲರೂ ಚಳಿಯಲ್ಲಿ ನಡುಗುತ್ತಿದ್ದರು. ಆದರೆ, ರಾಜ್​​ಕುಮಾರ್ ಮಾತ್ರ ಯಾವುದೇ ಚಳಿ, ಗಾಳಿಯನ್ನು ಲೆಕ್ಕಿಸದೇ ಬಹಳ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡಿದ್ದರು. ಇದನ್ನು ಕಂಡ ಚಿತ್ರತಂಡ ಆಶ್ಚರ್ಯಗೊಂಡಿದ್ದರಂತೆ.

Rajkumar yoga photo
ರಾಜ್​ಕುಮಾರ್ ಯೋಗಾಭ್ಯಾಸ (ETV Bharat)

ಡಾ. ರಾಜ್​ಕುಮಾರ್ ಅವರು ಯೋಗವನ್ನು ಹವ್ಯಾಸದ ಜೊತೆಗೆ, ಜೀವನದ ಒಂದು ಭಾಗವಾಗಿಸಿಕೊಂಡಿದ್ದಕ್ಕೆ ಒಂದು ಕಾರಣವಿದೆ. ಸತತ ಶೂಟಿಂಗ್, ಪ್ರಯಾಣ ಎಂದು ಬಳಲಿದ್ದ ರಾಜ್​ ಅವರಿಗೆ 1978ರಲ್ಲಿ ಆಪರೇಷನ್ ಡೈಮಂಡ್ ರಾಕೆಟ್‌ ಸಿನಿಮಾದ ನಂತರ ಮಂಡಿ ನೋವು ಕಾಣಿಸಿಕೊಂಡಿತ್ತು. ಈ‌‌ ಮಂಡಿ ನೋವಿಗೆ ಸಾಕಷ್ಟು ಬಾರಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಆ ಸಮಯದಲ್ಲಿ ಸಂಬಂಧಿಕರೊಬ್ಬರು ಯೋಗ ಮಾಡಿ ಎಂದು ಸಲಹೆ ನೀಡಿದರು.

ಅದರಂತೆ, ನಟಸಾರ್ವಭೌಮ ಯೋಗವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರು. ಯೋಗ ಅವರ ಜೀವನದ ಒಂದು ಪ್ರಮುಖ ಭಾಗವಾಗಿತ್ತು. ಸಾಮಾನ್ಯವಾಗಿ ಓರ್ವ ಮನುಷ್ಯನಿಗೆ 40 ವರ್ಷ ದಾಟುತ್ತಿದ್ದಂತೆ ದೇಹ ದಣಿಯಲು ಶುರುವಾಗುತ್ತೆ. ಆದರೆ, ರಾಜ್ ಅವರು ತಮ್ಮ 50ನೇ ವಯಸ್ಸಿನಲ್ಲೂ ಉತ್ತಮವಾಗಿ ಯೋಗ ಮಾಡುತ್ತಿದ್ದರು. ಹಾಗಾದರೆ ಎಷ್ಟರ ಮಟ್ಟಿಗೆ ಯೋಗವನ್ನು ಅವಲಂಬಿಸಿದ್ದರು ಎಂಬುದನ್ನು ನೀವೇ ಊಹಿಸಿ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಯೋಗ ದಿನಾಚರಣೆ: ಸಿಎಂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡ ನಟಿ ಶ್ರೀಲೀಲಾ - Sreeleela Yoga with CM Siddaramaiah

ಇನ್ನು ರಾಜ್ 50 ವರ್ಷ ದಾಟಿದ ಮೇಲೂ ಆರೋಗ್ಯವಾಗಿ, ಸಖತ್​​ ಫಿಟ್​​ ಆಗಿ ಇದ್ದರು ಎಂದರೆ ಅದಕ್ಕೆ ಯೋಗವೇ ನೇರ ಕಾರಣವಂತೆ. ಯೋಗ ಎನ್ನುವುದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಹಾಯವಾಗಲಿದೆ. ಅವರು ಯೋಗ ಕಲಿತ ಮೇಲೆ ಬೇರೆ ಕಸರತ್ತುಗಳನ್ನ ನಿಲ್ಲಿಸಿಬಿಟ್ಟಿದ್ದರು. ಅಣ್ಣಾವ್ರ ಆಪ್ತರು ಹೇಳುವಂತೆ, ಮನೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರಿಂದ ತಮ್ಮ ದೇಹವನ್ನು ಸಧೃಢವಾಗಿರಿಸಿಕೊಂಡಿದ್ದರು. ಕಾಡುಗಳ್ಳ ವೀರಪ್ಪನ್ ರಾಜ್​ ಅವರನ್ನು ಅಪಹರಿಸಿದಾಗಲೂ ಅವರು ಕಾಡಿನಲ್ಲೇ ಯೋಗ ಮಾಡುತ್ತಿದ್ದರು. ಹೀಗಾಗಿ, 90 ದಿನಗಳ ಕಾಲ ಅರಣ್ಯದಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಯಿತು.

ಇದನ್ನೂ ಓದಿ: ಅಶ್ವಿನಿ ದತ್ ಪಾದ ಸ್ಪರ್ಶಿಸಿದ ಅಮಿತಾಭ್​​​​: ಬಚ್ಚನ್​​ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Aswini Dutt

ತಾವು ಯೋಗ ಮಾಡಿದ್ದಲ್ಲದೇ, ಪತ್ನಿ ಪಾರ್ವತಮ್ಮ ಹಾಗೂ ಪುತ್ರ ಪುನೀತ್ ಅವರಿಗೂ ಯೋಗಾಸನ ಕಲಿಸಿಕೊಟ್ಟಿದ್ದರು ತಮ್ಮ ಸುತ್ತಮುತ್ತಲಿನವರಿಗೂ ಅಣ್ಣಾವ್ರು ಯೋಗ ಹೇಳಿ ಕೊಡುತ್ತಿದ್ದರು ಅನ್ನೋದು ಎಲ್ಲರೂ ಮೆಚ್ಚುವಂಥ ವಿಚಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.