ETV Bharat / entertainment

ದೀಪಿಕಾ ಪಡುಕೋಣೆ ಸಹೋದರಿ ಹೇಗಿದ್ದಾರೆ? ಮುಂಬೈ ಏರ್ಪೋರ್ಟ್‌ನಲ್ಲಿ ಸೆರೆಯಾದ ದೃಶ್ಯ - ಮುಂಬೈ ವಿಮಾನ ನಿಲ್ದಾಣ

ದೀಪಿಕಾ ಪಡುಕೋಣೆ ತಮ್ಮ ಸಹೋದರಿ ಅನಿಶಾ ಪಡುಕೋಣೆ ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅನಿಶಾ ಬಗ್ಗೆ ತೋರಿದ ಕಾಳಜಿ ನೆಟ್ಟಿಗರ ಗಮನ ಸೆಳೆದಿದೆ.

Deepika Padukone
ದೀಪಿಕಾ ಪಡುಕೋಣೆ
author img

By ETV Bharat Karnataka Team

Published : Feb 8, 2024, 3:40 PM IST

ಬಾಲಿವುಡ್‌ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ 'ಫೈಟರ್' ಸಿನಿಮಾ ಯಶಸ್ಸಿನ ಅಲೆಯಲ್ಲಿದ್ದಾರೆ. ಅಮೋಘ ಅಭಿನಯ ಮಾತ್ರವಲ್ಲದೇ ಅತ್ಯುತ್ತಮ 'ಡ್ರೆಸ್ಸಿಂಗ್ ಸೆನ್ಸ್‌'ಗೂ ಇವರು ಹೆಸರುವಾಸಿ. ಇದೀಗ ಮುಂಬೈ ಏರ್​ಪೋರ್ಟ್​​ನಿಂದ ದೀಪಿಕಾ ವಿಡಿಯೋ ಹೊರಬಿದ್ದಿದೆ. ತಮ್ಮ ಸಹೋದರಿ ಅನಿಶಾ ಪಡುಕೋಣೆ ಜೊತೆ ಅವರು ಕಾಣಿಸಿಕೊಂಡರು. ನಟಿಯ ಆಕರ್ಷಕ ಉಡುಗೆ ಮತ್ತು ಸಹೋದರಿಯ ಮೇಲೆ ತೋರಿದ ಕಾಳಜಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ದೀಪಿಕಾ ಮತ್ತು ಅನಿಶಾ ಭಾರತದ ಹೆಸರಾಂತ ಬ್ಯಾಡ್ಮಿಂಟನ್‌ಪಟು ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲಾ ಪಡುಕೋಣೆ ದಂಪತಿಯ ಪುತ್ರಿಯರು. ಇಬ್ಬರು ಸಹೋದರಿಯರು ಅನ್ಯೋನ್ಯ ಬಾಂಧವ್ಯ ಹೊಂದಿದ್ದಾರೆ. ಪರಸ್ಪರರ ಕೆಲಸಗಳನ್ನು ಸದಾ ಬೆಂಬಲಿಸುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಇದು ಕಂಡುಬಂದಿದೆ.

ದೀಪಿಕಾ ಪಡುಕೋಣೆ ಮುಂಬೈ ಏರ್​ಪೋರ್ಟ್​ನಲ್ಲಿ ಮೋಹಕ ಉಡುಗೆಯಲ್ಲಿ ಕಾಣಿಸಿಕೊಂಡರು. ಚೆಕರ್ಡ್ ಓವರ್‌ಕೋಟ್ ಮತ್ತು ಬ್ಲ್ಯೂ ಡೆನಿಮ್‌ ಧರಿಸಿದ್ದರು. ಕೂದಲನ್ನು ಬಿಗಿಯಾಗಿ, ಬನ್​ ಸ್ಟೈಲ್‌ನಲ್ಲಿ ಕಟ್ಟಿದ್ದರು. ಸರಳ ಕೇಶವಿನ್ಯಾಸ ಮತ್ತು ಮಿನಿಮಮ್​ ಮೇಕ್​ಅಪ್​​​ ಅಭಿಮಾನಿಗಳ ಮನಸೆಳೆದಿದೆ. ದಿರಿಸಿಗೆ ಪೂರಕವಾಗಿ ಕಂದು ಬಣ್ಣದ ಸನ್ ಗ್ಲಾಸ್​​ ಮತ್ತು ಬ್ಲ್ಯಾಕ್​ ಶೂ ಧರಿಸಿ ಕಂಗೊಳಿಸಿದರು.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ' ಪ್ರೀ-ರಿಲೀಸ್ ಈವೆಂಟ್​​: ವಿನಯ್ ರಾಜ್​​ಕುಮಾರ್ ಸಿನಿಮಾಗೆ ದೊಡ್ಮನೆ ಸಾಥ್

ಮತ್ತೊಂದೆಡೆ, ಅನಿಶಾ ಪಡುಕೋಣೆ ಗ್ರೀನ್​​ ಜಂಪ್‌ಸೂಟ್‌ ಧರಿಸಿದ್ದರು. ನಿಲ್ದಾಣದ ಟರ್ಮಿನಲ್‌ ಪ್ರವೇಶಿಸುವಾಗ ದೀಪಿಕಾ ಮಾರ್ಗದರ್ಶನ ನೀಡಿದರು. ಸಹೋದರಿಯ ಕೈ ಹಿಡಿದು ಅವರೊಂದಿಗೆ ಮುನ್ನಡೆದರು. 'ಜವಾನ್' ನಟಿ ದೀಪಿಕಾ ಪಡುಕೋಣೆ ಉಡುಗೆ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸಿ ಕಿಸ್ಸಿಂಗ್ ಸೀನ್: 'ಫೈಟರ್​​'ಗೆ ವಾಯುಪಡೆ ಅಧಿಕಾರಿಯಿಂದ ನೋಟಿಸ್

'ಬಾಜಿರಾವ್ ಮಸ್ತಾನಿ' ನಟಿಯ ಇತ್ತೀಚೆಗೆ ತೆರೆಕಂಡ 'ಫೈಟರ್' ಸಿನಿಮಾ ಹಿಟ್ ಆಗಿದೆ. ಹೃತಿಕ್​ ರೋಷನ್ ಜೊತೆಗಿನ ಇವರ ಮೊದಲ ಚಿತ್ರವಿದು.​ ಹೃತಿಕ್​ ಮತ್ತು ನಿರ್ದೇಶಕ ಸಿದ್ಧಾರ್ಥ್​ ಆನಂದ್ ಜೊತೆಯಾಗಿ​ ಮೂರನೇ ಬಾರಿ ಸಿನಿಮಾ ಮಾಡಿದ್ದಾರೆ​. ಫೈಟರ್​ಗೂ ಮುನ್ನ 'ಬ್ಯಾಂಗ್​ ಬ್ಯಾಂಗ್'​ ಮತ್ತು 'ವಾರ್'​ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದೀಪಿಕಾ ಅವರಿಗೂ ಸಹ ಸಿದ್ಧಾರ್ಥ್ ಜೊತೆ ಇದು ಮೂರನೇ ಚಿತ್ರ. 'ಬಚ್ನಾ ಎ ಹಸೀನೋ' ಮತ್ತು 'ಪಠಾಣ್'​​ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರ ಸರಿಸುಮಾರು 180 ಕೋಟಿ ರೂ. ಗಳಿಸಿದೆ. ದೀಪಿಕಾ, ಪ್ರಭಾಸ್ ಜೊತೆ ಕಲ್ಕಿ 2898 ಎಡಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.