ETV Bharat / entertainment

ಮೊದಲ ದಿನ ನಿರ್ದೇಶಕರು ಹೇಳಿದ್ದನ್ನು ಎಂದಿಗೂ ಮರೆಯುವುದಿಲ್ಲ: ದಿಶಾ ಪಟಾನಿ - DISHA PATANI ABOUT KANGUVA

'ಕಂಗುವಾ' ಪ್ರಚಾರದಲ್ಲಿ ದಿಶಾ ಪಟಾನಿ ಸೂಪರ್ ಆ್ಯಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಅವರು ಹೇಳಿದ್ದೇನು?

disha-patani-about-her-upcoming-movie-kanguva-movie-in-a-recent-interview
ಮೊದಲ ದಿನ ನಿರ್ದೇಶಕರು ಹೇಳಿದ್ದನ್ನು ಎಂದಿಗೂ ಮರೆಯುವುದಿಲ್ಲ: ದಿಶಾ ಪಟಾನಿ (AP)
author img

By ETV Bharat Entertainment Team

Published : Nov 2, 2024, 11:46 AM IST

ಬಾಲಿವುಡ್ ಬೆಡಗಿ ದಿಶಾ ಪಟಾನಿ ಇನ್ನೇನು ಕೆಲವೇ ದಿನಗಳಲ್ಲಿ 'ಕಂಗುವ' ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಭಾರಿ ನಿರೀಕ್ಷೆಗಳ ನಡುವೆ ಚಿತ್ರ ನವೆಂಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಚಾರ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿದ್ದಾರೆ. ಸಿನಿಮಾದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಕಾರ್ಯಕ್ರಮಗಳಲ್ಲಿ ಬಿಚ್ಚಿಡುತ್ತಿದ್ದು, ಪ್ರೇಕ್ಷಕರನ್ನು ಕುತೂಹಲಗೊಳಿಸುತ್ತಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ದಿಶಾ ಈ ಚಿತ್ರದಲ್ಲಿ ನಟಿಸಿರುವ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

"ಅವುಗಳು ನನ್ನ ವೃತ್ತಿಜೀವನದಲ್ಲಿ ಇನ್ನೂ ನಂಬಲಾಗದ ಕ್ಷಣಗಳಾಗಿವೆ. ಏಕೆಂದರೆ ನಾನು ಈ ಚಿತ್ರದಲ್ಲಿ ಹಲವಾರು ಅದ್ಭುತ ವ್ಯಕ್ತಿಗಳು, ನಿರ್ದೇಶಕರು ಮತ್ತು ನಟರೊಂದಿಗೆ ಕೆಲಸ ಮಾಡಿದ್ದೇನೆ. ನಾವೆಲ್ಲರೂ ಬಹಳ ಕಡಿಮೆ ಸಮಯದಲ್ಲಿ ಒಂದು ಕುಟುಂಬದಂತಿದ್ದೆವು. ನಾನು ಎಷ್ಟೇ ಸವಾಲುಗಳನ್ನು ಎದುರಿಸಿದರೂ. ಈ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಮಾಡಿ ಮುಗಿಸಿದ್ದೇನೆ. ನಟರು ಸೆಟ್‌ಗೆ ಬಂದಾಗಲೆಲ್ಲಾ ಚಿತ್ರತಂಡ ಉತ್ತಮ ಸಹಕಾರ ಹಾಗೂ ಕಾಳಜಿ ವಹಿಸಿದೆ ಎಂದು ನೆನಪಿಸಿಕೊಂಡರು. ಬಾಬಿ ದೇವೋಲ್ ಮತ್ತು ಜಗಪತಿ ಬಾಬು ಅವರಂತಹ ಅನೇಕ ದಂತಕಥೆಗಳೊಂದಿಗೆ ಕೆಲಸ ಮಾಡಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ದಿಶಾ ಇದೇ ವೇಳೆ ಹೇಳಿಕೊಂಡಿದ್ದಾರೆ.

ಇನ್ನು 'ಕಂಗುವ' ತಾರಾಗಣದ ವಿಷಯಕ್ಕೆ ಬರುವುದಾದರೆ. ಶಿವ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಸೂರ್ಯ ಜೊತೆಗೆ ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಮುಂತಾದ ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಪೆನ್ ಸ್ಟುಡಿಯೋಸ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸಿವೆ. ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಮ್ಯೂಜಿಕ್​ ಒದಗಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್ ಮತ್ತು ಟ್ರೇಲರ್ ಕೂಡ ಪ್ರೇಕ್ಷಕರನ್ನು ಆಕರ್ಷಿಸಿದೆ. ಸೂರ್ಯ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದನ್ನು ಓದಿ: ಭಾರತದ ಖ್ಯಾತ ವಿನ್ಯಾಸಕಾರ ರೋಹಿತ್ ಬಾಲ್​​​ ​​ ಹೃದಯ ಸ್ತಂಭನದಿಂದ ನಿಧನ: ಕಂಬನಿ ಮಿಡಿದ ಫ್ಯಾಷನ್ ಲೋಕ!

ಆಸ್ಪತ್ರೆಗೆ ದಾಖಲಾದ ದರ್ಶನ್​: 2 ದಿನ ಹಾಸ್ಪಿಟಲ್​ನಲ್ಲೇ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.