ಸ್ಟಾರ್ ಡೈರೆಕ್ಟರ್ ಎಂಬ ಖ್ಯಾತಿ ಗಳಿಸಿದ್ದರೂ ಸಹಜ ವರ್ತನೆಯಿಂದ ಹೆಸರುವಾಸಿಯಾಗಿರುವ ಎಸ್.ಎಸ್ ರಾಜಮೌಳಿ ಅವರೀಗ ತಮ್ಮ ಡ್ಯಾನ್ಸ್ ಮೂಲಕ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನು ಅಚ್ಚರಿಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ರಾಜಮೌಳಿ ತಮ್ಮ ಪತ್ನಿ ರಮಾ ಅವರೊಂದಿಗೆ ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ವೈರಲ್ ವಿಡಿಯೋದಲ್ಲಿ, ಜನಪ್ರಿಯ ದಂಪತಿ ಹಾಡೊಂದಕ್ಕೆ ಬಹಳ ಸುಂದರವಾಗಿ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಮತ್ತು ಚಿತ್ರರಂಗದವರು ಈ ಕ್ಲಿಪ್ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಾಜಮೌಳಿ ಅವರ ಉತ್ಸಾಹಭರಿತ ಅಭಿನಯ, ನೃತ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಇದೊಂದು ಹಿಡನ್ ಟ್ಯಾಲೆಂಟ್ ಎಂದು ಶ್ಲಾಘಿಸುತ್ತಿದ್ದಾರೆ. ಜಕ್ಕಣ್ಣನ ನೃತ್ಯ ಕೌಶಲ್ಯ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದು, ವಿಡಿಯೋಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ನಿರ್ದೇಶಕರ ವೈರಲ್ ವಿಡಿಯೋ ಅವರ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದು, ಇಂಟರ್ನೆಟ್ನಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಾದ್ಯಂತಹ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈಗ, ಬಾಹುಬಲಿ, ಆರ್‌ಆರ್‌ಆರ್‌ನಂತಹ ಅದ್ಭುತ ಸಿನಿಮೀಯ ಅನುಭವ ಒದಗಿಸಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ಆಗಾಗ್ಗೆ ಇಂಥ ವಿಡಿಯೋಗಳು ಮೂಲಕ ಸದ್ದು ಮಾಡುತ್ತಾರೆ. ಅವರ ವೈಯಕ್ತಿಕ ಜೀವನ ಮತ್ತು ಸಹಜ ವರ್ತನೆಯುಳ್ಳ ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಇಚ್ಛಿಸುತ್ತಾರೆ. ಸದ್ಯ ವೈಯಕ್ತಿಕ ಕ್ಷಣದ ವಿಡಿಯೋ ವೈರಲ್ ಆಗಿದ್ದು, ಹೀರೋ ಎಂದು ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಹೀರೋ ಎಂದು ಶ್ಲಾಘಿಸಿದ್ದಾರೆ.
SS Rajamouli🕺 pic.twitter.com/nA0oMfSSnm
— Manobala Vijayabalan (@ManobalaV) December 14, 2024
ಇದನ್ನೂ ಓದಿ: ವಿಡಿಯೋ: ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ; ಐಕಾನ್ ಸ್ಟಾರ್ ಬಿಗಿದಪ್ಪಿದ ರಿಯಲ್ ಸ್ಟಾರ್
ಇನ್ನು, ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಎಸ್ಎಸ್ಎಂಬಿ29'. ತಾತ್ಕಾಲಿಕ ಶೀರ್ಷಿಕೆಯುಳ್ಳ ಈ ಚಿತ್ರದಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಮಹೇಶ್ ಬಾಬು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಸ್ಟಾರ್ ನಟ ನಿರ್ದೇಶಕ ಕಾಂಬಿನೇಶನ್ನ ಸಿನಿಮಾ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: 'ನಾಲ್ಗೆ ಮೇಲೆ ನಿಗಾ ಇರ್ಲಿ, ನೀವೇನು ಮನುಷ್ಯರೋ ಪ್ರಾಣಿಗಳೋ': ರಜತ್, ಧನರಾಜ್ಗೆ ಕಿಚ್ಚನ ಕ್ಲಾಸ್
ರಾಜಮೌಳಿ ಅವರ ಕೊನೆ ಚಿತ್ರ 'ಆರ್ಆರ್ಆರ್' 2022ರ ಮಾರ್ಚ್ನಲ್ಲಿ ತೆರೆಕಂಡು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಬ್ಲಾಕ್ಬಸ್ಟರ್ ಹಿಟ್ ಆಗಿದ್ದಲ್ಲದೇ ಆಸ್ಕರ್ ವೇದಿಕೆಯಲ್ಲೂ ಸದ್ದು ಮಾಡಿತ್ತು. ಎಸ್.ಎಸ್ ರಾಜಮೌಳಿ ಹೆಸರೀಗ ಒಂದು ಅದ್ಭುತ ಬ್ರ್ಯಾಂಡ್ ಅಂತಲೇ ಹೇಳಬಹುದು. ಹಾಗಾಗಿ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅದರಲ್ಲೂ ಮಹೇಶ್ ಬಾಬು ನಟನೆ ಅಂದ್ರೆ ವಿಶೇಷ ಪರಿಚಯ ಬೇಕೆನಿಸದು. ಸಿನಿಮಾ ಬರುವ ವರ್ಷ ತೆರೆಕಾಣುವ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ.