ETV Bharat / entertainment

ತಾಯಿಯಾಗಲಿದ್ದಾರಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಸದ್ದು - ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ

ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಹರಡಿದೆ.

Deepika padukone
ದೀಪಿಕಾ ಪಡುಕೋಣೆ
author img

By ETV Bharat Karnataka Team

Published : Feb 24, 2024, 2:26 PM IST

Updated : Feb 24, 2024, 4:52 PM IST

ಇತ್ತೀಚೆಗಷ್ಟೇ ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15 ರಂದು ವಿರುಷ್ಕಾ ದಂಪತಿ ಪುತ್ರ ಅಕಾಯ್​ನನ್ನು ಸ್ವಾಗತಿಸಿದ್ದಾರೆ. ನೆಟ್ಟಿಗರೀಗ ಬಾಲಿವುಡ್​ನ ಮತ್ತೋರ್ವ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಊಹಿಸುತ್ತಿದ್ದಾರೆ. ಆದರೆ, ತಾರಾ ದಂಪತಿ ದೀಪ್​​ವೀರ್​ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚೆಗೆ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಲಂಡನ್ 'BAFTA' ಅವಾರ್ಡ್ಸ್‌ನಲ್ಲಿ ಪ್ರೆಸೆಂಟರ್​ ಆಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಳಿಕ ನಟಿಯ ಗರ್ಭಧಾರಣೆ ಸುದ್ದಿ ಶರವೇಗದಲ್ಲಿ ಹರಡಿದೆ. ಇದೀಗ ಮತ್ತೊಮ್ಮೆ ದೀಪಿಕಾ ಅವರ ನಡೆ ಗರ್ಭಧಾರಣೆಯ ಸುದ್ದಿಗೆ ಪುಷ್ಟಿ ನೀಡಿದೆ.

ಕಳೆದ ರಾತ್ರಿ BAFTA ಅವಾರ್ಡ್ಸ್‌ನಿಂದ ದೀಪಿಕಾ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಿನುಗುವ ಸೀರೆಯುಟ್ಟು ಕಂಗೊಳಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ಗರ್ಭಿಣಿ ಎಂದು ಊಹಿಸುತ್ತಿದ್ದಾರೆ. ಬೇಬಿ ಬಂಪ್​ ಕಾಣಿಸುತ್ತಿದೆ ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಇತ್ತೀಚಿನ ಏರ್​ಪೋರ್ಟ್ ವಿಡಿಯೋ ನೋಡಿದ ನೆಟ್ಟಿಗರು ಸಹ ಇದನ್ನೇ ಹೇಳಿದ್ದರು.

ದೀಪಿಕಾ ಅವರ ವಿಡಿಯೋ ನೋಡಿದ ಅಭಿಮಾನಿಯೊಬ್ಬರು, ಬೇಬಿ ಬಂಪ್​ ಅನ್ನು ಯಾರೂ ಗಮನಿಸಲಿಲ್ಲವೇ? ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್​ ಮಾಡಿ, 'ದೀಪಿಕಾ, ನೀವು ಗರ್ಭಿಣಿಯಾಗಿದ್ದೀರಾ? ದಯವಿಟ್ಟು ಹೇಳಿ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ನಮಗೆ ಸಾಕಾಗಿದೆ, ನೀವು ಗರ್ಭಿಣಿಯಾಗಿದ್ದರೆ ದಯವಿಟ್ಟು ಹೇಳಿ' ಎಂದು ಬರೆದಿದ್ದಾರೆ. ನೆಟ್ಟಿಗರೊಬ್ಬರು ವಿಡಿಯೋದಲ್ಲಿ 'ದೀಪಿಕಾ ಕೇವಲ ಹಿಂದಿನಿಂದ ಪೋಸ್ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಸೋಮು ಸೌಂಡ್ ಇಂಜಿನಿಯರ್' ಮೂಲಕ ಅದೃಷ್ಟ ಪರೀಕ್ಷೆಗಿಳಿದ ಸೂರಿ ಶಿಷ್ಯ

ಭಾನುವಾರ ನಡೆದ 'ಬಾಫ್ಟಾ'ದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ದೇಸಿ ಲುಕ್‌ನಲ್ಲಿ ಬಾಲಿವುಡ್​ ಚೆಲುವೆ ಕಂಗೊಳಿಸಿದ್ದು, ಅಭಿಮಾನಿಗಳು ನಟಿಯ ನೋಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಪ್ರೆಸೆಂಟರ್​​ ಆಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಾಮ್ ಚರಣ್ ಮುಖ್ಯಭೂಮಿಕೆಯ 'ಗೇಮ್ ಚೇಂಜರ್‌' ಅಪ್ಡೇಟ್ಸ್

ಇನ್ನೂ ಪಠಾಣ್​ ಬ್ಯೂಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯದಾಗಿ ಫೈಟರ್​ ಚಿತ್ರದಲ್ಲಿ ಕಾಣಿಸಿಕೊಂಡರು. ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಂಡಿದ್ದರು. ವೈಮಾನಿಕ ಆ್ಯಕ್ಷನ್ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಆ್ಯಕ್ಷನ್​ ಕಟ್​​ ಹೇಳಿದ್ದರು. ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಸಿನಿಮಾ ಯಶ ಕಂಡಿದೆ. ಮುಂದೆ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಇದೇ ಮೊದಲ ಬಾರಿಗೆ ಸ್ಕ್ರೀನ್​​ ಶೇರ್ ಮಾಡುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಮೇ 9ಕ್ಕೆ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

Last Updated : Feb 24, 2024, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.